ನಟಿ ಸೋನಮ್ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜ ಮದುವೆಯಾಗಿ ಎರಡು ವರ್ಷಗಳೇ ಕಳೆದಿವೆ. ಈಗ ಲಾಕ್ಡೌನ್ ಇರುವುದರಿಂದ ಇಬ್ಬರೂ ಮನೆಯಲ್ಲೇ ಇದ್ದಾರೆ. ವಿಚಿತ್ರ ಎಂದರೆ, ಒಂದೇ ಮನೆಯಲ್ಲಿದ್ದರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವುದಿಲ್ಲವಂತೆ. ಹೀಗೆಂದು ಖುದ್ದು ಸೋನಮ್ ಕಪೂರ್ ಹೇಳಿದ್ದಾರೆ.
ನಾನು ಒಂದು ರೂಂನಲ್ಲಿ ಕುಳಿತು ಕೆಲಸ ಮಾಡುತ್ತೇನೆ. ಆನಂದ್ ಮತ್ತೊಂದು ರೂಂನಲ್ಲಿ ಕುಳಿತಿರುತ್ತಾರೆ. ಪ್ರತಿ ಎರಡು ಗಂಟೆಗೆ ಒಮ್ಮೆ ಬಂದು ಅವರು ನನ್ನನ್ನು ಮಾತನಾಡಿಸಿ ಹೋಗುತ್ತಾರೆ. ಹೀಗಾಗಿ, ನನಗೆ ನನ್ನದೇ ಸ್ಪೇಸ್ ಸಿಗುತ್ತಿದೆ. ನಾವು ಮಧ್ಯಾಹ್ನ ಒಟ್ಟಿಗೆ ಊಟು ಮಾಡುತ್ತೇವೆ ಎಂದಿದ್ದಾರೆ ಸೋನಮ್.
ನಾವು ಒಂದೇ ಮನೆಯಲ್ಲಿದ್ದರೂ ಹಗಲಿನಲ್ಲಿ ಹೆಚ್ಚು ಭೇಟಿ ಆಗುವುದಿಲ್ಲ. ಬೆಳಗ್ಗೆ ಒಟ್ಟಿಗೆ ತಿಂಡಿ ತಿನ್ನುತ್ತೇವೆ. ಮಧ್ಯಾಹ್ನ ಒಟ್ಟಿಗೆ ಊಟ ಮಾಡುತ್ತೇವೆ. ಇದನ್ನು ಬಿಟ್ಟರೆ ನಾವಿಬ್ಬರೂ ಭೇಟಿ ಆಗೋದು ತುಂಬಾನೇ ಕಡಿಮೆ. ಇಬ್ಬರೂ ಅವರವರದೇ ಕೆಲಸದಲ್ಲಿ ಮಗ್ನರಾಗಿರುತ್ತೇವೆ ಎನ್ನುತ್ತಾರೆ ಅವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ