ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ (Salman Khan), ವಿವಾಹವಾಗದೆಯೇ ಹೆಚ್ಚು ಸುದ್ದಿಯಲ್ಲಿರುವ ನಟರಾಗಿದ್ದಾರೆ. ತಮ್ಮ ಪ್ರೇಮ ಸಂಬಂಧಗಳು (Love Affair), ರಿಲೇಶನ್ಶಿಪ್ಗಳು, ವಿವಾದಗಳು ಹೀಗೆ ಸಲ್ಲು ಭಾಯ್ ಬಿ ಟೌನ್ನಲ್ಲಿ ಹೆಚ್ಚು ಚರ್ಚಿತರಾಗಿದ್ದಾರೆ. ಇದೀಗ ಮಾಜಿ ನಟಿ ಸೋಮಿ ಅಲಿ (Somy Ali), ಸಲ್ಮಾನ್ ಹಾಗೂ ತಮ್ಮ ಹಳೆಯ ರಿಲೇಶನ್ಶಿಪ್ ಕುರಿತು ಮಾತನಾಡಿದ್ದು, ಏಕೆ ಬ್ರೇಕಪ್ (Break Up) ಮಾಡಿಕೊಳ್ಳಲಾಯಿತು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ನಿಂದನೀಯ ಸಂಬಂಧವಾಗಿತ್ತು
ಯಾರ್ ಗದ್ದಾರ್, ತೀಸ್ರಾ ಕೌನ್? ಹಾಗೂ ಚುಪ್ ಮೊದಲಾದ ಚಲನಚಿತ್ರಗಳಲ್ಲಿ ನಟಿಸಿದ್ದ ಮಾಜಿ ನಟಿ ಸೋಮಿ ಆಲಿ ಸೂಪರ್ಸ್ಟಾರ್ ಸಲ್ಮಾನ್ ಖಾನ್ನೊಂದಿಗೆ ಎಂಟು ವರ್ಷಗಳ ಕಾಲ ರಿಲೇಶನ್ಶಿಪ್ನಲ್ಲಿದ್ದರು.
ಈ ಹಿಂದೆ ಇದರ ಕುರಿತು ಮಾತನಾಡಿದ್ದ ನಟಿ ಸಲ್ಮಾನ್ ಖಾನ್ನೊಂದಿಗೆ ತಮ್ಮ ರಿಲೇಶನ್ಶಿಪ್ ನಿಂದನೀಯವಾಗಿತ್ತು ಎಂದು ತಿಳಿಸಿದ್ದರು. ಇದೀಗ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಟಿ, ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಸಾಮಾಜಿಕ ತಾಣದಲ್ಲಿ ಸ್ಟೋರಿ ಹಂಚಿಕೊಂಡ ನಟಿ
ಸಾಮಾಜಿಕ ತಾಣದಲ್ಲಿ ಇದೇ ವಿಷಯದ ಬಗ್ಗೆಯೇ ತಾನೇಕು ಹೆಚ್ಚು ಮಾತನಾಡುತ್ತಿದ್ದೇನೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಖಾನ್ರನ್ನು ದೂಷಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದ ಸೋಮಿ ನಂತರ ಆ ಪೋಸ್ಟ್ ಅನ್ನು ಅಳಿಸಿದ್ದರು. ಇದೀಗ ಸೋಮಿ ತಮ್ಮದೇ ಸ್ಟೈಲಿಶ್ ಫೋಟೋದೊಂದಿಗೆ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ.
ಇದೇನು ಸ್ಫೋಟಕ ಮಾಹಿತಿಯಲ್ಲ ನಟಿ ಹೇಳಿಕೆ
ಅತ್ಯಾಚಾರ ಹಾಗೂ ಕೌಟುಂಬಿಕ ಹಿಂಸೆಗೆ ಒಳಗಾದ ಸಂತ್ರಸ್ತರಿಗಾಗಿ ಎನ್ಜಿಒವನ್ನು ಸೋಮಿ ನಡೆಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಉಂಟಾದ ನೋವನ್ನು ಸೋಮಿ, ತಾಣದಲ್ಲಿ ಹಂಚಿಕೊಂಡಿದ್ದು ಇದು ನನ್ನ ಜೀವನದಲ್ಲಿ ಘಟಿಸಿದ ಸತ್ಯ ಘಟನೆಯಾಗಿದೆ ಎಂದಿದ್ದಾರೆ.
ಸಲ್ಮಾನ್ ಖಾನ್ ಜೊತೆಗಿನ ನಿಂದನೀಯ ಸಂಬಂಧದ ಕುರಿತು ಮಾತನಾಡಲು ಇಷ್ಟು ಸಮಯ ಏಕೆ ಬೇಕಾಯಿತು? ಎಂಬ ಶೀರ್ಷಿಕೆ ನೀಡಿ ತಮ್ಮ ಸಂಬಂಧದ ಬಗ್ಗೆ ಬರೆದುಕೊಂಡಿರುವ ಸೋಮಿ, ಸಲ್ಮಾನ್ ಜೊತೆಗಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದೇಕೆ ಎಂಬುದರ ನಿಜವಾದ ಕಾರಣವನ್ನು ಮುಂದಿಟ್ಟಿದ್ದಾರೆ. ತಮ್ಮ ಕಥೆಯೇನು ಸ್ಫೋಟಕ ಸುದ್ದಿ ಅಥವಾ ಬ್ರೇಕಿಂಗ್ ನ್ಯೂಸ್ ಅಲ್ಲ ಎಂದು ತಿಳಿಸಿದ್ದಾರೆ.
ಎನ್ಜಿಒ ನಡೆಸುತ್ತಿರುವ ಸೋಮಿ
ಸೋಮಿ ತಾಣದಲ್ಲಿ ತಮ್ಮೊಳಗಿನ ನೋವನ್ನು ಹಂಚಿಕೊಂಡಿದ್ದು, ನಾನು ಸಲ್ಮಾನ್ ಖಾನ್ರಿಂದ ದೈಹಿಕವಾಗಿ ಕಿರುಕುಳಕ್ಕೊಳಪಟ್ಟಿದ್ದೆ ಎಂಬುದು 90 ರ ದಶಕದ ಪತ್ರಿಕೆಗಳಲ್ಲೇ ಸುದ್ದಿಯಾಗಲಿಲ್ಲ ಹಾಗಾಗಿ ಈಗ ಸುದ್ದಿಯಾಗುತ್ತದೆ ಎಂಬ ನಂಬಿಕೆ ನನಗಿಲ್ಲ ಎಂದು ಸೋಮಿ ತಿಳಿಸಿದ್ದಾರೆ.
ಈಗ ಈ ಸುದ್ದಿಯನ್ನು ನಿಮ್ಮೆಲ್ಲರ ಮುಂದೆ ತರುತ್ತಿದ್ದೇನೆ ಎಂದು ಸೋಮಿ ತಿಳಿಸಿದ್ದಾರೆ. ನಾನು ನಿಂದನೆಗೆ ಒಳಗಾದವರಿಗೆ ಹಾಗೂ ಸಂತ್ರಸ್ತರಿಗಾಗಿ ಎನ್ಜಿಒವನ್ನು ನಡೆಸುತ್ತಿದ್ದು, ನನ್ನ ಕಥೆ ಕೂಡ ಅವರ ಕಥೆಗಿಂತ ಬೇರೆಯಾಗಿಲ್ಲ ಎಂದು ತಿಳಿಸಿದ್ದಾರೆ
ಸಲ್ಮಾನ್ರನ್ನು ಸೋಮಿ ಭೇಟಿಯಾಗಿದ್ದೆಲ್ಲಿ?
ಸೋಮಿ 16 ರ ಹರೆಯದಲ್ಲೇ ಸಲ್ಮಾನ್ ಖಾನ್ರ ಅಭಿಮಾನಿಯಾಗಿದ್ದರು ಎಂದು ಹೇಳಿಕೊಂಡಿದ್ದಾರೆ. ಸಲ್ಮಾನ್ರನ್ನು ವಿವಾಹವಾಗುವ ಸಲುವಾಗಿಯೇ ಆಕೆ ಯುಎಸ್ನಿಂದ ಬಂದಿದ್ದರು, ಸಲ್ಮಾನ್ ಮೇಲೆ ಆಕೆ ಅಷ್ಟೊಂದು ಹುಚ್ಚರಾಗಿದ್ದರು ಎಂದು ತಿಳಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಸಲ್ಮಾನ್ರೊಂದಿಗೆ ತೆರೆ ಹಂಚಿಕೊಂಡ ಸೋಮಿ, ನಟನೊಂದಿಗೆ ರಿಲೇಶನ್ಶಿಪ್ನಲ್ಲಿದ್ದರು ಎಂದು ತಿಳಿಸಿದ್ದಾರೆ.
ಸೋಮಿಗೆ ಮೋಸ ಮಾಡಿದ್ದರು ಸಲ್ಮಾನ್ ಖಾನ್
ತಮ್ಮ ಹಿಂದಿನ ಅನೇಕ ಸಂದರ್ಶನಗಳಲ್ಲಿ ಆತ ಮೋಸ ಮಾಡಿದ್ದಕ್ಕಾಗಿ ಸಲ್ಮಾನ್ರೊಂದಿಗೆ ಬ್ರೇಕಪ್ ಮಾಡಬೇಕಾಯಿತು ಎಂದು ಸೋಮಿ ತಿಳಿಸಿದ್ದಾರೆ. ಸಲ್ಮಾನ್ ತಾಯಿ, ಸಲ್ಮಾಖಾನ್ರೊಂದಿಗೆ ಉತ್ತಮ ಒಡನಾಟ ಹೊಂದಿದ್ದೆ ಎಂದು ಸೋಮಿ ತಿಳಿಸಿದ್ದಾರೆ.
ತಮ್ಮ ಇತ್ತೀಚಿನ ಇನ್ಸ್ಟಾ ಸ್ಟೋರಿಯಲ್ಲಿ ಸೋಮಿ ಸಲ್ಮಾನ್ರೊಂದಿಗೆ 8 ವರ್ಷಗಳನ್ನು ಜೊತೆಯಾಗಿ ಕಳೆದಿರುವೆ ಎಂದು ತಿಳಿಸಿದ್ದು, ಇದು ನನ್ನ ಜೀವನದ ಕಹಿಯಾದ ವರ್ಷಗಳಾಗಿವೆ ಎಂದು ತಿಳಿಸಿದ್ದಾರೆ. ಸಲ್ಮಾನ್ ನನ್ನನ್ನು ಹೀನಾಯವಾಗಿ ನಡೆಸಿಕೊಂಡಿದ್ದರು, ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂದು ಅವನು ಒಬ್ಬ ಸ್ಯಾಡಿಸ್ಟ್ ಎಂದು ಸೋಮಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Tamannaah Bhatia: ಮಲಯಾಳಂ ಚಿತ್ರದಲ್ಲಿ ನಟಿ ತಮನ್ನಾ; ನಟ ದಿಲೀಪ್ಗೆ ಜೋಡಿಯಾದ ಮಿಲ್ಕಿ ಬ್ಯೂಟಿ
ಬಿಡುಗಡೆಯಾಗಲಿರುವ ಸಲ್ಮಾನ್ ಚಿತ್ರಗಳು
ಕಿಸೀ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರದ ಶೂಟಿಂಗ್ ಅನ್ನು ಸಲ್ಮಾನ್ ಪೂರ್ಣಗೊಳಿಸಿದ್ದಾರೆ. ಪೂಜಾ ಹೆಗ್ಡೆ, ಶೆಹನಾಜ್ ಗಿಲ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 2023 ರ ಈದ್ಗೆ ಚಿತ್ರ ಬಿಡುಗಡೆಗೊಳ್ಳಲಿದೆ. ಕತ್ರೀನಾ ಕೈಫ್ ಹಾಗೂ ಇಮ್ರಾನ್ ಹಶ್ಮಿಯೊಂದಿಗೆ ಟೈಗರ್ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೆಚ್ಚು ನಿರೀಕ್ಷಿತ ಚಿತ್ರವೆಂದೇ ಪರಿಗಣಿತವಾಗಿರುವ ಟೈಗರ್ 3, 2023 ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ