ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರಸ್ ಹಾಗೂ ಲುಕ್ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಅನ್ನು ಇಷ್ಟಪಡುತ್ತಾರೆ, ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್ಗಳಿಗೆ ಗುರಿಯಾಗುತ್ತಾರೆ.
ಉರ್ಫಿ ಜಾವೇದ್ ಹೊಸ ಪೋಸ್ಟ್
ಉರ್ಫಿ ಜಾವೇದ್ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಉರ್ಫಿ ಈ ಬಾರಿ ಯಾವುದೇ ನ್ಯೂಡ್ ಫೋಟೋ ಶೂಟ್ ಹಾಕಿಲ್ಲ, ಅರೆ ಬರೆ ಬಟ್ಟೆ ಕೂಡ ಹಾಕಿಲ್ಲ ಬದಲಾಗಿದೆ. ಸಮೋಸ ಸ್ಟೈಲ್ ಬಟ್ಟೆ ಧರಿಸಿ ಉರ್ಫಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. Urfi ಅವರ ಪೋಸ್ಟ್ಗೆ ಕಾಮೆಂಟ್ಗಳ ಸುರಿಮಳೆಯಾಗಿದೆ. ಕೆಲವರು ವ್ಯಂಗ್ಯ ಕೂಡ ಮಾಡಿದ್ದಾರೆ.
ಉರ್ಫಿ ಜಾವೇದ್ ವಿಡಿಯೋ ವೈರಲ್
ಎಲ್ಲೋ ಬಣ್ಣದ ಟಾಪ್ ಧರಿಸಿ ವೈಟ್ ಪ್ಯಾಂಟ್ ಧರಿಸಿ ಜೊತೆಗೆ ಮ್ಯಾಚಿಂಗ್ ಸ್ಯಾಂಡಲ್ ಸಹ ಹಾಕಿಕೊಂಡ ಉರ್ಫಿ ಈ ಲುಕ್ನಲ್ಲಿ ಕುರ್ಚಿಯ ಮೇಲೆ ಪೋಸ್ ಕೊಟ್ಟಿದ್ದಾರೆ. ಉರ್ಫಿ ಹೊಸ ಅವತಾರದ ವಿಡಿಯೋ ವೈರಲ್ ಆಗುತ್ತಿದೆ.
View this post on Instagram
ಉರ್ಫಿಯ ಹೊಸ ಪೋಸ್ಟ್ಗೆ ನೆಟ್ಟಿಗರು ಸಾಕಷ್ಟು ಕಾಮೆಂಟ್ಗಳನ್ನು ಮಾಡ್ತಿದ್ದಾರೆ. ಸಮೋಸ ಬನೂನ್ ಕಾ ಬಸಲಿಯೇ?, ಸಮೋಸ ಔಟ್ಫಿಟ್, ಇದು ಉರ್ಫಿನಾ ನನಗೆ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಕೆಲವರು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಉರ್ಫಿ ಹೊಸ ಲುಕ್ನನ್ನು ಹಲವರು ಹೊಗಳುತ್ತಿದ್ದಾರೆ.
ಉರ್ಫಿ ಜಾವೇದ್ ಅವರ ಫ್ಯಾಷನ್ ಸೆನ್ಸ್ ಅನ್ನು ಟ್ರೋಲ್ ಮಾಡುತ್ತಿರುವಾಗ, ಅವರು ನಟಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಉರ್ಫಿ ಜಾವೇದ್ ಹೆಸರು ಮಾಡಿದ್ದಾರೆ. ಆರಂಭದಲ್ಲಿ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮ ನಟನೆಯ ಗುರುತು ಬಿಟ್ಟು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಆಕೆಗೆ ನಿಜವಾದ ಮನ್ನಣೆ, ನಿಜವಾದ ಜನಪ್ರಿಯತೆ ಸಿಕ್ಕಿದ್ದು ಬಿಗ್ ಬಾಸ್ ಒಟಿಟಿಯಿಂದ. ಆ ನಂತರ ಅವರ ಅಭಿಮಾನಿ ಬಳಗ ಬೆಳೆದು ಈಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅವಳ ಸೃಜನಶೀಲತೆಯಿಂದಾಗಿ, ಅವಳು ಟ್ರೋಲಿಂಗ್ಗೆ ಒಳಗಾಗುತ್ತಾಳೆ ಮತ್ತು ಆಗಾಗ್ಗೆ ಅವಳ ಕೆಲಸಕ್ಕಾಗಿ ಹೊಗಳುತ್ತಾಳೆ.
ಗುಲಾಬಿ ಬಣ್ಣದ ಡ್ರೆಸ್ನಲ್ಲಿ ಉರ್ಫಿ
ಉರ್ಫಿ ಜಾವೇದ್ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದಾರೆ. ಇದರೊಂದಿಗೆ ಉರ್ಫಿ ತಲೆಗೆ ದುಪ್ಪಟ್ಟ ಹಾಕಿಕೊಂಡಿದ್ದಾರೆ. ಲೂಸ್ ಹೇರ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ಈ ಹೊಸ ನೋಟದಿಂದ ಉರ್ಫಿ ಬ್ಯುಟಿ ಹೆಚ್ಚಿದೆ. ಉರ್ಫಿಯ ಹೊಸ ಲುಕ್ನಿಂದ ನೆಟಿಜನ್ಗಳು ಆಶ್ಚರ್ಯಗೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ.
View this post on Instagram
ಹೊಸ ಅವತಾರಕ್ಕೆ ನೆಟ್ಟಿಗರ ಕಾಮೆಂಟ್
ಉರ್ಫಿ ಜಾವೇದ್ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಹೊಗಳುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಉರ್ಫಿ ಜಾವೇದ್ ಅವರು ಹಿಂದೂಸ್ತಾನಿ ಭಾವು ಬೆದರಿಕೆ ಹೆದರಿ ಹೊಸ ಅವತಾರ ತಾಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ