ಹಾರರ್ ಸಿನಿಮಾ ಮಾಡಿದರೆ ಹೀಗೆಲ್ಲಾ ಆಗುತ್ತಾ: ಶಾರ್ದೂಲ ಚಿತ್ರದ ಸಮಯದಲ್ಲಿ ಅದೇನಾಗಿತ್ತು ಗೊತ್ತಾ...?

ಚೇತನ್ ಚಂದ್ರ, ಕೃತಿಕಾ ರವೀಂದ್ರ, ರವಿತೇಜ, ಐಶ್ವರ್ಯಾ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳಿರುವ ಶಾರ್ದೂಲ ಚಿತ್ರದ ಶೂಟಿಂಗ್ ವೇಳೆ ಮೂರ್ನಾಲ್ಕು ಘಟನೆಗಳು ನಡೆದಿದ್ದವಂತೆ.

ಶಾರ್ದೂಲ ಸಿನಿಮಾದಲ್ಲಿ ರವಿತೇಜ

ಶಾರ್ದೂಲ ಸಿನಿಮಾದಲ್ಲಿ ರವಿತೇಜ

  • Share this:
ಸಾಮಾನ್ಯವಾಗಿ ಶೂಟಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಅವಘಡಗಳು ಸಂಭವಿಸಿದಾಗ ಅಷ್ಟೊಂದು ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಹಾರರ್ ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ಏನಾದರೂ ಸಣ್ಣ ಅಪಘಾತ ಸಂಭವಿಸಿದರೂ ಏನೋ ಹೆಚ್ಚು ಕಡಿಮೆ ಆಗಿರಬೇಕು. ಇದು ದುಷ್ಟ ಶಕ್ತಿಯ ಕೈವಾಡವೇ ಇರಬಹುದು, ಅದೂ ಇದೂ ಅಂತ ನೂರೆಂಟು ಆಲೋಚನೆಗಳು ಬರತೊಡಗುತ್ತವೆ. ಅಂಥದ್ದೇ ಇಕ್ಕಟ್ಟಿಗೆ ಶಾರ್ದೂಲ ಸಿನಿಮಾ ಕೂಡ ಸಿಲುಕಿಕೊಂಡ ಘಟನೆ ನಡೆದಿದೆ. ಅಂದ ಹಾಗೆ ಶಾರ್ದೂಲ ಚಿತ್ರದ ಟ್ಯಾಗ್‍ಲೈನ್ `ದೆವ್ವ ಇರಬಹುದಾ?'...!

ಹೌದು, ಚೇತನ್ ಚಂದ್ರ, ಕೃತಿಕಾ ರವೀಂದ್ರ, ರವಿತೇಜ, ಐಶ್ವರ್ಯಾ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳಿರುವ ಶಾರ್ದೂಲ ಚಿತ್ರದ ಶೂಟಿಂಗ್ ವೇಳೆ ಮೂರ್ನಾಲ್ಕು ಘಟನೆಗಳು ನಡೆದಿದ್ದವಂತೆ. ಹಾರರ್ ಸಿನಿಮಾಗಳ ಚಿತ್ರೀಕರಣದ ವೇಳೆ ಇದೆಲ್ಲಾ ಕಾಮನ್ ಅಂತ ಚಿತ್ರತಂಡ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಶೂಟಿಂಗ್ ಸಮಯದಲ್ಲಾದ ಘಟನೆಯನ್ನು ನಟ ರವಿತೇಜ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು. `ಸೀನ್ ಒಂದರ ಶೂಟಿಂಗ್‍ಗಾಗಿ ಸಿದ್ಧತೆ ನಡೆಯುತ್ತಿತ್ತು. ಆಗ ನಾಯಕಿ ಕೃತಿಕಾ ರವೀಂದ್ರ ಅವರು ದೊಡ್ಡ ಗಾಜಿನ ಬಾಗಿಲುಗಳ ಬಳಿ ನಿಂತಿದ್ದರು. ಅವರನ್ನು ಡೈರೆಕ್ಟರ್ ಅರವಿಂದ್ ಕೌಶಿಕ್ ಸರ್ ಡೈಲಾಗ್ಸ್ ಬಗ್ಗೆ ಮಾತನಾಡಲು ಕರೆದರು. ಕೃತಿಕಾ ಅಲ್ಲಿಂದ ಎರಡು ಹೆಜ್ಜೆ ಇಡುವಷ್ಟರಲ್ಲಿ ಆ ಗಾಜಿನ ಬಾಗಿಲು ದಢಾರ್ ಎಂದು ಶಬ್ದ ಮಾಡುತ್ತಾ ಕೆಳಗೆ ಬಿದ್ದು ಸಂಪೂರ್ಣ ಪುಡಿಯಾಯಿತು. ಹಾಗೇನಾದರೂ ಕೃತಿಕಾ ಬಾಗಿಲ ಬಳಿಯೇ ನಿಂತಿರುತ್ತಿದ್ದರೆ ಏನಾದರೂ ಅನಾಹುತವಾಗಿರುತ್ತಿತ್ತು' ಎಂದು ಮಾಹಿತಿ ಹಂಚಿಕೊಂಡರು ರವಿತೇಜ.

ಇದನ್ನೂ ಓದಿ: Fighter: ಹೃತಿಕ್​ ರೋಷನ್- ದೀಪಿಕಾ ಪಡುಕೋಣೆ ಅಭಿನಯದ ಫೈಟರ್​ ಸಿನಿಮಾದ ರಿಲೀಸ್​ ದಿನಾಂಕ ಫಿಕ್ಸ್​

ಇದೇ ಸಂದರ್ಭದಲ್ಲಿ ಮಾತನಾಡಿದ ನಾಯಕ ಚೇತನ್ ಚಂದ್ರ, `ಈ ಕೊರೋನಾ ಕಾಲದಲ್ಲಿ ಹಲವು ಆಪ್ತರನ್ನು ಕಳೆದುಕೊಂಡಿರುವ ದುಃಖವಿದೆ. ಈ ಕೊರೋನಾದಿಂದಾಗಿ ಯಾರೆಲ್ಲ ಮನೆಯಲ್ಲಿ ಲಾಕ್ ಇದ್ದರೋ, ಅವರಿಗೆಲ್ಲ ಶಾರ್ದೂಲ ಒಂದೊಳ್ಳೆ ಸಿನಿಮಾ. ನಟನೆ, ತಾಂತ್ರಿಕತೆ ಎಲ್ಲ ವಿಷಯದಲ್ಲೂ ಸಿನಿಮಾ ಚೆನ್ನಾಗಿ ಮೂಡಿಬಂದಿದೆ' ಎಂದು ನಿರೀಕ್ಷೆ ವ್ಯಕ್ತಪಡಿಸಿದರು.

ಇನ್ನು ನಾಯಕಿ ಕೃತಿಕಾ ರವೀಂದ್ರ ಅವರು ಈ ಚಿತ್ರದಲ್ಲಿ ತಮ್ಮ ಮೇಲೆ ತಾವೇ ಎಕ್ಸ್‍ಪೆರಿಮೆಂಟ್ ಮಾಡಿಕೊಂಡಿದ್ದಾರಂತೆ. ಅಂದ್ಹಾಗೆ ಅವರದ್ದು ಇಲ್ಲಿ ತುಂಬಾ ಭಯ ಪಟ್ಟಿಕೊಳ್ಳುವ ದೀಕ್ಷಾ ಎಂಬ ಯುವತಿಯ ಪಾತ್ರವಂತೆ. ಚಿತ್ರದಲ್ಲಿ ಕ್ಯೂರಿಯಸ್ ಹಾಗೂ ಬೋಲ್ಡ್ ಹುಡುಗಿಯಾಗಿ ಐಶ್ವರ್ಯಾ ಪ್ರಸಾದ್ ನಟಿಸಿದ್ದಾರಂತೆ. ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Kangana Ranaut: ಲೇಸ್ ಬ್ರಾಲೆಟ್​ ಡ್ರೆಸ್​ನಲ್ಲಿ ಕಂಗನಾ: ಧಾಕಡ್​ ಸಿನಿಮಾದ ಪಾರ್ಟಿ ಫೋಟೋಗಳು ವೈರಲ್​

ಇನ್ನು ಶೇಕಡಾ 50ರಷ್ಟು ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ನೀಡಿ ಹಲವು ದಿನಗಳೇ ಕಳೆದಿವೆ. ಆದರೂ ಕೊರೋನಾ ಮೂರನೇ ಅಲೆಯ ಆತಂಕದಲ್ಲಿ ಥಿಯೇಟರ್​ಗಳು ಬಾಗಿಲು ತೆರೆಯಲು ಮೀನಮೇಷ ಎಣಿಸುವಂತ ದುಸ್ಥಿತಿ. ಅದರ ನಡುವೆಯೂ ಕೆಲ ಸಿನಿಮಾಗಳು ಧೈರ್ಯ ಮಾಡಿ ಬಾಗಿಲು ತೆರೆದಿರುವ ಕೆಲವೇ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ ರಿಲೀಸ್ ಆಗುತ್ತಿವೆ. ಅದೇ ರೀತಿ ಸುಮಾರು 50 ಸ್ಕ್ರೀನ್‍ಗಳಲ್ಲಿ ಶಾರ್ದೂಲ ಸಿನಿಮಾ ಕೂಡ ಇದೇ ಆಗಸ್ಟ್ 20ರಂದು ರಿಲೀಸ್ ಆಗಲಿದೆ. ಮೂರು ವರ್ಷಗಳ ಹಿಂದೆ ಸಿನಿಮಾ ಪ್ರಾರಂಭಿಸಿದೆವು. ಕಳೆದ ಒಂದೂವರೆ ವರ್ಷದಿಂದ ರಿಲೀಸ್‍ಗೆ ರೆಡಿಯಿದ್ದರೂ ಮುಂದೂಡುತ್ತಾ ಬಂದಿದ್ದೆವು. ಆದರೆ ಈಗ ರಿಲೀಸ್ ಮಾಡಲು ಧೈರ್ಯ ಮಾಡಿದ್ದೇವೆ. ಯಾಕೆಂದರೆ ಈಗ ರಿಲೀಸ್ ಮಾಡದಿದ್ದರೆ ಇನ್ನೂ ಒಂದು ವರ್ಷ ಪೋಸ್ಟ್‍ಪೋನ್ ಮಾಡಬೇಕಾಗುತ್ತದೆ' ಎಂದು ನಿರ್ಮಾಪಕರಾದ ರೋಹಿತ್ ಮತ್ತು ಕಲ್ಯಾಣ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
Published by:Anitha E
First published: