Video: ಲಂಡನ್‌ನಲ್ಲಿರುವ ಸೋನಮ್ ಕಪೂರ್​ರ ಐಷಾರಾಮಿ ಮನೆಯನ್ನು ಒಮ್ಮೆ ನೀವು ನೋಡಿ..!

ನಟಿ ಸೋನಮ್ ಕಳೆದ ಕೆಲವು ದಿನಗಳಿಂದ ಲಂಡನ್‌ನಲ್ಲಿರುವ ತನ್ನ ಅಪಾರ್ಟ್​ಮೆಂಟ್​ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ತಮ್ಮ ಮನೆಯ ಒಳಗಡೆ ಹೇಗೆಲ್ಲಾ ಇದೆ ಎನ್ನುವುದನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸೋನಮ್ ಕಪೂರ್​

ನಟಿ ಸೋನಮ್ ಕಪೂರ್​

  • Share this:
ತಮ್ಮ ನೆಚ್ಚಿನ ನಟ ನಟಿಯರ ಮನೆಯನ್ನು ಒಮ್ಮೆಯಾದರೂ  ನೋಡಬೇಕು ಎನ್ನುವ ಕುತೂಹಲ ಎಲ್ಲ ಚಿತ್ರರಂಗದ ನಟ ನಟಿಯರ ಅಭಿಮಾನಿಗಳಿಗಿರುವುದು ಸಹಜವಾದಂತಹ ವಿಷಯ. ಅದರಲ್ಲೂ ನಟಿಯರು ಕೇಳಬೇಕೆ... ಅವರ ಮನೆಯನ್ನು ತುಂಬಾನೇ ವಿಭಿನ್ನವಾಗಿ ಅಲಂಕರಿಸಲು ಇಷ್ಟ ಪಡುತ್ತಾರೆ.ಬಾಲಿವುಡ್ ಹಿರಿಯ ನಟರಲ್ಲಿ ಒಬ್ಬರಾದ ಅನಿಲ್ ಕಪೂರ್ (Anil Kapoor)  ಅವರ ಮಗಳು ಮತ್ತು ನಟಿ ಸೋನಮ್ ಕಪೂರ್ (Sonam Kapoor) ಪತಿ ಆನಂದ್ ಅಹುಜಾ  (Anand Ahuja) ಜೊತೆಯಲ್ಲಿ ಲಂಡನ್‌ನಲ್ಲಿರುವ ಸುಂದರವಾದ ಮನೆಯಲ್ಲಿ ವಾಸವಿದ್ದಾರೆ. ಮದುವೆಯ ನಂತರ ಲಂಡನ್‌ನ ಅಪಾರ್ಟ್​ಮೆಂಟ್​ನ ಭವ್ಯವಾದ ಫ್ಲ್ಯಾಟ್‌ವೊಂದರಲ್ಲಿ (London Home)ಈ ಸೆಲೆಬ್ರಿಟಿ ದಂಪತಿ ವಾಸಿಸುತ್ತಿದ್ದಾರೆ. ಲಾಕ್​ಡೌನ್​ ವೇಳೆ ಸಹ ಸೋನಮ್​ ಅಲ್ಲೇ ಇದ್ದರು. ಇತ್ತೀಚೆಗೆ ಸಹೋದರಿ ರಿಯಾ ಮದುವೆಗೆಂದು ಅವರು ಅಪ್ಪನ ಮನೆಗೆ ಬಂದಿದ್ದರು. 

ನಟಿ ಸೋನಮ್ ಕಪೂರ್​ ಕಳೆದ ಕೆಲವು ದಿನಗಳಿಂದ ಲಂಡನ್‌ನಲ್ಲಿರುವ ತನ್ನ ಅಪಾರ್ಟ್​ಮೆಂಟ್​ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ತಮ್ಮ ಮನೆಯ ಒಳಗಡೆ ಹೇಗೆಲ್ಲಾ ಇದೆ ಎನ್ನುವುದನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.








View this post on Instagram






A post shared by Sonam K Ahuja (@sonamkapoor)






7 ನಿಮಿಷಗಳ ಈ ವಿಡಿಯೋದಲ್ಲಿ ನಟಿಯು ತನ್ನ ಮನೆಯಲ್ಲಿರುವಂತಹ ವಿಸ್ತಾರವಾದ ಲಿವಿಂಗ್ ರೂಮ್ ಮತ್ತು ಸುಂದರ ಹಾಗೂ ಐಷಾರಾಮಿ ಕೋಣೆಗಳ ಒಳಾಂಗಣ ವಿನ್ಯಾಸಗಳನ್ನು ತೋರಿಸುತ್ತಾ ವಿವರಿಸಿದ್ದಾರೆ. ಮನೆಯ ಪ್ರತಿಯೊಂದು ವಿಭಿನ್ನ ವಿನ್ಯಾಸದ ಬಗ್ಗೆಯೂ ವಿಸ್ತೃತವಾಗಿ ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅವರ ಮನೆಯು ತುಂಬಾ ಸುಂದರವಾಗಿದ್ದು ನೋಡಿದರೆ ‘ಅಬ್ಬಾ ಎಂಥಾ ಮನೆ ಇದು’ ಎಂದು ಹೇಳದೇ ಇರಲಾಗದು.

ಇದನ್ನೂ ಓದಿ: Weight Loss: 15 ಕೆಜಿ ತೂಕ ಇಳಿಸಿದ Bharti Singh: ವೇಗವಾಗಿ ತೂಕ ಇಳಿಸಲು ಈ ನಾಲ್ಕು ಕ್ರಮಗಳನ್ನು ಅನುಸರಿಸಿ..!

ಮದುವೆಯಾಗಿ ತನ್ನ ಪತಿಯ ಜೊತೆಗೆ ಲಂಡನ್‌ಗೆ ತೆರಳಿದ ನಟಿ ತನ್ನ ಮನೆಯನ್ನು ಭವ್ಯವಾಗಿ ಅಲಂಕರಿಸಲು ಮುಂದಾಗಿದ್ದು, ಯುರೋಪಿಯನ್ ಮತ್ತು ಭಾರತೀಯ ಮಾರುಕಟ್ಟೆಗಳಿಂದ ಮನೆಯ ಅಲಂಕಾರಕ್ಕೆ ಬೇಕಾದಂತಹ ವಸ್ತುಗಳನ್ನು ಖರೀದಿಸಿದರು. ತಮ್ಮ ಮನೆ ತೋರಿಸುವುದರ ಜೊತೆಗೆ ಪಶ್ಚಿಮ ಲಂಡನ್‌ನ ನಾಟಿಂಗ್ ಹಿಲ್ ಪ್ರದೇಶದಲ್ಲಿರುವಂತಹ ತಮ್ಮ ಕಚೇರಿ ಸ್ಥಳದ ನೋಟವನ್ನೂ ನೀಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 2 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ವಿಡಿಯೋದಲ್ಲಿ ಸೋನಮ್ ಕಪೂರ್​ ತನ್ನ ‘ಪೌಡರ್ ರೂಮ್’ ಮತ್ತು ‘ವಾಶ್ ರೂಮ್’ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ. ಸ್ವಯಂಚಾಲಿತ ಸೆಟ್ಟಿಂಗ್‌ಗಳೊಂದಿಗೆ ಗೋಡೆಗೆ ಅಂಟಿಕೊಂಡಂತಿರುವ ಶೌಚಾಲಯಗಳು ಎಲ್ಲದರ ಬಗ್ಗೆ ಸೋನಮ್ ಅಭಿಮಾನಿಗಳ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪತಿ Andrei Koscheev ಜತೆ ತಿರುಪತಿ-ಶ್ರೀಕಾಳಹಸ್ತಿಗೆ ಭೇಟಿ ಕೊಟ್ಟ ನಟಿ Shriya Saran​..!

ವೀಡಿಯೋದಲ್ಲಿ ತನ್ನ ಕಚೇರಿ ಸ್ಥಳವನ್ನೂ ತೋರಿಸಿರುವ ಅವರು, ಅವರಿರುವ ಅಪಾರ್ಟ್​ಮೆಂಟ್​ ಮತ್ತು ತನ್ನ ಕಚೇರಿ ಇರುವ ಸ್ಥಳದ ಮಧ್ಯೆ ಒಂದು ಉದ್ಯಾನವನ ಇದೆ ಎಂದು ತಮ್ಮ ಅಭಿಮಾನಿಗಳಿಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಪದೇ ಪದೇ ಕ್ಷಮೆ ಕೇಳಿದ ನಟಿ Rashmika Mandanna: ಕಾರಣ ಏನು ಗೊತ್ತಾ..?

ತಾನು ಮತ್ತು ತನ್ನ ಪತಿ ಆನಂದ್ ಒಂದೇ ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿರುವ ಸೋನಮ್ ಕಪೂರ್​, ಪತಿ ಆನಂದ್ ಅವರ ಜೊತೆ  2018ರಿಂದ ಲಂಡನ್‌ನ ನಾಟಿಂಗ್ ಹಿಲ್‌ನಲ್ಲಿ ವಾಸಿಸುತ್ತಿದ್ದಾರೆ. ಸೋನಮ್ ಕೊನೆಯ ಬಾರಿಗೆ ವಿಕ್ರಮಾದಿತ್ಯ ಮೋಟ್ವಾನೆರ ‘ಎಕೆ ವರ್ಸಸ್ ಎಕೆ’ ಯಲ್ಲಿ ಕಾಣಿಸಿಕೊಂಡಿದ್ದರು. ಈ ಚಲನಚಿತ್ರವನ್ನು ಡಿಸೆಂಬರ್ 2020ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
Published by:Anitha E
First published: