ಕತ್ರೀನಾ ಕೈಫ್ ಜೊತೆ 'ವರ್ಕೌಟ್'​ ಆಗದ ಸೋನಾಕ್ಷಿ ಸಿನ್ಹಾ ಪ್ಲಾನ್

news18
Updated:July 8, 2018, 4:45 PM IST
ಕತ್ರೀನಾ ಕೈಫ್ ಜೊತೆ 'ವರ್ಕೌಟ್'​ ಆಗದ ಸೋನಾಕ್ಷಿ ಸಿನ್ಹಾ ಪ್ಲಾನ್
news18
Updated: July 8, 2018, 4:45 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ಹಾಟ್​ ಬೆಡಗಿ ಕತ್ರೀನಾ ಕೈಫ್ ಅಭಿನಯಕ್ಕಿಂತಲೂ ತಮ್ಮ ದೇಹ ಸಿರಿಯಿಂದ ಬಿಟೌನಲ್ಲಿ ಫೇಮಸ್ಸು. ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ನಟಿಮಣಿಯರಲ್ಲಿ ಕತ್ರೀನಾ ಕೈಫ್ ಕೂಡ ಒಬ್ಬರು. ಕ್ಯಾಟ್(​ಕತ್ರೀನಾ ಕೈಫ್)ರಂತೆ ಬಳುಕುವ ಬಳ್ಳಿಯಾಗಲು ಬಿಟೌನ್​ ಬೆಡಗಿಯರು ಬಯಸುತ್ತಿರುವುದಂತೂ ಸುಳ್ಳಲ್ಲ ಎಂಬುದಕ್ಕೆ ಇದುವೇ ನಿರ್ದಶನ.

'ಶೀಲಾ ಕಿ ಜವಾನಿ'ಯ ಫಿಟ್​ನೆಸ್​ಗೆ ಮಾರು ಹೋಗಿರುವ 'ದಬಂಗ್' ಬೆಡಗಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಕತ್ರೀನಾ ಜೊತೆಗೂಡಿ ಕಸರತ್ತು ನಡೆಸಿದ್ದಾರೆ.  ಪರಸ್ಪರ ಕೈಗಳನ್ನು ಹಿಡಿದು ಝೀರೊ ಸೈಜ್​ಗಾಗಿ ವ್ಯಾಯಾಮ ಮಾಡುತ್ತಿರುವ ಈ ವಿಡಿಯೋವನ್ನು ಸೋನಾಕ್ಷಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ  ಕತ್ರೀನಾ ಕೈಫ್ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಶೀರ್ಷಿಕೆ ನೀಡಿದ್ದು, ಇದು ಎಲ್ಲರ ಗಮನ ಸೆಳೆದಿದೆ ಸೆಳೆದಿದೆ. ಹೌದು, ಕತ್ರೀನಾ ರೀತಿಯಲ್ಲಿ ವರ್ಕೌಟ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸೋನು, ಜಿಮ್​ನಲ್ಲಿ ಕ್ಯಾಟ್​ ಕಸರತ್ತನ್ನು ಮೆಚ್ಚಲೇಬೇಕು ಅಂದಿದ್ದಾರೆ. ಬಿಟೌನ್​ನಲ್ಲಿ 'ತಪ್ಪಡ್​ ಸೆ ನಹಿ ಡರ್ತಾ ಸಾಬ್'​ ಎಂದು ಕೆರಿಯರ್​ ಆರಂಭಿಸಿದ್ದ 'ದಬಂಗ್' ಸುಂದರಿ ಕತ್ರೀನಾಳ ಕಸರತ್ತಿಗೆ ಹೆದರಿದ್ದಾರೆ.
Loading...

A post shared by Sonakshi Sinha (@aslisona) on

ಸದ್ಯ ಕತ್ರೀನಾ ಜೊತೆಯಲ್ಲಿ ವರ್ಕೌಟ್ ಮಾಡಿ ಹೊಸ ಅವಕಾಶವನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನದಲ್ಲಿರುವ ಸೋನುಗೆ ಕ್ಯಾಟ್​ ಜೊತೆ ಕಸರತ್ತು ವರ್ಕೌಟ್​ ಆಗಲ್ಲ ಅನಿಸಿದೆಯಂತೆ. ಈ ಹಿಂದೆ ನಟಿ ಆಲಿಯಾ ಭಟ್​ ಕೂಡ ಕತ್ರೀನಾ ಕೈಫ್​ ಅವರನ್ನು ಜಿಮ್​ನ ಹಾರ್ಡ್​​ ಟಾಸ್ಕ್​ ಮಾಸ್ಟರ್ ಎಂದು ಹೊಗಳಿದ್ದರು.

ಕತ್ರೀನಾ ಮತ್ತು ಸೋನಾಕ್ಷಿ ಅವರ ವರ್ಕೌಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇವರಿಬ್ಬರು ಮುಂದಿನ ಚಿತ್ರಗಳಲ್ಲಿ ಜೊತೆಯಾಗಲಿದ್ದಾರೆ ಎಂಬ ಗಾಸಿಪ್​ ಹುಟ್ಟಿಕೊಂಡಿದೆ. ಅಸಲಿ ವಿಷಯ ಏನಪ್ಪಾ ಅಂದರೆ ಕತ್ರೀನಾ ಮತ್ತು ಸೋನಾಕ್ಷಿ ಸದ್ಯ ಅಮೆರಿಕದಲ್ಲಿದ್ದಾರೆ.

ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ದಬಂಗ್ ಟೂರ್ ಕಾರ್ಯಕ್ರಮದಲ್ಲಿ ಕತ್ರೀನಾ ಕೈಫ್ ಮತ್ತು ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದು, ಈ ವೇಳೆ ಜೊತೆಯಾಗಿ ವರ್ಕೌಟ್ ಮಾಡಿರುವ ವಿಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ.
First published:July 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...