• Home
  • »
  • News
  • »
  • entertainment
  • »
  • Madhuri Dixit: ಮದುವೆ ಆದ್ರೂ ಡಾನ್ಸ್​ ಮಾಡ್ತೀರಾ? ಸುಮ್ಮನೆ ಮನೇಲಿರಿ ಅಂದಿದ್ರಂಥೆ ಅವ್ರು!

Madhuri Dixit: ಮದುವೆ ಆದ್ರೂ ಡಾನ್ಸ್​ ಮಾಡ್ತೀರಾ? ಸುಮ್ಮನೆ ಮನೇಲಿರಿ ಅಂದಿದ್ರಂಥೆ ಅವ್ರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಧುರಿ ದೀಕ್ಷಿತ್‌ ಮದುವೆಯಾದ ಆದ ನಂತರ ನೃತ್ಯ ಮಾಡಿದ್ದಕ್ಕೆ ಜನಸಾಮಾನ್ಯರು ಮದುವೆಯಾಗಿ ಮಕ್ಕಳು ಆದ ಮೇಲೂ ಈ ಡ್ಯಾನ್ಸ್‌ ಎಲ್ಲ ಯಾಕೆ? ಸುಮ್ಮನೆ ಮನೆ ನೋಡಿಕೊಂಡು ಸಂಸಾರ ಮಾಡಿಕೊಂಡು ಹೋಗುವುದಕ್ಕೆ ನಿಮ್ಗೆ ಆಗುವುದಿಲ್ಲವೇ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದರೆ.

ಮುಂದೆ ಓದಿ ...
  • Share this:

ಬಾಲಿವುಡ್‌ನ (Bollywood) ಧಕ್‌ ಧಕ್‌ ಬೆಡಗಿ ಎಂದೇ ಮಾಧುರಿ ದೀಕ್ಷಿತ್‌ (Madhuri Dixit) ಅವರು ಪ್ರಸಿದ್ಧರು. ಇವರ ಡ್ಯಾನ್ಸ್‌ಗೆ (Dance) ಫೀದಾ ಆಗದ ಅಭಿಮಾನಿಗಳೇ ಇಲ್ಲ ಎಂದು ಹೇಳಬಹುದು. ಅಷ್ಟು ಅದ್ಭುತವಾದ (Wonderful) ನೃತ್ಯಗಾರ್ತಿ ಈ ನಟಿ. ಇವರು ಹಿಂದಿ ಸಿನಿಮಾದಲ್ಲಿ(Hindi Cinima) ನಟಿಸಿದರೂ ಕೂಡ ಅವರ ನೃತ್ಯ ಪ್ರದರ್ಶನಗಳಿಂದಲೇ ಅವರು ಜನಸಾಮಾನ್ಯರಿಗೆ ಚಿರಪರಿಚಿತ (Well Known to the masses) ನಟಿಯಾಗಿ ಹೊರಹೊಮ್ಮಿದ್ದರು. ಈಗಲೂ ಮಾಧುರಿ ದೀಕ್ಷಿತ್‌ ಎಂದ್ರೆ ಪಡ್ಡೆ ಹುಡುಗರ ಹೃದಯ ಜೋರಾಗಿ ಬಡಿದುಕೊಳ್ಳುವಷ್ಟು ಫೇಮಸ್‌(Famous)ಇವರು.


ಸಾಂದರ್ಭಿಕ ಚಿತ್ರ


ಇದನ್ನೂ  ಓದಿ: Madhuri Dixit: ಧಕ್ ಧಕ್ ಬೆಡಗಿ ಮಾಧುರಿ ಹೊಸ ಲುಕ್! ಚೋಲಿ ಕೆ ಪೀಚೆ ಕ್ಯಾ ಹೇ ಎಂದ್ರು ಫ್ಯಾನ್ಸ್


ಬಾಲಿವುಡ್‌ ಬೆಡಗಿ ಫೇಮಸ್‌ ನೃತ್ಯಗಾರ್ತಿ


ಇವರ ನೃತ್ಯವನ್ನು ಮೆಚ್ಚದ ಸಿನಿ ಪ್ರಿಯರೇ ಇಲ್ಲ. ಆದರೆ ಅವರು ಮದುವೆಯಾದ ಆದ ನಂತರ ನೃತ್ಯ ಮಾಡಿದ್ದಕ್ಕೆ ಜನಸಾಮಾನ್ಯರು ಮದುವೆಯಾಗಿ ಮಕ್ಕಳು ಆದ ಮೇಲೂ ಈ ಡ್ಯಾನ್ಸ್‌ ಎಲ್ಲ ಯಾಕೆ? ಸುಮ್ಮನೆ ಮನೆ ನೋಡಿಕೊಂಡು ಸಂಸಾರ ಮಾಡಿಕೊಂಡು ಹೋಗುವುದಕ್ಕೆ ನಿಮ್ಗೆ ಆಗುವುದಿಲ್ಲವೇ? ಎಂದು ಅವರನ್ನು ಸಾಕಷ್ಟು ಜನ ಈ ಹಿಂದೆ ಪ್ರಶ್ನಿಸಿದ್ದರು ಎಂದು ಮಾಧುರಿ ಅವರೇ ಒಂದು ಸಂದರ್ಶನದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ಮುಂದೆ ತಿಳಿದುಕೊಳ್ಳೋಣ ಬನ್ನಿ.


ಜನರು ಯಾವುದಕ್ಕೆ ಮಾತನಾಡುವುದಿಲ್ಲ ಹೇಳಿ, ಮಹಿಳೆಯರು ಎಂದ್ರೆ ಮದುವೆ, ಮಕ್ಕಳು ಇಷ್ಟೆ ಎಂದು ತಿಳಿದವರೇ ಜಾಸ್ತಿ. ಈ ಸಮಸ್ಯೆ ಸೆಲೆಬ್ರೆಟಿಗಳನ್ನು ಕಾಡುತ್ತೆ ಅನ್ನೊದಕ್ಕೆ ಮಾಧುರಿ ದೀಕ್ಷಿತ್‌ ಅವರು ಕೂಡ ಸಾಕ್ಷಿಯಾಗಿದ್ದಾರೆ. ಅವರು ಮದುವೆ ಮತ್ತು ಮಕ್ಕಳಾದ ನಂತರ ಡ್ಯಾನ್ಸ್‌ ಶೋ ಮಾಡಿದ್ದಕ್ಕೆ ಜನರು ನನ್ನನ್ನು ಒಮ್ಮೆ ಪ್ರಶ್ನೆ ಮಾಡಿದ್ದರು ಎಂದು ಹಳೆಯ ಸಂಗತಿಯನ್ನು ಈಗ ನೆನಪಿಸಿಕೊಂಡಿದ್ದಾರೆ. ಆದರೆ ನನ್ನ ಕುಟುಂಬದವರ ಬೆಂಬಲದಿಂದ ನನಗೆ ಯಾವ ತೊಂದರೆಯೂ ಕೂಡ ಆಗಲಿಲ್ಲ ಎಂದು ಮಾಧುರಿ ಅವರು ಹೇಳಿಕೊಂಡಿದ್ದಾರೆ.


ಇದನ್ನೂ  ಓದಿ: Madhuri Dixit PhotoShoot: ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ದಿಲ್ ಖುಷ್ ಫೋಟೋ ಇಲ್ಲಿವೆ ನೋಡಿ


ನೀವು ಡ್ಯಾನ್ಸ್‌ ಮಾಡಬೇಡಿ, ಸುಮ್ಮನೆ ಮನೆ, ಮಕ್ಕಳನ್ನು ನೋಡಿಕೊಳ್ಳಿʼ


ಮಾಧುರಿ ದೀಕ್ಷಿತ್ ಅವರು ಹೊಸ ಸಂದರ್ಶನವೊಂದರಲ್ಲಿ, “ತಾನು ಮದುವೆಯಾಗಿ ತಾಯಿಯಾದ ನಂತರ ಜನರು ತಮ್ಮ ದೃಷ್ಟಿಕೋನವನ್ನು ಹೇಗೆ ಬದಲಾಯಿಸಿಕೊಂಡರು ಎಂಬುದರ ಕುರಿತು ಮಾತನಾಡಿದ್ದಾರೆ. ಮಾಧುರಿ ದೀಕ್ಷಿತ್‌ ಅವರು ಇಬ್ಬರು ಪುತ್ರರ ಜನನದ ನಂತರ ಸಿನಿ ವೃತಿಜೀವನದಿಂದ ವಿರಾಮ ತೆಗೆದುಕೊಂಡರು. ಈ ಬಗ್ಗೆ ಮಾತನಾಡಿದ ನಟಿ, ನಾನು ತಾಯಿಯಾದ ನಂತರ ಜನರು ಮನೆಯಲ್ಲಿ ಇರಿ , ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳಿ, ಅದು ಬಿಟ್ಟು ಈ ಡ್ಯಾನ್ಸ್‌ ಎಲ್ಲ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ ಜನರ ಮಾತಿಗೆ ನಾನು ಮತ್ತು ನನ್ನ ಕುಟುಂಬದವರು ಯಾವತ್ತೂ ತಲೆಕೆಡಿಸಿಕೊಳ್ಳಲಿಲ್ಲ” ಎಂದು ಹೇಳಿಕೊಂಡಿದ್ದಾರೆ.


ಅಬೋಧ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ


ಮಾಧುರಿ ದೀಕ್ಷಿತ್‌ ಅವರು 1984 ರಲ್ಲಿ ಅಬೋಧ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು 1999 ರಲ್ಲಿ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ಈ ದಂಪತಿಗಳು 2003 ರಲ್ಲಿ ತಮ್ಮ ಮೊದಲ ಮಗ ಅರಿನ್ ಮತ್ತು 2005 ರಲ್ಲಿ ರಯಾನ್ ಅವರನ್ನು ಪಡೆದರು. ಇದರ ನಂತರ, ಮಾಧುರಿ ದೀಕ್ಷಿತ್‌ ಅವರು ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡು US ಗೆ ತೆರಳಿದರು.


ನಂತರ ಅಲ್ಲಿ ಅವರು ಗೃಹಿಣಿಯಾಗಿ ತಮ್ಮ ಕುಟುಂಬ ಜೀವನವನ್ನು ನಿರ್ವಹಿಸುತ್ತಿದ್ದರು. 2007 ರಲ್ಲಿ, ಅವರು ಆಜಾ ನಾಚ್ಲೆ ಸಿನಿಮಾದ ಮೂಲಕ ಬಾಲಿವುಡ್‌ಗೆ ಪುನರಾಗಮನ ಮಾಡಿದ್ದರು. ಇತ್ತೀಚೆಗೆ ಮಜಾ ಮಾ ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾದಲ್ಲಿ ಅವರು ಗೃಹಿಣಿಯ ಪಾತ್ರವನ್ನು ನಿರ್ವಹಿಸಿದ್ದಾರೆ.


ಗೃಹಿಣಿಯರು ತಮ್ಮದೇ ಆದ ಗುರುತನ್ನು ಹೊಂದಿದ್ದರೂ ಸಹ ಜನರು ಅವರನ್ನು ಕೇವಲವಾಗಿ ಪರಿಗಣಿಸುತ್ತಾರೆ ಎಂದು ಮಾಧುರಿ ಹೇಳಿದರು.


ಜನರು ಗೃಹಿಣಿಯರನ್ನು ಕೇವಲವಾಗಿ ನೋಡುತ್ತಾರೆ.


“ಜನರು ಗೃಹಿಣಿಯರನ್ನು ಕೇವಲವಾಗಿ ನೋಡುತ್ತಾರೆ. ಗೃಹಿಣಿಯಾದವರು ತಮ್ಮ ಇಷ್ಟವಾದ ನೃತ್ಯ ಅಥವಾ ಸಿನಿಮಾ ಹೀಗೆ ಯಾವುದನ್ನೆ ಮಾಡಿದರೂ ಸಹ ಇದನ್ನು ಮಾಡುವುದು ಇವಳಿಗೆ ಅವಶ್ಯಕವಿದೆಯೇ? ಎಂಬ ಧೋರಣೆಯನ್ನು ಜನರು ಹೊಂದಿರುವುದು ಯಾವಾಗಲೂ ಸಹಜವಾದ ವಿಚಾರವಾಗಿದೆ” ಎಂದು ಮಾಧುರಿ ದೀಕ್ಷಿತ್‌ ಅವರು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ನಾನು ಪುನೀತ್​ ವ್ಯಕ್ತಿತ್ವದ ಅಭಿಮಾನಿ, ಅಪ್ಪು ವಿಶ್ವಮಾನವ- ಜೇಮ್ಸ್ ಡೈರೆಕ್ಟರ್ ಚೇತನ್


ಮಾಧುರಿ ದೀಕ್ಷಿತ್‌ ಅವರು “ಎಲ್ಲರ ಮಾತನ್ನು ಆಲಿಸಿ, ಆದರೆ ನಿಮಗೆ ಇಷ್ಟ ಬಂದಂತೆ ಮಾಡಿ" ಎಂಬ ಮರಾಠಿ ಮಾತನ್ನು ಉಲ್ಲೇಖಿಸಿದಳು. ಅವರು ಕುಚ್ ತೋ ಲೋಗ್ ಕೆಹೆಂಗೆ (ಜನರು ಏನ್ನನ್ನು ಆದರೂ ಹೇಳುತ್ತಾರೆ, ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಬೇಡಿ) ಎಂಬ ಹಾಡನ್ನು ಸೇರಿಸಿದರು ಮತ್ತು ಇಂತಹ ಯಾವುದೇ ಅಡೆ ತಡೆಗಳು ನನ್ನ ನೃತ್ಯವನ್ನು ನಿಲ್ಲಿಸಲಿಲ್ಲ. ಅದರ ಜೊತೆಗೆ ನನ್ನ ಪತಿ, ತಾಯಿ ಮತ್ತು ನನ್ನ ಅತ್ತೆಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ಹೇಳಿಕೊಂಡಿದ್ದಾರೆ.

First published: