ಕ್ರಿಕೆಟ್​ ಬ್ಯಾಟ್ ಹಿಡಿದು ಧೋನಿ ಆಗಿದ್ದ ಸುಶಾಂತ್ ಈಗ ಗನ್​ ಹಿಡಿದ ಡಾಕು!​

news18
Updated:July 5, 2018, 10:29 PM IST
ಕ್ರಿಕೆಟ್​ ಬ್ಯಾಟ್ ಹಿಡಿದು ಧೋನಿ ಆಗಿದ್ದ ಸುಶಾಂತ್ ಈಗ ಗನ್​ ಹಿಡಿದ ಡಾಕು!​
news18
Updated: July 5, 2018, 10:29 PM IST
-ನ್ಯೂಸ್ 18 ಕನ್ನಡ

'ಉಡ್ತಾ ಪಂಜಾಬ್' ಎನ್ನುವ ಸಾಮಾಜಿಕ ಕಳಕಳಿಯ ಸಿನಿಮಾ ನಿರ್ದೇಶಿಸಿದ್ದ ಅಭಿಷೇಕ್ ಚೌಬೆ 'ಸನ್ ಚಿರಿಯಾ' ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತಿರುವ ವಿಷಯ. ಇದೀಗ 'ಸನ್ ಚಿರಿಯಾ'ದ ಫಸ್ಟ್​ ಲುಕ್​ ಬಿಡುಗಡೆಗೊಳಿಸಿ ಚಿತ್ರದ ಮೇಲಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಚಂಬಲ್ ಕಣಿವೆಯ ಡಕಾಯಿತರ ಕಥೆ ಹೇಳುವ 'ಸನ್ ಚಿರಿಯಾ' ಚಿತ್ರದ ನಾಯಕನಾಗಿ ಸುಶಾಂತ್ ಸಿಂಗ್ ರಜಪೂತ್ ಕಾಣಿಸಿಕೊಂಡಿದ್ದಾರೆ. 1970ರ ದಶಕದಲ್ಲಿ ನಡೆದ ನೈಜ ಘಟನಾಧಾರಿತ ಈ ಸಿನಿಮಾದಲ್ಲಿ ತಮ್ಮ ಚಾಕೊಲೇಟ್ ಹೀರೋ ಇಮೇಜನ್ನು ಬದಿಗೊತ್ತಿ ಡಾಕು ಪಾತ್ರದಲ್ಲಿ ಸುಶಾಂತ್ ಬಣ್ಣ ಹಚ್ಚುತ್ತಿದ್ದಾರೆ.

ಧೋನಿ ಜೀವನಾಧಾರಿತ ಚಿತ್ರದಲ್ಲಿ ದೇಹ ಭಾಷೆ ಬದಲಿಸಿ ಬ್ಯಾಟ್​ ಬೀಸಿದ್ದ ಸುಶಾಂತ್ ಸಿಂಗ್, ಇಲ್ಲಿ ಗನ್ ಹಿಡಿದು ಕೊಳ್ಳೆ ಹೊಡೆಯುವ ದರೋಡೆಕೋರನಾಗಿ ಕಾಣಿಸಲಿದ್ದಾರೆ.

'ಟಾಯ್ಲೆಟ್‌: ಏಕ್‌ ಪ್ರೇಮ್‌ ಕಥಾ' ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ನಟಿ ಭೂಮಿ ಫಡ್ನೇಕರ್‌ 'ಸನ್ ಚಿರಿಯಾ'ದ ನಾಯಕಿ. ಚಂಬಲ್ ಕಣಿವೆಯ ದರೋಡೆಕೋರರ ಗುಂಪಿನ ಮಹಿಳೆಯ ಪಾತ್ರವನ್ನು ಭೂಮಿ ನಿರ್ವಹಿಸಲಿದ್ದಾರೆ. ಜೊತೆಗೆ ರಣವೀರ್ ಶೋರೆ ಮತ್ತು ಮನೋಜ್ ಭಾಜಪೇಯಿ ಕೂಡ ರಗಡ್​ ಲುಕ್​ನಲ್ಲಿ ನಟಿಸುತ್ತಿದ್ದಾರೆ.


ಬಹುತಾರಾಗಣದ ಈ ಸಿನಿಮಾದ ಚಿತ್ರೀಕರಣ ಚಂಬಲ್ ಕಣಿವೆಯಲ್ಲಿ ಭರದಿಂದ ಸಾಗುತ್ತಿದ್ದು, 2019 ಫೆಬ್ರವರಿ 8 ರಂದು 'ಸನ್ ಚಿರಿಯಾ'ವನ್ನು ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...