news18-kannada Updated:June 21, 2020, 4:05 PM IST
ಸೋನಾಕ್ಷಿ ಸಿನ್ಹಾ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಾರೆ. ಆಗಾಗ ಫೋಟೋ, ವಿಡಿಯೋ, ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೀಗ ಸೋನಾಕ್ಷಿ ಸಿನ್ಹಾ ತಮ್ಮ ಟ್ವಿಟ್ಟರ್ ಖಾತೆಗೆ ಗುಡ್ ಬೈ ಹೇಳಿದ್ದಾರೆ. ಯಾವ ಕಾರಣಕ್ಕೆ ಗೊತ್ತಾ?
ಸೋನಾಕ್ಷಿ ಸಿನ್ಹಾ ಶನಿವಾರದಂದು ಟ್ವಿಟ್ಟರ್ ಖಾತೆಯನ್ನು ನಿಷ್ಟಕ್ರೀಯಗೊಳಿಸುವುದಾಗಿ ಹೇಳಿಕೊಂಡಿದ್ದರು. ಜೊತೆಗೆ ‘ನಿಮ್ಮ ವಿವೇಕವನ್ನು ಕಾಪಾಡುವ ಮೊದಲ ಹೆಜ್ಜೆ ನೆಗೆಟಿವಿಟಿಯಿಂದ ದೂರವಿರುವುದು. ಈ ದಿನಗಳಲ್ಲಿ ಅದಕ್ಕಿಂತ ಹೆಚ್ಚಿನದ್ದೇನೂ ಇಲ್ಲ. ಟ್ವಿಟ್ಟರ್ ಚಲೋ. ನನ್ನ ಖಾತೆಯನ್ನು ನಿಷ್ಕ್ರೀಯಗೊಳಿಸುತ್ತಿದ್ದೇನೆ‘ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟರ್ ಹರಿಬಿಟ್ಟ ಕೆಲವೇ ಕ್ಷಣಗಳಳ್ಲಿ ತಮ್ಮ ಖಾತೆಯನ್ನು ಡಿಆ್ಯಕ್ಟೀವೇಟ್ ಮಾಡಿದ್ದಾರೆ. ಜೊತೆಗೆ ಸ್ಕ್ರೀನ್ ಶಾಟ್ ತೆಗೆ ‘ನಿಮ್ಮ ವಿನೋದದಿಂದ ನಮಗೆ ಬೆಂಕಿ ತಗುಲಿದಂತಾಗಿದೆ’ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಾಲಿವುಡ್ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ ಎಂದು ಅವರ ಅಭಿಮಾನಿಗಳು ಕಿಡಿ ಕಾರಿದರು. ಸುಶಾಂತ್ ಸಿಂಗ್ ಸಾವಿನ ಬಳಿಕ ನೆಟ್ಟಿಗರು ಸ್ಟಾರ್ ನಟ-ನಟಿಯರನ್ನು ಟ್ರೋಲ್ ಮಾಡುತ್ತಿದ್ದಾರೆ, ನಟಿ ಸೋನಾಕ್ಷಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
Father’s Day 2020: ವಿಶ್ವ ಅಪ್ಪಂದಿರ ದಿನಾಚರಣೆಗೆ ಗೂಗಲ್ ಡೂಡಲ್ನಿಂದ ವಿಶೇಷ ಗೌರವ
ನಟಿ ನಯನತಾರಾ ಹಾಗೂ ಭಾವಿ ಪತಿ ವಿಘ್ನೇಶ್ಗೂ ಕೊರೋನಾ?
Published by:
Harshith AS
First published:
June 21, 2020, 4:03 PM IST