ಕ್ಯಾನ್ಸರ್ ಧೃಡಪಟ್ಟ ಬಳಿಕ ಇದೇ ಮೊದಲ ಬಾರಿಗೆ ಫೋಟೋ ಬಹಿರಂಗಪಡಿಸಿದ ನಟಿ ಸೊನಾಲಿ ಬೇಂದ್ರೆ


Updated:July 10, 2018, 9:23 PM IST
ಕ್ಯಾನ್ಸರ್ ಧೃಡಪಟ್ಟ ಬಳಿಕ ಇದೇ ಮೊದಲ ಬಾರಿಗೆ ಫೋಟೋ ಬಹಿರಂಗಪಡಿಸಿದ ನಟಿ ಸೊನಾಲಿ ಬೇಂದ್ರೆ

Updated: July 10, 2018, 9:23 PM IST
-ನ್ಯೂಸ್ 18

ಮುಂಬೈ(ಜು.10): ಕ್ಯಾನ್ಸರ್ ಇರುವುದನ್ನ ಬಹಿರಂಗಪಡಿಸಿದ ಬಳಿಕ ಬಾಲಿವುಡ್ ತಾರೆ ಸೊನಾಲಿ ಬೇಂದ್ರೆ, ತನ್ನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಚಡಪಡಿಸುತ್ತಿರುವ ಅಭಿಮಾನಿಗಳಿಗಾಗಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಹೇರ್ ಕಟ್ ಮಾಡಿರುವ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ.

ನನ್ನ ನೆಚ್ಚಿನ ಲೇಖಕಿ ಇಸಾಬೆಲ್ ಅಲ್ಲೆಂಡೆ ಹೇಳಿರುವಂತೆ, ಅಂತರ್ಗತವಾಗಿರುವ ಸಾಮರ್ಥ್ಯವನ್ನ ಬಲವಂತವಾಗಿ ನಾವು ಹೊರತೆಗೆಯುವವರೆಗೂ ನಾವು ಎಷ್ಟು ಬಲಿಷ್ಠರು ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಯಾವುದೋ ದುರಂತ, ಯುದ್ಧ, ಅಗತ್ಯ ಸಂದರ್ಭಗಳಲ್ಲಿ ನಾವು ಅದ್ಬುತ ಕೆಲಸಗಳನ್ನ ಮಾಡುತ್ತೇವೆ. ಉಳಿವು ಮತ್ತು ನವೀಕರಣದ ವಿಷಯದಲ್ಲಿ ಮಾನವನ ಸಾಮರ್ಥ್ಯ ಅತ್ಯದ್ಬುತವಾದುದಾಗಿದೆ ಎಂದು ಸೊನಾಲಿ ಬೇಂದ್ರೆ ಬರೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ನನಗಾಗಿ ಹೊರಹೊಮ್ಮುತ್ತಿರುವ ಪ್ರೀತಿ ನಿಜಕ್ಕೂ ಅಗಾಧವಾದುದಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಡುವುದರಲ್ಲಿ ತಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಅನುಭವಗಳನ್ನ ನನ್ಹ ಜೊತೆ ಹಂ ಚಿಕೊಂಡ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ತನಗೆ ಮಾರಕ ಕ್ಯಾನ್ಸರ್ ಹೆಮ್ಮಾರಿ ವಕ್ಕರಿಸಿರುವ ಬಗ್ಗೆ ಸ್ವತಃ ಸೊನಾಲಿ ಬೇಂದ್ರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಸಹಿಸಲಸಾಧ್ಯವಾದ ನೋವಿನಿಂದ ಹಲವು ಪರೀಕ್ಷೆಗೆ ಒಳಪಟ್ಟಾಗ ಕ್ಯಾನ್ಸರ್ ಧೃಡಪಟ್ಟಿದೆ ಎಂದು ಅವರು ಹೇಳಿಕೊಂಡಿದ್ದರು.ಜೀವನ ಒಮ್ಮೊಮ್ಮೆ ಅನಿರೀಕ್ಷಿತ ತಿರುವು ಪಡೆದುಬಿಡುತ್ತದೆ. ನನಗೀಗ ಹೈಗ್ರೇಡ್ ಕ್ಯಾನ್ಸರ್ ಬಂದಿದ್ದು, ದೇಹಕ್ಕೆಲ್ಲ ಆವರಿಸುತ್ತಿದೆ ಎಂದು ಹೇಳಿಕೊಮಡಿದ್ದರು.

 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ