‘ದಾರಿ ತೋರಿಸಿದವರನ್ನೇ ಮರೆತ ರಶ್ಮಿಕಾ ಮಂದಣ್ಣ’; ಟ್ವಿಟ್ಟರ್​ನಲ್ಲಿ ಗರಂ ಆದ್ರು ಅಭಿಮಾನಿಗಳು

ಹುಟ್ಟು ಹಬ್ಬಕ್ಕೆ ರಶ್ಮಿಕಾ ವಿಶ್​ ಮಾಡದೆ ಇರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ಕೆರಿಯರ್​ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವ ರಕ್ಷಿತ್​ ಅವರನ್ನೇ ರಶ್ಮಿಕಾ ಮರೆತಿದ್ದು ಎಷ್ಟು ಸರಿ ಎಂಬುದು ಅಭಿಮಾನಿಗಳ ಪ್ರಶ್ನೆ.

news18
Updated:June 7, 2019, 12:03 PM IST
‘ದಾರಿ ತೋರಿಸಿದವರನ್ನೇ ಮರೆತ ರಶ್ಮಿಕಾ ಮಂದಣ್ಣ’; ಟ್ವಿಟ್ಟರ್​ನಲ್ಲಿ ಗರಂ ಆದ್ರು ಅಭಿಮಾನಿಗಳು
ರಶ್ಮಿಕಾ ಮಂದಣ್ಣ-ರಕ್ಷಿತ್​ ಶೆಟ್ಟಿ
  • News18
  • Last Updated: June 7, 2019, 12:03 PM IST
  • Share this:
ಕಳೆದ ವರ್ಷ ರಕ್ಷಿತ್​ ಶೆಟ್ಟಿ ಜನ್ಮ ದಿನದಂದು ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡುವ ಮೂಲಕ ಇಬ್ಬರ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರವನ್ನು ಅಧಿಕೃತ ಮಾಡಿದ್ದರು. ಆದರೆ, ಅವರ ಸಂಬಂಧ ಮುರಿದು ಬಿದ್ದಿತ್ತು. ನಂತರ ಇಬ್ಬರೂ ಬೇರೆ ಬೇರೆ ಆಗಿದ್ದರು. ಆದರೆ, ಅಭಿಮಾನಿಗಳು ಮಾತ್ರ ಈ ವಿಚಾರವನ್ನು ಬಿಟ್ಟಂತೆ ಕಾಣುವುದಿಲ್ಲ. ಈಗ ರಕ್ಷಿತ್​ ಜನ್ಮದಿನಕ್ಕೆ ರಶ್ಮಿಕಾ ಮಂದಣ್ಣ ವಿಶ್​ ಮಾಡದೆ ಇರುವದಕ್ಕೆ ಅನೇಕರು ರಶ್ಮಿಕಾ ಮೇಲೆ ಸಿಟ್ಟಾಗಿದ್ದಾರೆ!

ರಶ್ಮಿಕಾ-ರಕ್ಷಿತ್​ ಸಂಬಂಧ ಮುರಿದು ಬಿದ್ದ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ವಿಚಾರದಲ್ಲಿ ಏನನ್ನು ಕೇಳಬೇಡಿ ಎಂದು ಮಾಧ್ಯಮದ ಜೊತೆ ಮಾತನಾಡುವಾಗ ರಶ್ಮಿಕಾ ಸೂಚ್ಯವಾಗಿ ಹೇಳಿದ್ದರು. ಇವರ ಸಂಬಂಧ ಅಂತ್ಯವಾಗಲು ರಶ್ಮಿಕಾ ಕಾರಣ ಎಂದು ರಕ್ಷಿತ್​ ಅಭಿಮಾನಿಗಳು ಕಿಡಿಕಾಡಿದ್ದರು. ಇದಕ್ಕೆ ಬೇಸರಗೊಂಡಿದ್ದ ರಕ್ಷಿತ್​, ‘ರಶ್ಮಿಕಾ ಏನೆಂದು ನನಗೆ ಗೊತ್ತು’ ಎನ್ನುವ ಮೂಲಕ ರಶ್ಮಿಕಾ ಪರ ಬ್ಯಾಟ್​ ಬೀಸಿದ್ದರು.

ಹೀಗಿದ್ದರೂ ರಕ್ಷಿತ್​ ಹುಟ್ಟು ಹಬ್ಬಕ್ಕೆ ರಶ್ಮಿಕಾ ವಿಶ್​  ಮಾಡದೆ ಇರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ರಶ್ಮಿಕಾಗೆ ಹಿಟ್​ ಕೊಟ್ಟ ಚಿತ್ರ ಕಿರಿಕ್​ ಪಾರ್ಟಿ. ಈ ಚಿತ್ರಕ್ಕೆ ಅವರನ್ನು ಕರೆತಂದಿದ್ದು ರಕ್ಷಿತ್​. ಈಗ ಅವರ ಕೆರಿಯರ್​ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವ ರಕ್ಷಿತ್​ ಅವರನ್ನೇ ಮರೆತಿದ್ದು ಎಷ್ಟು ಸರಿ ಎಂಬುದು ಅಭಿಮಾನಿಗಳ ಪ್ರಶ್ನೆ.

ಇದನ್ನೂ ಓದಿ: ಲೇಟ್ ಆದರೂ ಲೇಟೆಸ್ಟ್ ಆಗಿ ಬಂದ ‘ಅವನೇ ಶ್ರೀಮನ್ನಾರಾಯಣ’; ಟೀಸರ್​ಗೆ ಭಾರೀ ಮೆಚ್ಚುಗೆ

ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಮಂದಣ್ಣ 'ಡಿಯರ್​ ಕಾಮ್ರೇಡ್​' ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು ಶೀಘ್ರವೇ ತೆರೆಗೆ ಬರುತ್ತಿದೆ. 'ಗೀತ ಗೋವಿಂದಂ' ತೆರೆಕಂಡ ನಂತರ ವಿಜಯ್​ ದೇವರಕೊಂಡ-ರಶ್ಮಿಕಾ ಮಂದಣ್ಣ ಈ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ.

First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ