Koffee With Karan: ಕಾಫಿ ವಿತ್ ಕರಣ್​ನಲ್ಲಿ ಸೋನಂ ಕಪೂರ್! ದೀಪಿಕಾ ಪಡುಕೋಣೆ ಬಗ್ಗೆ ಏನಂದ್ರು?

‘ಕಾಫಿ ವಿತ್ ಕರಣ್’ ಸೀಸನ್ 7ರ ಇತ್ತೀಚಿನ ಸಂಚಿಕೆಯಲ್ಲಿ ಕಪೂರ್ ಸೋದರ ಸಂಬಂಧಿಯಾದ ಅರ್ಜುನ್ ಕಪೂರ್ ಅವರೊಂದಿಗೆ ಕಾಣಿಸಿಕೊಂಡರು. ಇನ್ನೇನು ತಾಯಿ ಅಗಲಿರುವ ನಟಿ ಸೋನಮ್ ಕಪೂರ್ ಮತ್ತು ಅರ್ಜುನ್ ಕಪೂರ್ ಇಬ್ಬರು ಶೋ ನಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ಸೋನಮ್ ಕಪೂರ್ ಅರ್ಜುನ್ ಕಪೂರ್ ಮತ್ತು ಕರಣ್ ಜೋಹರ್

ಸೋನಮ್ ಕಪೂರ್ ಅರ್ಜುನ್ ಕಪೂರ್ ಮತ್ತು ಕರಣ್ ಜೋಹರ್

  • Share this:
ಮೊನ್ನೆ ತಾನೇ ಬಾಲಿವುಡ್ ನ ನಟಿ ಸೋನಮ್ ಕಪೂರ್ (Sonam Kapoor) ಅವರು ತಮ್ಮ ಊದಿಕೊಂಡಿರುವ ಪಾದಗಳ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡು “ಗರ್ಭಧಾರಣೆ ನಿಜಕ್ಕೂ ಸುಲಭದ ಮಾತಲ್ಲ’ ಅಂತ ಹೇಳಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಈಗ ‘ಕಾಫಿ ವಿತ್ ಕರಣ್’ ಸೀಸನ್ 7 ರ (Koffee with Karan Season 7) ಇತ್ತೀಚಿನ ಸಂಚಿಕೆಯಲ್ಲಿ ಕಪೂರ್ ಸೋದರ (Brother) ಸಂಬಂಧಿಯಾದ ಅರ್ಜುನ್ ಕಪೂರ್ (Arjun Kapoor) ಅವರೊಂದಿಗೆ ಕಾಣಿಸಿಕೊಂಡರು. ಇನ್ನೇನು ತಾಯಿ (Mother) ಅಗಲಿರುವ ನಟಿ ಸೋನಮ್ ಕಪೂರ್ ಮತ್ತು ಅರ್ಜುನ್ ಕಪೂರ್ ಇಬ್ಬರು ಶೋ ನಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ಕಾಫಿ ವಿಥ್ ಕರಣ್​ನಲ್ಲಿ ಗಾಸಿಪ್, ತಪ್ಪೊಪ್ಪಿಗೆಗಳು ಮತ್ತು ಸಹಜವಾಗಿಯೇ ಸಾಕಷ್ಟು ಕಚಗುಳಿ ಇಡುವಂತಹ ಹಾಸ್ಯಭರಿತ ಕ್ಷಣಗಳು ಇದ್ದವು. ಆದರೆ ಇಲ್ಲಿ ವೀಕ್ಷಕರ ಗಮನ ಸೆಳೆದ ವಿಷಯವೊಂದಿದೆ ಬೇರೇನೆ ನೋಡಿ. ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಭಾರತವನ್ನು ಪ್ರತಿನಿಧಿಸಿದವರು ಯಾರು ಎಂಬುದು ಸೋನಂಗೆ ಕೇಳಲಾಯ್ತು.

ಕೇನ್ಸ್ ಚಲನಚಿತ್ರೋತ್ಸವದ ಬಗ್ಗೆ ಏನು ಕೇಳಿದ್ರು 
ಕರಣ್ ಜೋಹರ್ ಸೋನಮ್ ಕಪೂರ್ ಅವರನ್ನು ಕುರಿತು "ಕೇನ್ಸ್ ಈ ವರ್ಷ ಉತ್ತಮ ಭಾರತೀಯ ಪ್ರದರ್ಶನವನ್ನು ಹೊಂದಿತ್ತು ಎಂದು ನೀವು ಭಾವಿಸುತ್ತೀರಾ?" ಅಂತ ಕೇಳಿದರು. ಆ ಪ್ರಶ್ನೆಗೆ ಉತ್ತರಿಸಿದ ಸೋನಮ್ “ದೀಪಿಕಾ ಪಡುಕೋಣೆ ಅದ್ಭುತವಾಗಿ ಕಾಣುತ್ತಿದ್ದರು" ಎಂದು ಹೇಳಿದರು.

ಅದರ ಮರುಕ್ಷಣವೇ ಕರಣ್ ಅಲ್ಲಿ ಬೇರೆ ಯಾರು ಇದ್ದರು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸೋನಂ ಅವರು, ಅಲ್ಲಿ ಅನೇಕರಿದ್ದರು. ವ್ಯಾಪಕ ಪ್ರಾತಿನಿಧ್ಯವಿತ್ತು. ಆದರೆ ಅವರು ತಮ್ಮಷ್ಟಕ್ಕೆ ತಾವೇ ಹೋದರೋ ಅಥವಾ ಅವರನ್ನು ಆಹ್ವಾನಿಸಿದ್ದಾರೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Nayanthara: ಪತಿ ಜೊತೆ ಫ್ಲೈಟ್​ನಲ್ಲಿ ನಯನತಾರಾ ರೊಮ್ಯಾನ್ಸ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಸೋನಮ್ ತನ್ನ ಹಳೆಯ ಅನುಭವವನ್ನು ನೆನಪಿಸಿಕೊಂಡು, ಇಲ್ಲ, ಇಲ್ಲ, ನಿಮ್ಮನ್ನು ಆಹ್ವಾನಿಸದಿದ್ದರೆ, ನೀವು ಕೇನ್ಸ್ ಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.

 ರೆಡ್ ಕಾರ್ಪೆಟ್ ಮೇಲೆ ಬೇರೆ ಯಾರ‍್ಯಾರು ಇದ್ದರು 
ಇನ್ನೂ ಆಘಾತವಾದವರಂತೆ ಕಾಣುತ್ತಿದ್ದ ಸೋನಮ್ ಅವರು ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ದೀಪಿಕಾ ಪಡುಕೋಣೆಯನ್ನು ರೆಡ್ ಕಾರ್ಪೆಟ್ ಮೇಲೆ ನೋಡಿದೆ. ಅಲ್ಲಿ ಬೇರೆ ಯಾರು ಇದ್ದರು? ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಬೇರೆ ಯಾರೂ ಇರಲಿಲ್ಲ ಎಂದು ಹೇಳಿದರು. ಅದಕ್ಕೆ ಕರಣ್, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಭಾರತದ ಕೆಲವು ಸೆಲೆಬ್ರಿಟಿಗಳು ಅಲ್ಲಿ ಇದ್ದರು ಎಂದು ಹೇಳಿದರು.

ಕರಣ್ ಜೋಹರ್ ಅವರ ಮಾತನ್ನು ಸೋನಮ್ ಒಪ್ಪಿಕೊಂಡು ಹೌದು, ಐಶ್ವರ್ಯಾ ರೆಡ್ ಕಾರ್ಪೆಟ್ ಮೇಲೆ ಇದ್ದರು. ಏಕೆಂದರೆ ಲೋರಿಯಲ್ ಸಹ ಅಲ್ಲಿದ್ದರು ಎಂದು ಹೇಳಿದರು. ಕರಣ್, ರೆಡ್ ಕಾರ್ಪೆಟ್ ಮೇಲೆ ಇನ್ನೂ ಅನೇಕರು ಯಾರಿದ್ದರು ಎಂಬ ಹೇಳಿಕೆಗೆ ನಾನು ನೋಡಿಲ್ಲ, ಕ್ಷಮಿಸಿ ಎಂದು ಅವರು ಹೇಳಿದರು.

ದೀಪಿಕಾ ಪಡುಕೋಣೆ ಬಗ್ಗೆ ಏನಂದ್ರು ಸೋನಮ್ ಕಪೂರ್
ಈ ಇಡೀ ಸಂಭಾಷಣೆಯ ಸಮಯದಲ್ಲಿ ಸೋನಮ್ ಕಪೂರ್, ಕೇನ್ಸ್ 2022 ರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಕರಣ್ ಜೋಹರ್ ಅವರನ್ನು ಕೇಳಿದರು. ಚಲನಚಿತ್ರ ನಿರ್ಮಾಪಕರ ಪ್ರಕಾರ, ಈ ಬಾರಿಯ ಕೇನ್ಸ್ ಚಲನಚಿತ್ರೋತ್ಸವ ಅಷ್ಟೊಂದು ವೇಗವನ್ನು ಪಡೆದುಕೊಂಡಿಲ್ಲ, ಆದರೆ ನಟಿ ದೀಪಿಕಾ ಪಡುಕೋಣೆ ಮಾತ್ರ ತುಂಬಾನೇ ಅದ್ಭುತವಾಗಿ ಕಾಣುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ:  Raveena Tandon: ಅಷ್ಟು ವಯಸ್ಸಾದ್ರೂ `ಉಪೇಂದ್ರ' ನಾಯಕಿ ರವೀನಾ ಬ್ಯೂಟಿಫುಲ್ ಆಗಿರೋಕೆ ಇದೇ ಕಾರಣವಂತೆ

ಈ ವರ್ಷ ಕೇನ್ಸ್ 2022 ರೆಡ್ ಕಾರ್ಪೆಟ್ ನ ಮೇಲೆ ಕಾಣಿಸಿಕೊಳ್ಳದಿರಲು ನಿರ್ಧರಿಸಿದ ನಂತರ ಸೋನಮ್ ಅವರಿಗೆ ಅಭಿಮಾನಿಗಳಿಂದ ಅನೇಕ ಸಂದೇಶಗಳು ಬಂದಿದ್ದವು ಎಂದು ನಟಿ ಸೋನಮ್ ಹೇಳಿದರು.
Published by:Ashwini Prabhu
First published: