ಬಾಲಿವುಡ್‌ನ ಕ್ಯೂಟ್ & ಹಾಟ್ ನಟಿ ಅಂದರೆ ಸೋನಂ ಕಪೂರ್ (Sonam Kapoor). ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುವ ಸೋನಂ ಮಗ(Son) ಹುಟ್ಟಿದ ಮೇಲಂತೂ ದಿನಾ ದಿನಾ ಒಂದು ಸುದ್ದಿಯಿಂದ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟೀವ್ ಆಗಿರುವ ನಟಿ ಸೋನಂ ಕಪೂರ್ ಆಗಾಗ್ಗೆ ತಮ್ಮ ಪರ್ಸನಲ್ ಲೈಫ್ ಬಗ್ಗೆ ಹಲವು ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಫ್ಯಾಶನಿಸ್ಟ್ ಸೋನಂ
ಮದುವೆ ಬಳಿಕ ಸೋನಂ ಕಪೂರ್ ಕೊಂಚ ಸಿನಿಮಾಗಳಿಂದ ದೂರವಾದರೂ ಸಹ ಬಣ್ಣದ ಲೋಕದಲ್ಲಿ ಇನ್ನೂ ಕೂಡ ನಿರತವಾಗಿದ್ದಾರೆ. ಫ್ಯಾಶನ್ ಶೋ, ಲಕ್ಸುರಿ ಬ್ರ್ಯಾಂಡ್‌ಗಳ ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾರೆ.
ಇವರನ್ನು ಬಾಲಿವುಡ್ ಫ್ಯಾಶನಿಸ್ಟ್ ಅಂತಾಲೂ ಕರೆಯಲಾಗುತ್ತದೆ. ಮದುವೆ, ಮಗು ಆದಮೇಲೆ ಸೋನಂ ತಮ್ಮ ಫ್ಯಾಶನ್ ಸೆನ್ಸ್ ಅನ್ನು ಇನ್ನೂ ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು. ಫಿಟ್ನೆಸ್ ಆಗಿರಲಿ, ಸ್ಟೈಲ್‌ಸ್ಟೇಟ್‌ಮೆಂಟ್ ಆಗಿರಲಿ ಎಲ್ಲದರಲ್ಲೂ ಸೋನಂ ಪರಿಪೂರ್ಣರಾಗಿ ಕಾಣುತ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ನಟಿಯರು ತಾಯಿಯಾದ ಮೇಲೆ ತಮ್ಮ ಕಂದಮ್ಮಗಳಿಗೆ ಎದೆ ಹಾಲುಣಿಸುವಿಕೆಯಿಂದ ದೂರವಿರುತ್ತಾರೆ ಎಂಬ ಕಲ್ಪನೆ ಜನರಲ್ಲಿದೆ. ಸೌಂದರ್ಯ ಹಾಳಗುತ್ತದೆ ಎಂಬ ದೃಷ್ಟಿಯಿಂದ ನಟಿಯರು ತಮ್ಮ ಮಕ್ಕಳಿಗೆ ಎದೆ ಹಾಲುಣಿಸುವುದಿಲ್ಲ ಎಂಬ ಒಂದು ಅನುಮಾನ ಆಗಿನಿಂದಲೂ ಇದೆ. ಆದರೆ ಈಗಿನ ನಟಿಮಣಿಯರು ಇಂತಹ ಕೆಲಸಗಳಿಗೆ ಪ್ರಚೋದನೆ ನೀಡದೇ, ಮಕ್ಕಳಿಗೆ ಹಾಲುಣಿಸಿ ಎಂಬ ಸಂದೇಶವನ್ನು ಸಾರುತ್ತಿದ್ದಾರೆ. ಅದರಲ್ಲಿ ಒಬ್ಬರು ಬಾಲಿವುಡ್ ನಟಿ ಸೋನಮ್ ಕಪೂರ್.
ಗರ್ಭಧಾರಣೆಯ ನಂತರದ ಜೀವನದ ಬಗ್ಗೆ ಮಾತನಾಡಿದ ಸೋನಂ
ಸೋನಂ ಕಪೂರ್ ಇತ್ತೀಚೆಗೆ ಮ್ಯಾಗಜೀನ್‌ನೊಂದಿಗಿನ ಸಂವಾದದಲ್ಲಿ ತಮ್ಮ ಗರ್ಭಧಾರಣೆಯ ನಂತರದ ಜೀವನದ ಬಗ್ಗೆ ಮಾತನಾಡಿದರು. ಮಗು ಹುಟ್ಟಿದ ನಂತರದ ತೂಕ ಹೆಚ್ಚಳ, ಸ್ತನ್ಯಪಾನ ಇದೆಲ್ಲದರ ಬಗ್ಗೆಯೂ ಸೋನಂ ಕಪೂರ್ ಮಾತನಾಡಿದ್ದಾರೆ.
"ತೂಕ ಹೆಚ್ಚಳಕ್ಕೆ ತಾನು ತಲೆಕಡಿಸಿಕೊಳ್ಳುವುದಿಲ್ಲ"
ಮಗು ಹುಟ್ಟಿದ ನಂತರ ತೂಕ ಇನ್ನೂ ಹಾಗೆ ಇದ್ದರೆ ಮಹಿಳೆಯರಿಗೆ ಕಾಮೆಂಟ್ ಮಾಡುವ ಜನಗಳಿಗೇನೂ ಕಮ್ಮಿ ಇರಲ್ಲ. ಆದರೆ ಈ ಕಾಮೆಂಟ್ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ ಅಂತಾ ಸೋನಂ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ತೂಕವನ್ನು ಸಮತೋಲದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ. ಆದರೂ ಕೂಡ ಅಲ್ಲೂ ನಾವು ತೂಕವನ್ನು ಹೆಚ್ಚಿಸಿಕೊಳ್ಳುತ್ತೇವೆ. ಆದರೆ ಮಗು ಹುಟ್ಟಿದ ನಂತರ ಒಂದೇ ಬಾರಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಅವಶ್ಯಕವೂ ಅಲ್ಲ ಅಂತಾ ಸೋನಮ್ ಹೇಳಿದ್ದಾರೆ.
ಗರ್ಭಧಾರಣೆ ನಂತರ ಸುಮಾರು ದಿನ, ವರ್ಷ ಮಗುವಿನ ಆರೈಕೆಯಲ್ಲಿ ಪ್ರತಿ ಮಹಿಳೆ ನಿರತಳಾಗಿರುತ್ತಾಳೆ. ನಮ್ಮ ದೇಹ ಕೂಡ ಇದರಿಂದಾಗಿ ಒಂದೇ ರೀತಿ ಇರುತ್ತದೆ. ನಾನು ಈ ತೂಕದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಈಗ ನನಗೆ ಮುಖ್ಯ ನನ್ನ ಮಗು.
"ನಾನಿನ್ನೂ ಮಗನಿಗೆ ಸ್ತನ್ಯಪಾನ ಮಾಡುತ್ತಿದ್ದೇನೆ"
ನಾನು ನನ್ನ ಮಗನಿಗೆ ಇನ್ನೂ ಸ್ತನ್ಯಪಾನ ಮಾಡಿಸುತ್ತಿದ್ದೇನೆ ಮತ್ತು ಕನಿಷ್ಠ ಒಂದು ವರ್ಷದವರೆಗೆ ಎದೆ ಹಾಲುಣಿಸುವುದನ್ನು ಮುಂದುವರೆಸಲು ನಾನು ಬಯಸುತ್ತೇನೆ.
ಹಾಲುಣಿಸುವಾಗ ಮಹಿಳೆಯರಿಗೆ ಸಹಜವಾಗಿಯೇ ದೇಹಕ್ಕೆ ಆಹಾರ, ವಿಶ್ರಾಂತಿ ಮತ್ತು ಶಕ್ತಿಯ ಅಗತ್ಯವಿರುತ್ತದೆ. ನಾನು ಯಾವುದೇ ಕ್ರೇಜಿ ಡಯಟ್ ಫಾಲೋ ಮಾಡುತ್ತಿಲ್ಲ. ಉತ್ತಮ ಆಹಾರವನ್ನು ಸೇವಿಸುತ್ತಿದ್ದೇನೆ.
ಡಯಟ್ ಬದಲಿಗೆ ನಾನು ವ್ಯಾಯಾಮ ಮಾಡುತ್ತಿದ್ದೇನೆ. ನನ್ನ ಗರ್ಭಾವಸ್ಥೆಯಲ್ಲಿ ನಾನು ನನ್ನ ಬಗ್ಗೆ ಕಾಳಜಿ ವಹಿಸಿದ್ದೇನೆ ಮತ್ತು ನಾನು ಅದನ್ನು ಇನ್ನೂ ಕೂಡ ಮುಂದುವರಿಸಲಿದ್ದೇನೆ ಎಂದು ಸೋನಂ ಹೇಳಿದ್ದಾರೆ.
ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಸೋನಂ ಕಪೂರ್ 2018ರಲ್ಲಿ ಆನಂದ್ ಅಹುಜಾ ಜೊತೆ ಹಸೆಮಣೆ ಏರಿದ್ದರು.
ಅನಿಲ್ ಕಪೂರ್ ಪುತ್ರಿ ಸೋನಂ ಆಗಸ್ಟ್ 20, 2022ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೋನಂ ಕಪೂರ್ ದಂಪತಿ ತಮ್ಮ ಮಗನಿಗೆ ʻವಾಯು ಕಪೂರ್ ಅಹುಜಾʼ ಎಂದು ಸಹ ಹೆಸರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ