LGBTQ ಸಮುದಾಯದ ವಿರುದ್ದ ಬಿಜೆಪಿ ಶಾಸಕ ನೀಡಿದ ಹೇಳಿಕೆ ವಿರುದ್ಧ ನಟಿ ಸೋನಮ್ ಕಪೂರ್ ಆಕ್ರೋಶ

ನಾವು ಭಾರತದಲ್ಲಿ ಅಸ್ತಿತ್ವದಲ್ಲಿದ್ದೇವೆ ಎಂಬ ವಿವರವಾದ ಪೋಸ್ಟ್ ಹಂಚಿಕೊಂಡ ಸೋನಮ್ ಅಜ್ಞಾನಿ ಅನಕ್ಷರಸ್ಥ ಮತ್ತು ದ್ವೇಷಿಸುವ ಹೇಳಿಕೆ ಎಂದು ಬರೆದಿದ್ದಾರೆ

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಿಜೆಪಿ ಶಾಸಕ ಸುಧೀರ್ ಮುಂಗಂಟಿವಾರ್ (BJP MLA Sudhir Mungantiwar) ಇತ್ತೀಚೆಗೆ ಎಲ್‌ಜಿಬಿಟಿಕ್ಯೂ ಸಮುದಾಯದ (LGBTQ community) ವಿರುದ್ಧ ನೀಡಿದ ಹೇಳಿಕೆಗಳು ತೀವ್ರವಾದ ಕಟು ಟೀಕೆಗೆ (Scrutiny) ಒಳಗಾಗಿರುವುದು ನಮಗೆಲ್ಲಾ ಈಗಾಗಲೇ ಗೊತ್ತಿರುವ ವಿಚಾರವೇ ಆಗಿದೆ. ಈ ರಾಜಕೀಯ ನಾಯಕರ ಹೇಳಿಕೆಗೆ ಕೇವಲ ಒಂದು ಸಮುದಾಯದ ಸದಸ್ಯರು ಮಾತ್ರವಲ್ಲದೇ, ದೇಶದಾದ್ಯಂತ ಅನೇಕರು ಇದರ ವಿರುದ್ಧವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಬಹಳ ಕಡಿಮೆ ಬಾಲಿವುಡ್ (Bollywood) ನಟ ಮತ್ತು ನಟಿಯರು ಈ ರಾಜಕಾರಿಣಿಗಳ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದನ್ನು ನಾವು ನೋಡುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ವ್ಯಕ್ತಿ, ಯಾವುದೇ ಸಮುದಾಯದ ಜನರನ್ನು ಕುರಿತು ಮಾಡುವಂತಹ ಹೇಳಿಕೆಗಳು(Statements ) ಅನೇಕರಿಗೆ ನೋವುಂಟು (Hurtful) ಮಾಡುತ್ತವೆ ಮತ್ತು ಇಂತಹ ಹೇಳಿಕೆಗಳನ್ನು ಬಹಿರಂಗವಾಗಿ ಖಂಡಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಏನು ಪ್ರತಿಕ್ರಿಯೆ
ಇತ್ತೀಚೆಗೆ ಬಿಜೆಪಿ ಶಾಸಕ ಸುಧೀರ್ ಮುಂಗಂಟಿವಾರ್ ನೀಡಿದ ಹೇಳಿಕೆಗೆ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳಾದ ಮತ್ತು ನಟಿಯಾದ ಸೋನಮ್ ಕಪೂರ್ ಮುಂಗಂಟಿವಾರ್ ಹೇಳಿಕೆಗಳ ಬಗ್ಗೆ ಏನು ಪ್ರತಿಕ್ರಿಯೆ ನೀಡಿದ್ದಾರೆ ನೀವೇ ನೋಡಿ.

ಮುಂಗಂಟಿವಾರ್ ಹೇಳಿದ್ದೇನು ಗೊತ್ತೇ?
ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾಲಯ ಕಾಯ್ದೆ, 2016 (ಮೂರನೇ ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಮುಂಗಂಟಿವಾರ್ ಮಾತನಾಡುತ್ತಿದ್ದರು, ಈ ಮಸೂದೆಯು ವಿಶ್ವವಿದ್ಯಾಲಯ ಮಂಡಳಿಗಳಲ್ಲಿ ಎಲ್‌ಜಿಬಿಟಿಕ್ಯೂಐಎ ಸಮುದಾಯ ಸದಸ್ಯರನ್ನು ಸೇರಿಸುವ ಬಗ್ಗೆ ಇತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Video: ಲಂಡನ್‌ನಲ್ಲಿರುವ ಸೋನಮ್ ಕಪೂರ್​ರ ಐಷಾರಾಮಿ ಮನೆಯನ್ನು ಒಮ್ಮೆ ನೀವು ನೋಡಿ..!

ಎಲ್‌ಜಿಬಿಟಿಕ್ಯೂಐಎ ಸಮುದಾಯ ಮತ್ತು ಸಮಾನ ಅವಕಾಶವನ್ನು ಎಲ್ಲರಿಗೂ ನೀಡುವುದರ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ ಶಾಸಕ ಮುಂಗಂಟಿವಾರ್ "ನೀವು ಲೆಸ್ಬಿಯನ್ ಮತ್ತು ಸಲಿಂಗಕಾಮಿಗಳನ್ನು ಸದಸ್ಯರಾಗಿ ನೇಮಿಸಿಕೊಳ್ಳಲಿದ್ದೀರಿಯೇ? ಈ ಬಗ್ಗೆ ಜಂಟಿ ವೈದ್ಯಕೀಯ ಸಮಿತಿ ಸ್ಥಾಪಿಸಬಾರದೇ? ಇದು ದ್ವಿಲಿಂಗಿ ಮತ್ತು ಅಲೈಂಗಿಕ ಸಂಬಂಧಗಳನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ಇವುಗಳನ್ನು ಯಾರೂ ಇನ್ನೂ ವ್ಯಾಖ್ಯಾನಿಸಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ತಪ್ಪು ಮಾಹಿತಿ ಪಡೆದ ಮುಂಗಾಟಿವಾರ್ ನಂತರ ಅಲೈಂಗಿಕ ಸಂಬಂಧಗಳನ್ನು ಪ್ರಶ್ನಿಸಲು ಹೋದರು. ಅವರು "ಅಲೈಂಗಿಕ ಸಂಬಂಧಗಳು. ಯಾರೂ ಅದನ್ನು ವ್ಯಾಖ್ಯಾನಿಸಿಲ್ಲ. ಆದ್ದರಿಂದ ಒಬ್ಬ ವ್ಯಕ್ತಿಯು ಪ್ರಾಣಿಯೊಂದಿಗೆ ಅಲೈಂಗಿಕ ಸಂಬಂಧಗಳನ್ನು ಹೊಂದಿದ್ದರೆ, ಪ್ರಾಣಿಯು ಬಂದು ಅಲೈಂಗಿಕ ಸಂಬಂಧವಿತ್ತು ಎಂದು ಪ್ರಮಾಣೀಕರಿಸುತ್ತದೆಯೇ? ಏನು ನಡೆಯುತ್ತಿದೆ ಇಲ್ಲಿ? ಎಂದು ಕೇಳಿದರು.

ಸೋನಮ್ ಆಕ್ರೋಶ
ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ ಮತ್ತು ಸಮುದಾಯದ ಸದಸ್ಯರನ್ನು ಕೆರಳಿಸಿದ ಮುಂಗಂಟಿವಾರ್ ಹೇಳಿಕೆಗೆ ನಟಿ ಸೋನಮ್ ಕಪೂರ್ ತೀವ್ರವಾಗಿ ಖಂಡಿಸಿದರು. ಸಚಿವರ ಹೇಳಿಕೆಗಳ ಬಗ್ಗೆ “ಹೌದು, ನಾವು ಭಾರತದಲ್ಲಿ ಅಸ್ತಿತ್ವದಲ್ಲಿದ್ದೇವೆ” ಎಂಬ ವಿವರವಾದ ಪೋಸ್ಟ್ ಹಂಚಿಕೊಂಡ ಸೋನಮ್, "ಅಜ್ಞಾನಿ, ಅನಕ್ಷರಸ್ಥ ಮತ್ತು ದ್ವೇಷಿಸುವ ಹೇಳಿಕೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: LGBT+ ಮದುವೆಗೂ ಇನ್ಮೇಲೆ Shaadi.com ನಲ್ಲಿ ಅವಕಾಶ, ಸಂಗಾತಿ ಹುಡುಕೋಕೆ ಅವ್ರಿಗೂ ಸಹಕಾರ ನೀಡಲು ಸಜ್ಜು

ತಿದ್ದುಪಡಿ ಮಸೂದೆ
ಇನ್ನೊಂದೆಡೆ, ಮುಂಗಂಟಿವಾರ್ ಆಕ್ಷೇಪಣೆಗಳಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾಮಂತ್ ಉತ್ತರಿಸಿದರು. "ಸಮಾನ ಅವಕಾಶಗಳ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಹಲವಾರು ತೀರ್ಪುಗಳು ಈಗಾಗಲೇ ಬಂದಿವೆ. ಈ ವಿಷಯವನ್ನು ಮಾತ್ರ ಸೂಚಿಸುವ ಮೂಲಕ, ಸದಸ್ಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಮಾಡುತ್ತಿರುವುದು ಹೊಸದೇನೂ ಇಲ್ಲ, ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ಕಾನೂನುಗಳನ್ನು ಮಾಡಲಾಗಿದೆ. ತಜ್ಞರೊಂದಿಗೆ ಚರ್ಚಿಸಿದ ನಂತರವೇ ತಿದ್ದುಪಡಿ ಮಸೂದೆ ತಂದಿದ್ದೇವೆ" ಎಂದು ಹೇಳಿದರು.

ಸುದ್ದಿ ಮಾಧ್ಯಮದ ಪ್ರಕಾರ ಬಿಜೆಪಿ ಈ ಮಸೂದೆಗೆ ತಿದ್ದುಪಡಿಗಳನ್ನು ವಿರೋಧಿಸುತ್ತಿದೆ ಮತ್ತು ಕೆಲವು ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೆಲ ರಾಜ್ಯ ಸರ್ಕಾರಗಳ ಪ್ರಯತ್ನಗಳು ಇದಾಗಿವೆ ಎಂದು ಆರೋಪಿಸಿದ್ದಾರೆ.
Published by:vanithasanjevani vanithasanjevani
First published: