ಆಸ್ತಿಗಳನ್ನು ಖರೀದಿ ಮಾಡುವುದು ಮಾರಾಟ ಮಾಡುವುದು ಸಾಮಾನ್ಯ. ಆದ್ರೆ ಮುಂಬೈನಂಥ (Mumbai) ಸಿಟಿಗಳಲ್ಲಿ ಜನರು ಖರೀದಿಗೆ ಸಾಲುಗಟ್ಟಿ ನಿಂತಿರುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ಮುಂಬೈನಲ್ಲಿ ಬಂಗಲೆಗಳನ್ನು, ಅಪಾರ್ಟ್ಮೆಂಟ್ (Apartment) ಗಳನ್ನು ಖರೀದಿ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಮಧ್ಯೆ ನಟಿ ಸೋನಂ ಕಪೂರ್ (Sonam Kapoor) ಅಹುಜಾ ತಮ್ಮ ಐಷಾರಾಮಿ ಡ್ಯುಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದಾರೆ.
ಮುಂಬೈನಂಥ ನಗರಗಳಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯಿಂದ ಹಿಡಿದು ನಟಿ ಜಾನ್ವಿ ಕಪೂರ್ ವರೆಗೆ ಎಲ್ಲರೂ ಇತ್ತೀಚಿನ ದಿನಗಳಲ್ಲಿ ಬೆಲೆಬಾಳುವ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಎಲ್ಲದರ ಮಧ್ಯೆ ಮುಂಬೈನ ಹೃದಯ ಭಾಗದಲ್ಲಿದ್ದ ಆಸ್ತಿಯನ್ನು ನಟಿ ಸೋನಂ ಕಪೂರ್ ಭಾರೀ ಬೆಲೆಗೆ ಮಾರಾಟ ಮಾಡಿದ್ದಾರೆ.
32.5 ಕೋಟಿಗೆ ಮನೆ ಮಾರಾಟ !
ಅಂದಹಾಗೆ ನಟಿ ಸೋನಂ ಕಪೂರ್ ಈ ಮನೆಯನ್ನು ಜೂನ್ 2015 ರಲ್ಲಿ ಖರೀದಿಸಿದ್ದರು ಎನ್ನಲಾಗಿದೆ. ದಾಖಲೆಗಳ ಪ್ರಕಾರ ಸೋನಮ್ ಈ ಅಪಾರ್ಟ್ ಮೆಂಟ್ ಅನ್ನು ₹ 31.48 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. ಇದೀಗ ಡಿಸೆಂಬರ್ 29 ರಂದು ಅದನ್ನು ₹ 32.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರತಿಷ್ಠಿತ BKC ಯಲ್ಲಿ ಸನ್ಟೆಕ್ ಸಿಗ್ನೇಚರ್ ಐಲ್ಯಾಂಡ್ನಲ್ಲಿ ಮೂರನೇ ಮಹಡಿಯಲ್ಲಿ ಸುಮಾರು 7,000 ಚದರ ಅಡಿ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್ ಇದಾಗಿದೆ.
ಮುಂಬೈನ ರುದ್ರ ರಮಣೀಯ ನೋಟಗಳನ್ನು ಹೊಂದಿರುವ ಈ ಐಷಾರಾಮಿ ಅಪಾರ್ಟ್ ಮೆಂಟ್, ತಾಪಮಾನ ನಿಯಂತ್ರಿತ ಪೂಲ್, ಹೆಲ್ತ್ ಕ್ಲಬ್ ಮತ್ತು ಅತ್ಯಾಧುನಿಕ ಜಿಮ್, ಮಿನಿ ಥಿಯೇಟರ್ ಮತ್ತು ಮಕ್ಕಳ ಪ್ಲೇ ಏರಿಯಾದೊಂದಿಗೆ ವಿಸ್ತಾರವಾದ ಭೂದೃಶ್ಯದ ಉದ್ಯಾನವನ್ನು ಹೊಂದಿದೆ.
ಇನ್ನು, "ಸೋನಮ್ ಮನೆಯನ್ನು ಮಾರಾಟ ಮಾಡಿದ ಕಟ್ಟಡವು ಬಿಕೆಸಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ನಲ್ಲಿದ್ದು, ಇದು ಬಹಳ ಬೇಡಿಕೆಯ ಸ್ಥಳವಾಗಿದೆ" ಎಂದು ಸ್ಕ್ವೇರ್ಫೀಟಿಂಡಿಯಾ ಸಂಸ್ಥಾಪಕ ವರುಣ್ ಸಿಂಗ್ ಹೇಳಿದ್ದಾರೆ.
ಆದ್ರೆ ಇದೀಗ ಬಹಿರಂಗಗೊಂಡ ಬೆಲೆಗಳ ಪ್ರಕಾರ, ಈ ಆಸ್ತಿ ಮಾರಾಟದಲ್ಲಿ ದೊಡ್ಡ ಲಾಭವನ್ನು ಗಳಿಸಲಿಲ್ಲ ಎಂದು ತೋರುತ್ತಿದೆ. ಇನ್ನು SMF ಇನ್ಫ್ರಾಸ್ಟ್ರಕ್ಚರ್ ಎಂಬ ಕಂಪನಿ ಈ ಮನೆಯನ್ನು ಖರೀದಿ ಮಾಡಿದೆ ಎನ್ನಲಾಗಿದೆ. ಈ ಖರೀದಿಗಾಗಿ ಅವರು 1.95 ಕೋಟಿ ರೂಪಾಯಿಗಳನ್ನು ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಪತಿ, ಮಗನೊಂದಿಗೆ ಲಂಡನ್ - ಮುಂಬೈನಲ್ಲಿ ಸೋನಂ ವಾಸ
ಇನ್ನು, ಸೋನಂ ಅವರು ಪತಿ ಆನಂದ್ ಅಹುಜಾ ಮತ್ತು ಅವರ ಮಗ ವಾಯು ಕಪೂರ್ ಅಹುಜಾ ಅವರೊಂದಿಗೆ ಲಂಡನ್ ಮತ್ತು ಮುಂಬೈ ನಲ್ಲಿ ಎರಡೂ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪುತ್ರ ವಾಯುವನ್ನು ಬರಮಾಡಿಕೊಂಡ ದಂಪತಿ ಇತ್ತೀಚಿಗೆ ಮಗುವಿನ ನರ್ಸರಿಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೊಠಡಿಯು ಆನೆಗಳು, ಹುಲಿಗಳು ಮತ್ತು ಇತರ ಪ್ರಾಣಿಗಳೊಂದಿಗೆ ತಮಾಷೆಯ ಭಿತ್ತಿಚಿತ್ರಗಳನ್ನು ಒಳಗೊಂಡಿತ್ತು.
ಅಲ್ದೇ, ಸೋನಮ್ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಕುಟುಂಬ ಮತ್ತು ಸ್ನೇಹಿತರ ಜೊತೆಯಲ್ಲಿ ಆಚರಿಸಿದ್ರು. ಆನಂದ್ ಅವರು ಸೋನಂ ಮತ್ತು ವಾಯು ಜೊತೆಗೆ ಅನಿಲ್ ಕಪೂರ್, ಹರ್ಷವರ್ಧನ್ ಕಪೂರ್ ಮತ್ತು ಸುನಿತಾ ಕಪೂರ್ ಅವರ ರಜೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Nora Fatehi-Aryan Khan: ನೋರಾ ಫತೇಹಿ ಜೊತೆ ಶಾರುಖ್ ಮಗನ ಕುಚ್ ಕುಚ್! 30ರ ನಟಿ ಜೊತೆ 25ರ ಆರ್ಯನ್ ಖಾನ್ ಡೇಟಿಂಗ್!?
ಇನ್ನು, ಹೊಸವರ್ಷಕ್ಕೆ ಪತಿ ಆನಂದ್ ಹಾಗೂ ಮಗ ವಾಯುವಿನ ಪೋಸ್ಟ್ ಹಾಕಿ ಇನ್ಸ್ಟಾಗ್ರಾಂನಲ್ಲಿ ನ್ಯೂ ಇಯರ್ ವಿಶ್ ಹಂಚಿಕೊಂಡಿದ್ದರು. ಚಿತ್ರದಲ್ಲಿ ಆನಂದ್ ಅಹುಜಾ ವಾಯುವಿನೊಂದಿಗೆ ನಡೆಯುತ್ತಿದ್ದಾರೆ. “ನನ್ನ ಎರಡು ಸಿಂಹ ರಾಶಿಯವರು.... ಕಳೆದ ವರ್ಷ ನಮಗೆ ತುಂಬಾ ವಿಶೇಷವಾಗಿತ್ತು. ಎಲ್ಲರಿಗೂ ತಡವಾದ ಹಾರೈಕೆ. ಆದರೆ ಹೊಸ ವರ್ಷದ ಶುಭಾಶಯಗಳು. ಜೀವನವು ಪ್ರತಿದಿನ ಉತ್ತಮಗೊಳ್ಳುತ್ತಿದೆ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ