Sonam Kapoor: ಒಂದು ಬಿಸಿನೀರಿನ ಬಾಟಲಿ ಮತ್ತು ಶುಂಠಿ ಟೀ ಇಂದ ಎಲ್ಲರ ಬಾಯಿ ಮುಚ್ಚಿಸಿದ ಸೋನಮ್ ಕಪೂರ್ !

Sonam Kapoor: ಸಾಮಾಜಿಕ ಜಾಲತಾಣಗಳ ತುಂಬಾ ಸೋನಮ್ ಗರ್ಭಿಣಿಯಾಗಿದ್ದಾಳೆ ಎನ್ನುವುದೇ ಹಾಟ್ ನ್ಯೂಸ್. ಅದನ್ನು ಬಿಟ್ಟು ಜನರಿಗೆ ಮಾತನಾಡೋಕೆ ಬೇರೆ ವಿಚಾರವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇದೆಲ್ಲಾ ಚರ್ಚೆಯಾಯ್ತು. 

ಸೋನಂ ಕಪೂರ್

ಸೋನಂ ಕಪೂರ್

  • Share this:
Sonam Kapoor: ಚಿತ್ರ ನಟ ನಟಿಯರ ಬಗ್ಗೆ ರೂಮರ್​ಗಳಿಗೇನೂ ಕೊರತೆ ಇಲ್ಲ. ಅವರು ಎದ್ದರೂ ಕೂತರೂ ಅದೊಂದು ಸುದ್ದಿ, ಅದಕ್ಕೊಂದು ಅರ್ಥ ಇರುತ್ತದೆ. ಅಂಥಾ ಪರಿಸ್ಥಿತಿಯಲ್ಲಿ ದೀರ್ಘಕಾಲದ ನಂತರ ತವರು ಮನೆಗೆ ಬಂದ ಸೋನಮ್ ಕಪೂರ್ ರನ್ನು ಟ್ರೋಲ್​ಗಳು ಸುಮ್ಮನೆ ಬಿಡುತ್ತವೆಯೇ. ಆಕೆ ಏರ್ಪೋರ್ಟ್​ನಲ್ಲಿ ಕಂಡಿದ್ದೇ ತಡ, ಆಕೆ ಲೂಸ್ ಆಗಿರುವ ಬಟ್ಟೆ ಧರಿಸಿದ್ದಾಳೆ, ಖಂಡಿತಾ ಗರ್ಭಿಣಿ ಇರುತ್ತಾಳೆ ಎಂದೇ ಜನ ನಿರ್ಧರಿಸಿಬಿಟ್ಟಿದ್ದರು. ಸಾಮಾಜಿಕ ಜಾಲತಾಣಗಳ ತುಂಬಾ ಸೋನಮ್ ಗರ್ಭಿಣಿಯಾಗಿದ್ದಾಳೆ ಎನ್ನುವುದೇ ಹಾಟ್ ನ್ಯೂಸ್. ಅದನ್ನು ಬಿಟ್ಟು ಜನರಿಗೆ ಮಾತನಾಡೋಕೆ ಬೇರೆ ವಿಚಾರವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇದೆಲ್ಲಾ ಚರ್ಚೆಯಾಯ್ತು. ಈ ಬಗ್ಗೆ ಖುದ್ದು ಸೋನಂ ಕಪೂರ್ ಆಗ್ಲೀ, ಆಕೆಯ ಕುಟುಂಬ ವರ್ಗವಾಗಲೀ ಏನೂ ಪ್ರತಿಕ್ರಿಯೆ ನೀಡಲೇ ಇಲ್ಲ. ಅವರೇನೂ ಹೇಳಿಲ್ಲ ಅಂತ ತಮ್ಮ ಅಂತೆ ಕಂತೆಗಳ ಸಂತೆಗೆ ಜನ ರೆಕ್ಕೆ ಪುಕ್ಕ ಕಟ್ಟುತ್ತಲೇ ಹೋದ್ರು. ಇದರ ಬಗ್ಗೆ ಸೋನಂ ಆಗ್ಲೀ ಅವರ ಆಪ್ತರಾಗ್ಲೀ ತಲೆ ಕೆಡಿಸಿಕೊಳ್ಳಿಲ್ಲ.

ಆದ್ರೆ ಇನ್ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ಮೊದಲ ದಿನ ಪೀರಿಯಡ್​ಗೆ ಬಿಸಿ ನೀರಿನ ಬಾಟಲಿ ಮತ್ತು ಶುಂಠಿ ಚಹಾ ಅತ್ಯುತ್ತಮ ಎಂದು ಬರೆದುಕೊಂಡಿದ್ದಾರೆ ಸೋನಂ. ಈ ಒಂದು ಪೋಸ್ಟ್ ನಿಂದ ಅವರ ಪ್ರೆಗ್ನೆನ್ಸಿ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

Sonam Kapoor shuts rumours of pregnancy through Instagram post of hot water bottle ginger tea and period.
ಚಿತ್ರ: ಸೋನಂ ಕಪೂರ್ ಇನ್ಸ್ಟಾಗ್ರಾಮ್


ಋತುಚಕ್ರದ ಆರಂಭದ ದಿನಗಳಲ್ಲಿ ಬಿಸಿ ನೀರಿನ ಬಾಟಲ್ ಮತ್ತು ಶುಂಠಿಯ ಟೀ ಎರಡೂ ಬಹಳ ಒಳ್ಳೆಯದು ಎನ್ನುವ ಟಿಪ್ ಕೂಡಾ ಈ ಮೂಲಕ ಕೊಟ್ಟಿದ್ದಾರೆ ಸೋನಂ. ಪ್ಯಾಡ್​ ಮ್ಯಾನ್ ಎನ್ನುವ ಚಿತ್ರದ ಮೂಲಕ ಹೆಣ್ಣುಮಕ್ಕಳ ಋತುಚಕ್ರದ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸೋ ಪ್ರಯತ್ನದಲ್ಲೂ ಸೋನಂ ಭಾಗಿಯಾಗಿದ್ರು. ಇದಲ್ಲದೇ ಆಗಾಗ ಹೆಣ್ಣುಮಕ್ಕಳ ಆರೋಗ್ಯ, ಸ್ವಾತಂತ್ರ್ಯ, ಆಯ್ಕೆ ಮತ್ತು ಬದುಕಿನ ಬಗ್ಗೆಯೂ ಸೋನಂ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಸೋನಂ ಈ ಸ್ಟೇಟಸ್​ನಿಂದ ಎಲ್ಲಾ ಚರ್ಚೆಗಳು ಮುಕ್ತಾಯವಾದಂತಾಗಿದೆ.

ಇದನ್ನೂ ಓದಿ: Sarpatta Parambarai Movie Review: ಸಖತ್ ಸೌಂಡ್ ಮಾಡ್ತಿದೆ ಬಾಕ್ಸಿಂಗ್ ಮೇಲಿನ ಪಾ ರಂಜಿತ್ ಚಿತ್ರ ‘ಸರ್ಪಟ್ಟ ಪರಂಬರೈ’

ಲಾಕ್​ಡೌನ್ ಸಂದರ್ಭದಲ್ಲಿ ಸೋನಂ ಲಂಡನ್​ನಲ್ಲಿ ತಮ್ಮ ಪತಿ ಆನಂದ್ ಜೊತೆಗೇ ಇದ್ದರು. ಇಷ್ಟು ದೀರ್ಘಕಾಲ ಮುಂಬೈನ ತನ್ನ ಕುಟುಂಬದಿಂದ ದೂರ ಉಳಿದಿದ್ದು ಬಹಳ ಬೇಸರ ತಂದಿದೆ ಎಂದಿದ್ದರು ಸಾವರಿಯಾ ನಟಿ. ಆದ್ರೆ ಲಂಡನ್​ನಲ್ಲಿ ಇದ್ದಷ್ಟು ದಿನವೂ ತಾನೇ ಮನೆಯನ್ನು ಸ್ವಚ್ಛಗೊಳಿಸೋದು, ಅಡುಗೆ ಮಾಡೋದು, ಮನೆಯೊಳಗೆ ಊಟ ಮಾಡೋಕೂ ರೆಡಿಯಾಗೋದು.. ಈ ರೀತಿಯ ಕೆಲಸಗಳು ತನಗೆ ಬಹಳ ಸ್ವಾತಂತ್ರ್ಯ ತಂದುಕೊಟ್ಟಂತೆ ಭಾಸವಾಯ್ತು ಎಂದಿದ್ದರು ನಟಿ ಸೋನಂ ಕಪೂರ್.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: