Sudeep Tweet: ಸುದೀಪ್​ಗೆ ಮುಳುವಾಯಿತು ಕಡಗ, ಬಳೆ ಟ್ವೀಟ್!; ಕಿಚ್ಚನ ಹೇಳಿಕೆಗೆ ಸಿಡಿದೆದ್ದ ಮಹಿಳೆಯರು

ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆ ಅಲ್ಲ ಎಂದು ಸುದೀಪ್​ ಟ್ವೀಟ್ ಮಾಡಿದ್ದರು. ಇದಕ್ಕೆ ಅನೇಕರು ಬಳೆ ಹಾಕ್ಕೊಂಡಿದಾರೆ ಅಂದರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹೆಣ್ಮಕ್ಳು, ಅವರು ದುರ್ಬಲರು ಎಂದರ್ಥವೇ ಎಂದು ಪ್ರಶ್ನಿಸಿದ್ದಾರೆ.

Rajesh Duggumane | news18-kannada
Updated:September 21, 2019, 11:58 AM IST
Sudeep Tweet: ಸುದೀಪ್​ಗೆ ಮುಳುವಾಯಿತು ಕಡಗ, ಬಳೆ ಟ್ವೀಟ್!; ಕಿಚ್ಚನ ಹೇಳಿಕೆಗೆ ಸಿಡಿದೆದ್ದ ಮಹಿಳೆಯರು
ಸುದೀಪ್​
  • Share this:
ದರ್ಶನ್​ಗೆ ತಿರುಗೇಟು ನೀಡುವ ಭರದಲ್ಲಿ ಸುದೀಪ್​ ಮಾಡಿದ್ದ ಕಡಗ-ಬಳೆ ಟ್ವೀಟ್​ ಈಗ ಭಾರೀ ವಿವಾದ ಸೃಷ್ಟಿಸಿದೆ. ಬಳೆ ತೊಟ್ಟವರು ಶಕ್ತಿ ಇಲ್ಲದವರು, ಕಡಗ ತೊಟ್ಟವರು ಮಾತ್ರ ಸಬಲರು ಎನ್ನುವ ಅರ್ಥವನ್ನು ಟ್ವೀಟ್​ ನೀಡುತ್ತಿದೆ ಎಂದು ಆರೋಪಿಸಿ ಸುದೀಪ್​ ವಿರುದ್ಧ ಮಹಿಳೆಯರು ಕೆಂಡಾಮಂಡಲವಾಗಿದ್ದಾರೆ.

‘ನನ್ನ ಅಭಿಮಾನಿಗಳ ತಂಟೆಗೆ ಬರಬೇಡಿ’  ಎಂದು ಎಚ್ಚರಿಕೆ ನೀಡಿದ್ದ ದರ್ಶನ್​ಗೆ ಸುದೀಪ್​ ತಿರುಗೇಟು ನೀಡಿದ್ದರು. “ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ನನ್ನ ತಾಳ್ಮೆ ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳ ಮಾತ್ರ” ಎಂದು ಬರೆದುಕೊಂಡಿದ್ದರು.


ಈ ವಿಚಾರ ಅನೇಕರ ಸಿಟ್ಟಿಗೆ ಕಾರಣವಾಗಿದೆ. “ಬಳೆ ಹಾಕ್ಕೊಂಡಿದಾರೆ ಅಂದರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹೆಣ್ಮಕ್ಳು, ಅವರು ವೀಕು ಅಂತಾನಾ? ಈ ಸಮಾಜ ಇಂಥಾ ಸ್ಟೀರಿಯೋಟೈಪ್​ಗಳಿಂದ ಹೊರಗೆ ಬರುವುದು ಯಾವಾಗ? ಕೊನೆಪಕ್ಷ ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತಾಡಲು ಕಲಿಯೋದು ಯಾವಾಗ? ಸಿನೆಮಾ ಡೈಲಾಗ್ ಆಗಿದ್ದಿದ್ರೆ ಪಾತ್ರದ ಅಗತ್ಯ ಅನ್ಬೋದಿತ್ತು. ಇದು ಸ್ವಂತದ ಸ್ಟೇಟ್ಮೆಂಟ್. ಇವರಿಗೆಲ್ಲ ಲಿಂಗಸಂವೇದನೆ ಮತ್ತು ಭಾಷೆ ಬಗ್ಗೆ ಒಂದು ವರ್ಕ್ ಶಾಪ್ ಮಾಡೋ ಅಗತ್ಯವಿದೆ,” ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಬೆಳ್ಳಂಬೆಳಿಗ್ಗೆಯೇ ತಾರಕಕ್ಕೇರಿತು ಸ್ಟಾರ್ ಫ್ಯಾನ್ಸ್ ವಾರ್; ಟ್ರೋಲ್ ಆದ ದರ್ಶನ್-ಸುದೀಪ್“ಡಿಯರ್ ಸುದೀಪ್, ಕಡಗ-ಬಳೆ ತೊಟ್ಟೋರೆಲ್ಲ ಅಶಕ್ತರು, ದುರ್ಬಲರೇನಲ್ಲ. ಹಾಗೆಯೇ ತೊಡದವರೆಲ್ಲ ವೀರಾಧಿವೀರರು, ಮಹಾಬಲಶಾಲಿಗಳೂ ಆಗಿರುವುದಿಲ್ಲ. ಅಂದಹಾಗೆ ಬಳೆ ತೊಡುವ ಹೆಣ್ಣುಮಕ್ಕಳು ಎಷ್ಟೋ ವಿಷಯಗಳಲ್ಲಿ ಗಂಡಸರಿಗಿಂತ ಬಲಶಾಲಿಗಳಾಗಿರುತ್ತಾರೆ ಅನ್ನೋ ಕಾಮನ್ ಸೆನ್ಸ್ ನಿಮಗಿದೆ ಎಂದು ಆಶಿಸುತ್ತೇನೆ,” ಎಂದಿದ್ದಾರೆ ಕೆಲವರು.‘ಪೈಲ್ವಾನ್​’ ಸಿನಿಮಾ ತೆರೆಕಂಡ ಬೆನ್ನಲ್ಲೇ ದರ್ಶನ್​ ಹಾಗೂ ಸುದೀಪ್​ ಅಭಿಮಾನಿಗಳ ನಡುವೆ ಟ್ವೀಟ್​ ವಾರ್​ ಆರಂಭಗೊಂಡಿತ್ತು. 'ಪೈಲ್ವಾನ್' ಪೈರಸಿ ಆಗಿದ್ದಕ್ಕೆ ದರ್ಶನ್​ ಅಭಿಮಾನಿಗಳು ಕಾರಣ ಎಂದು ಸುದೀಪ್​ ಹಿಂಬಾಲಕರು ಹೇಳಿಕೊಂಡಿದ್ದರೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಡಿ ಬಾಸ್​ ಬೆಂಬಲಿಗರು ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಪೈರಸಿ ಲಿಂಕ್​ ಶೇರ್​ ಮಾಡಿದ್ದ ಯುವಕ ಸಿಕ್ಕಿ ಬಿದ್ದಿದ್ದು, ಈತ ದರ್ಶನ್​ ಅಭಿಮಾನಿ ಎಂದು ಒಪ್ಪಿಕೊಂಡಿದ್ದ. ಇದಾದ ನಂತರದಲ್ಲಿ ದರ್ಶನ್​-ಸುದೀಪ್​ ಅಭಿಮಾನಿಗಳ ಕಿತ್ತಾಟ ಜೋರಾಗಿತ್ತು.ಇತ್ತೀಚೆಗೆ ಹಿಂದಿ ಹೇರಿಕೆ ಹಾಗೂ ಕನ್ನಡ ಬಾವುಟದ ವಿಚಾರ ಭಾರೀ ಚರ್ಚೆಯಾಗಿತ್ತು. ಆದರೆ ಈ ವಿಚಾರದಲ್ಲಿ ದರ್ಶನ್​ ಹಾಗೂ ಸುದೀಪ್​ ಧ್ವನಿ ಎತ್ತಿರಲಿಲ್ಲ. ಈ ಬಗ್ಗೆಯೂ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ದೇಶದ ಭಾಷೆ ಧ್ವಜದ ಬಗ್ಗೆ ಮಾತನಾಡದವರು ಈಗ ಸಿನಿಮಾ ವಿಚಾರ ಬಂದಾಗ ಕಚ್ಚಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

(ವರದಿ: ಆನಂದ್​ ಸಾಲುಂಡಿ)

First published:September 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ