Soha Ali Khan: ನಟಿ ಸೋಹಾ ಅಲಿ ಖಾನ್ ಚರ್ಮದ ಆರೈಕೆ ಹೀಗೆ ಮಾಡೋದಂತೆ, ಬ್ಯೂಟಿ ಸೀಕ್ರೆಟ್ ಹೇಳಿದಾರೆ ನೋಡಿ!

ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಅವರು ಸದಾ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿರುವ ಪುಟದಲ್ಲಿ ತಮ್ಮ ಆರೋಗ್ಯಕರ ಆಹಾರ ಕ್ರಮ, ಫಿಟ್ನೆಸ್ ಮತ್ತು ಅವರ ದೈನಂದಿನ ಜೀವನಕ್ಕೆ ನಿರ್ಣಾಯಕವಾಗಿರುವ ಅನೇಕ ಒಳ್ಳೆಯ ಅಂಶಗಳ ಬಗ್ಗೆ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ

ಸೋಹಾ ಅಲಿ ಖಾನ್

ಸೋಹಾ ಅಲಿ ಖಾನ್

  • Share this:
ಈ ಚಲನಚಿತ್ರೋದ್ಯಮದಲ್ಲಿರುವ ನಟಿಯರು (Actress) ತಮ್ಮ ಚಲನಚಿತ್ರಗಳ ಚಿತ್ರೀಕರಣಗಳಲ್ಲಿ ಪಾತ್ರಕ್ಕೆ ತಕ್ಕಂತೆ ಮೇಕಪ್ (Makeup) ಮಾಡಿಕೊಳ್ಳಬೇಕಾಗುತ್ತದೆ. ಚಿತ್ರೀಕರಣದ ನಂತರ ಅವರು ತಮ್ಮ ಮುಖದ (Face) ಚರ್ಮದ (Skin) ಆರೈಕೆಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅವರ ಅಭಿಮಾನಿಗಳಿಗೆ ಅನೇಕ ರೀತಿಯ ಪ್ರಶ್ನೆಗಳು ಇರುತ್ತವೆ. ಕೆಲವು ನಟಿಯರು ತಮ್ಮ ಮುಖದ ಚರ್ಮದ ಆರೈಕೆಗಾಗಿ (Facial skin care) ಕೆಲವು ದುಬಾರಿ ಬೆಲೆಯ ಕ್ರೀಮ್ ಗಳನ್ನು (Cream) ಅವಲಂಬಿಸಿದರೇ, ಇನ್ನೂ ಕೆಲವರು ತಮ್ಮ ಚರ್ಮದ ಆರೈಕೆಗೆ ಬೇಕಾಗುವ ಕ್ರೀಮ್ ಗಳನ್ನು ಮನೆಯಲ್ಲಿಯೇ ಲಭ್ಯವಿರುವ ಪದಾರ್ಥಗಳ ಸಹಾಯದಿಂದ ತಯಾರಿಸಿಕೊಳ್ಳುತ್ತಾರೆ.

ಇಲ್ಲೊಬ್ಬ ಬಾಲಿವುಡ್ ನಟಿ ತಮ್ಮ ಚರ್ಮದ ಆರೈಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ ಮತ್ತು ಫಿಟ್ ಆಗಿರಲು ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ.

ಸೌಂದರ್ಯ ರಹಸ್ಯ ಮತ್ತು ಮನೆಮದ್ದುಗಳನ್ನು ಹಂಚಿಕೊಂಡ ನಟಿ
ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಅವರು ಸದಾ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿರುವ ಪುಟದಲ್ಲಿ ತಮ್ಮ ಆರೋಗ್ಯಕರ ಆಹಾರ ಕ್ರಮ, ಫಿಟ್ನೆಸ್ ಮತ್ತು ಅವರ ದೈನಂದಿನ ಜೀವನಕ್ಕೆ ನಿರ್ಣಾಯಕವಾಗಿರುವ ಅನೇಕ ಒಳ್ಳೆಯ ಅಂಶಗಳ ಬಗ್ಗೆ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇತ್ತೀಚೆಗೆ ಮುಂಬೈನಲ್ಲಿ ಆಲ್ಮಂಡ್ ಬೋರ್ಡ್ ಆಫ್ ಕ್ಯಾಲಿಫೋರ್ನಿಯಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಬಾಲಿವುಡ್ ಸೆಲೆಬ್ರಿಟಿ ಬಂದಿದ್ದರು. ಅಲ್ಲಿ ಅವರು ಸೌಂದರ್ಯಕ್ಕಾಗಿ ಹೇಗೆ ಬಾದಾಮಿ ಉತ್ತಮವಾದದ್ದು ಎನ್ನುವುದರ ಬಗ್ಗೆ ಮಾತ್ರವಲ್ಲದೆ, ಅವರು ನಂಬುವ ಸೌಂದರ್ಯ ರಹಸ್ಯಗಳು ಮತ್ತು ಉತ್ತಮ ಹಳೆಯ ಮನೆಮದ್ದುಗಳನ್ನು ಹಂಚಿಕೊಂಡರು. ಅನೇಕರಂತೆ, ಸಮಗ್ರ ಜೀವನಶೈಲಿಯನ್ನು ಅನುಸರಿಸುವುದರ ಜೊತೆಗೆ ಪ್ರತಿದಿನ ಮುಷ್ಟಿಯಷ್ಟು ಬಾದಾಮಿ ಚರ್ಮದ ಆರೋಗ್ಯಕ್ಕೆ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಸೋಹಾ ನಂಬುತ್ತಾರೆ.

ಇವರು ಬಳಸುವ ಸ್ಕಿನ್‌ಕೇರ್ ತಂತ್ರ
ನೀವು ಯಾವ ಸ್ಕಿನ್‌ಕೇರ್ ತಂತ್ರವನ್ನು ಅನುಸರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ನಟಿ ಸೋಹಾ ಅಲಿ ಖಾನ್ "ನಾನು ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಎಂಬ ಮೂರು ಹಂತದ ತಂತ್ರವನ್ನು ನಂಬುತ್ತೇನೆ ಮತ್ತು ಇದು ನನಗೆ ಬಹಳ ಮುಖ್ಯವಾಗಿದೆ. ಈ ದಿನಚರಿಗಾಗಿ ನಾನು ಪ್ರತಿದಿನ ರಾತ್ರಿ 6 ನಿಮಿಷಗಳನ್ನು ತೆಗೆದುಕೊಳ್ಳುತ್ತೇನೆ. ನಿಮ್ಮ ಚರ್ಮದ ಆರೈಕೆಯ ಬಹಳಷ್ಟು ಭಾಗವು ನಿಮ್ಮ ಯಾವ ಆಹಾರವನ್ನು ಸೇವಿಸುತ್ತಿರಿ ಎಂಬುದರಿಂದ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ಹಿಡಿ ಬಾದಾಮಿ ನಿಮ್ಮ ಚರ್ಮಕ್ಕೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ" ಎಂದು ಸೋಹಾ ಹೇಳಿದ್ದಾರೆ.

ಮುಖದ ಚರ್ಮಕ್ಕೆ ಬಳಸುವ ಮನೆಮದ್ದು
ನಿಮ್ಮ ಮುಖದ ಚರ್ಮಕ್ಕೆ ನೀವು ಯಾವ ಮನೆಮದ್ದುಗಳನ್ನು ಬಳಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಸೋಹಾ ಅವರು "ನಮ್ಮ ಅಡುಗೆಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ಬಾದಾಮಿ, ಜೇನುತುಪ್ಪ, ಅರಿಶಿನ ಮತ್ತು ಇತರ ಅನೇಕ ಪದಾರ್ಥಗಳನ್ನು ಬಳಸಿಕೊಂಡು ನಾನು ಮನೆಯಲ್ಲಿ ತಯಾರಿಸಿದ ಅನೇಕ ಫೇಸ್ ಮಾಸ್ಕ್ ಗಳನ್ನು ಬಳಸುತ್ತೇನೆ.

ಇದನ್ನೂ ಓದಿ: Triphala Benefits: ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ತ್ರಿಫಲ ಚೂರ್ಣ, ಇದರ ಬಳಕೆ ಹೇಗೆ ಗೊತ್ತಾ?

ನಮ್ಮ ಆಹಾರವು ಕೆಲವು ಉತ್ತಮ ಗಿಡಮೂಲಿಕೆಗಳು ಮತ್ತು ಜೀವಸತ್ವಗಳನ್ನು ಒಳಗೊಂಡಿದ್ದು, ನಾವು ಏನು ತಿನ್ನಬಹುದೋ ಅದನ್ನೇ ನಾವು ನಮ್ಮ ಚರ್ಮದ ಮೇಲೆ ಸಹ ಹಚ್ಚಿಕೊಳ್ಳಬಹುದು. ಸೌತೆಕಾಯಿಯಿಂದ ಪಪ್ಪಾಯಿಯವರೆಗೆ, ನಾನು ನನ್ನ ಫೇಸ್ ಮಾಸ್ಕ್ ಗಳಲ್ಲೂ ಹಣ್ಣುಗಳನ್ನು ಬಳಸಿದ್ದೇನೆ. ಇದಲ್ಲದೆ, ಯೋಗ ಮತ್ತು ವ್ಯಾಯಾಮವು ನಿಮ್ಮ ಚರ್ಮಕ್ಕೆ ಬಹಳ ಮುಖ್ಯ ಎಂದು ನಾನು ನಂಬುತ್ತೇನೆ" ಎಂದು ಹೇಳಿದರು.

ತಾಯಿಯ ಬಗ್ಗೆ ಈಕೆ ಹೇಳಿದ್ದು ಹೀಗೆ
ನಿಮ್ಮ ತಾಯಿಯಿಂದ ನೀವು ಕಲಿತ ಸೌಂದರ್ಯ ಪಾಠ ಏನಾದರೂ ಇದೆಯೇ ಮತ್ತು ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವಿರಾ ಎಂದು ಕೇಳಿದ ಪ್ರಶ್ನೆಗೆ, ಸೋಹಾ ಅವರು “ನನ್ನ ತಾಯಿಯಿಂದ ನಾನು ಚರ್ಮದ ಆರೈಕೆಯ ಬಗ್ಗೆ ಹೆಚ್ಚೇನು ಕಲಿತಿಲ್ಲ. ಆದರೆ ನಾನು ಅವರಿಂದ ಈ ಕಣ್ಣುಗಳಿಗೆ ಹಚ್ಚುವ ಐಲೈನರ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಕಲಿತಿದ್ದೆ.

ಇದನ್ನೂ ಓದಿ: Hair Mask: ಮನೆಯಲ್ಲೇ ಇರೋ ವಸ್ತುಗಳಿಂದ ಈ ಹೇರ್ ಪ್ಯಾಕ್ ಮಾಡಿ, ಕೂದಲು ಉದುರುವುದು ಕೂಡಲೇ ನಿಲ್ಲುತ್ತಂತೆ!

ನಿಮ್ಮ ಕಣ್ಣುಗಳನ್ನು ಅಗಲವಾಗಿ ಕಾಣುವಂತೆ ಮಾಡಲು ಅವಳು ನನಗೆ ಕಣ್ಣುಗಳ ಒಳಭಾಗಕ್ಕೆ ಮತ್ತು ಕಣ್ಣುಗಳ ನಡುವಿನ ಕ್ರೀಸ್ ಗಾಗಿ ಬಿಳಿ ಪೆನ್ಸಿಲ್ ಅನ್ನು ಬಳಸಬಹುದು ಎಂದು ಹೇಳಿದ್ದರು. ಇದನ್ನು ಹೇಳಿಕೊಟ್ಟ ನನ್ನ ತಾಯಿ ಮೊದಲ ವ್ಯಕ್ತಿಯಾಗಿದ್ದರು. ಅದು ದೊಡ್ಡ ರಹಸ್ಯವಲ್ಲ ಮತ್ತು ಅನೇಕ ಜನರಿಗೆ ಈಗಾಗಲೇ ತಿಳಿದಿದೆ ಎಂದು ನಾನು ನಂತರ ಕಂಡುಕೊಂಡೆ" ಎಂದು ಹೇಳಿದರು.
Published by:Ashwini Prabhu
First published: