HOME » NEWS » Entertainment » SONAM KAPOOR SAYS YES I AM PRIVILEGED THATS NOT AN INSULT AE

Sonam Kapoor: ಸ್ಟಾರ್ ಕಿಡ್​ ಎನಿಸಿಕೊಳ್ಳುವುದು ಅವಮಾನ ಅಲ್ಲ ಎಂದ ಸೋನಮ್ ಕಪೂರ್​: ಮತ್ತೆ ಟ್ರೋಲ್​ ಮಾಡಿದ ನೆಟ್ಟಿಗರು..!

Nepotism: ಈಗಲೂ ಸಹ ಸೋನಮ್ ಕಪೂರ್​ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಕುರಿತಾಗಿ ಮಾತನಾಡಿದ್ದು, ಮತ್ತೆ ಟ್ರೋಲ್​ ಆಗುತ್ತಿದ್ದಾರೆ. ಅಪ್ಪಂದಿರ ದಿನದಂದು ಮಾಡಿರುವ ಟ್ವೀಟ್​ನಿಂದಾಗಿ ನೆಟ್ಟಿಗರು ನಟಿಯ ವಿರುದ್ಧ ಗರಂ ಆಗಿದ್ದಾರೆ.

Anitha E | news18-kannada
Updated:June 22, 2020, 9:03 AM IST
Sonam Kapoor: ಸ್ಟಾರ್ ಕಿಡ್​ ಎನಿಸಿಕೊಳ್ಳುವುದು ಅವಮಾನ ಅಲ್ಲ ಎಂದ ಸೋನಮ್ ಕಪೂರ್​: ಮತ್ತೆ ಟ್ರೋಲ್​ ಮಾಡಿದ ನೆಟ್ಟಿಗರು..!
ಸೋನಮ್​ ಕಪೂರ್​
  • Share this:
ಬಾಲಿವುಡ್​ನ ಪ್ರತಿಭಾವಂತ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಗಲಿಕೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ವಜನಪಕ್ಷಪಾತ ಹಾಗೂ ಸ್ಟಾರ್​ ಕಿಡ್ಸ್ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ. ಇದೇ ವೇ ಳೆ ಸ್ಟಾರ್​ ಕಿಡ್ಸ್ ಸಿನಿಮಾಗಳನ್ನು ಬಹಿಷ್ಕರಿಸಿ ಅನ್ನೋ ಅಭಿಯಾನ ಸಹ ನಡೆಯುತ್ತಿದೆ. ಕಾಫಿ ವಿತ್​​ ಕರಣ್​ ಕಾರ್ಯಕ್ರಮದಲ್ಲಿ ಸೋನಮ್​ ಕಪೂರ್​, ನಟ ಸುಶಾಂತ್​ ಸಿಂಗ್​ ಅವರನ್ನು ವ್ಯಂಗ್ಯ ಮಾಡಿದ ಬಗ್ಗೆಯೂ ಅಸಮಧಾನ ವ್ಯಕ್ತವಾಗುತ್ತಿದೆ. 

ಬೆರಳೆಣಿಕೆ ಹಿಟ್ ಸಿನಿಮಾಗಳನ್ನು ನೀಡಿರುವ ಸೋನಮ್​ ಕಪೂರ್​, ಸುದ್ದಿಯಾಗಿದ್ದು ಹೆಚ್ಚು ವಿವಾದಗಳಿಂದಲೇ. ಅನಿಲ್​ ಕಪೂರ್​ ಅವರು ದಾವೂದ್​ ಜೊತೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗಲೂ ಸೋನಮ್ ತಂದೆ ಪರ ಟ್ವೀಟ್​ ಮಾಡಿದ್ದರು. ಆಗಲೂ ನೆಟ್ಟಿಗರು ನಟಿಯ ವಿರುದ್ಧ ಗರಂ ಆಗಿದ್ದರು. ಅಷ್ಟೇ ಅಲ್ಲ ಸಾಕಷ್ಟು ಸಲ ಸೋನಮ್​ ನೆಟ್ಟಿರಿಂದ ಬೇರೆ ಬೇರೆ ವಿಷಯಗಳಿಗೆ ಟ್ರೋಲ್​ ಆಗಿದ್ದೂ ಇದೆ.

 ಈಗಲೂ ಸಹ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಕುರಿತಾಗಿ ಮಾತನಾಡಿದ್ದು, ಮತ್ತೆ ಟ್ರೋಲ್​ ಆಗುತ್ತಿದ್ದಾರೆ. ಅಪ್ಪಂದಿರ ದಿನದಂದು ಟ್ವೀಟ್​ಮಾಡಿರುವ ಸೋನಮ್​, ಸ್ಟಾರ್​ ಕಿಡ್​ ಎನಿಸಿಕೊಳ್ಳುವುದು ಅವಮಾನ ಅಲ್ಲ. ನನ್ನ ತಂದೆ ಕಷ್ಟಪಟ್ಟ ಕಾರಣದಿಂದಲೇ ಇಂದು ನಾನು ಅದನ್ನು ಅನುಭವಿಸುತ್ತಿದ್ದೇನೆ. ಇದು ನಾನು ಪಡೆದುಕೊಂಡು ಬಂದಿದ್ದು ಎಂದಿದ್ದಾರೆ. ಸೋನಮ್​ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಮತ್ತೆ ಟ್ರೋಲ್​ ಮಾಡಲು ಆರಂಭಿಸಿದ್ದಾರೆ. ಸುಶಾಂತ್ ಅವರ ಅಗಲಿಕೆಯಿಂದ ನೊಂದಿರುವ ಅಭಿಮಾನಿಗಳು ಹಾಗೂ ನೆಟ್ಟಿಗರು

ನೆಟ್ಟಿಗರು ಸೋನಮ್​ ಕಪೂರ್​ ಈ ಹಿಂದೆ ಕಾಫಿ ವಿತ್​​ ಕರಣ್​ ಕಾರ್ಯಕ್ರಮದಲ್ಲಿ ಸುಶಾಂತ್​ ಎಂದರೆ ಯಾರು ಎಂದು ವ್ಯಂಗ್ಯ ಮಾಡಿದ್ದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸಿನಿಮಾ ಆಗಲಿದೆ ಸುಶಾಂತ್​ ಜೀವನ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!

ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್​ ಅಗಲಿಕೆಯಿಂದ ಸ್ಟಾರ್​ ಕಿಡ್ಸ್ ವಿರುದ್ಧ ಆರಂಭವಾದ ಸಮರದಿಂದಾಗಿ ಸೋನಮ್​ ತಮ್ಮ ಹಾಗೂ ತಂದೆಯ ಇನ್​ಸ್ಟಾಗ್ರಾಂನಲ್ಲಿ ಕಮೆಂಟ್​ ಮಾಡದಂತೆ ಸೆಟಿಂಗ್​ ಬದಲಾಯಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಟ್ರೋಲ್​ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರಂತೆ.

Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್​ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ​ ಫೋಟೋಗಳು..!ಇದನ್ನೂ ಓದಿ: ಸುಶಾಂತ್​ ನಟನೆಯ ಎಂ.ಎಸ್​.ಧೋನಿ ಬಯೋಪಿಕ್ ಮೇಲಿತ್ತು ಅಕ್ಷಯ್​ ಕುಮಾರ್ ಕಣ್ಣು..!
First published: June 22, 2020, 9:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories