Uday Kiran - Sushant: ಸುಶಾಂತ್​ರಂತೆಯೇ ಆಗಿತ್ತಾ ಟಾಲಿವುಡ್​ ನಟ ಉದಯ್​ ಕಿರಣ್​ ಪರಿಸ್ಥಿತಿ..?

Uday Kiran - Sushant: ಸುಶಾಂತ್​ ಹೇಗೆ ಕಷ್ಟಪಟ್ಟು ಆಡಿಷನ್​ಗಳ ಮೇಲೆ ಆಡಿಷನ್​ ಕೊಟ್ಟು ಸಿನಿಮಾ ಅವಕಾಶ ಗಿಟ್ಟಿಕೊಂಡಿದ್ದರೋ, ಅಂತೆಯೇ ಉದಯ್​ ಕಿರಣ್​ ಸಹ ತಮ್ಮ ಶ್ರಮದಿಂದ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಳ್ಳುತ್ತಿದ್ದರು.

ಉದಯ್​ ಕಿರಣ್​ ಹಾಗೂ ಸುಶಾಂತ್

ಉದಯ್​ ಕಿರಣ್​ ಹಾಗೂ ಸುಶಾಂತ್

  • Share this:
ಸುಶಾಂತ್​ ಅವರಂತೆಯೇ ಸಿನಿಮಾದಲ್ಲಿ ಯಾವುದೇ ಹಿನ್ನಲೆ ಹಾಗೂ ಬೆಂಬಲಿಗರಿಲ್ಲದೆ ಬಣ್ಣದ ಲೋಕಕ್ಕೆ ಬಂದವರು ನಟ ಉದಯ್​ ಕಿರಣ್​. ಅಭಿನಯ ಹಾಗೂ ಶ್ರಮದಿಂದ ಹಿಟ್​ ಸಿನಿಮಾಗಳನ್ನು ಕೊಟ್ಟವರು. ಆದರೆ ಚಿಕ್ಕವಯಸ್ಸಿನಲ್ಲಿಯೇ ಸಿನಿಮಾ ಅವಕಾಶ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡರು. 

ಸುಶಾಂತ್​ ಸಿಂಗ್​ ರಜಪೂತ್ ಅವರಂತೆಯೇ ಟಾಲಿವುಡ್​ ನಟ ಉದಯ್​ ಕಿರಣ್​ ಸಹ ನೇಣಿಗೆ ಶರಣಾಗಿದ್ದರು. ಉದಯ್​ ಕಿರಣ್​ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಸಿಗದೆ ಹಾಗೂ ಹಲವಾರು ಚಿತ್ರಗಳಿಂದ ಅವರನ್ನು ಕೈ ಬಿಡಲಾಗಿದ್ದ ಕಾರಣದಿಂದ ಅವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದರು ಎನ್ನಲಾಗುತ್ತದೆ.

so many similarities between sushant singh rajput and uday kirans film Journey
ಸುಶಾಂತ್ ಹಾಗೂ ಉದಯ್​ ಕಿರಣ್​


ಸುಶಾಂತ್ ಅವರ ಆತ್ಮಹತ್ಯೆಗೂ ಕಾರಣ ಅವರನ್ನು ಬಿ-ಟೌನ್​ ದೊಡ್ಡ ಪ್ರೊಡಕ್ಷನ್​ ಹೌಸ್​ಗಳು ಬ್ಯಾನ್​ ಮಾಡಲು ನಿರ್ಧರಿಸಿದ್ದವಂತೆ. ಅಲ್ಲದೆ 7 ಸಿನಿಮಾಗಳಿಂದ ಅವರನ್ನು ಕೈ ಬಿಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ಅವರ ಆತ್ಮಹತ್ಯೆಗೆ ಕಾರಣ ಎಂದೂ ಆರೋಪಿಸಲಾಗುತ್ತಿದೆ.

ಇದನ್ನೂ ಓದಿ: Mahesh Babu: ಮಹೇಶ್​ ಬಾಬು ಸಿನಿಮಾಗಳಲ್ಲಿ ಇನ್ಮುಂದೆ ಕನ್ನಡಿಗರಿಗೂ ಸಿಗಲಿದೆ ಆದ್ಯತೆ..!

ಸುಶಾಂತ್​ ಹೇಗೆ ಕಷ್ಟಪಟ್ಟು ಆಡಿಷನ್​ಗಳ ಮೇಲೆ ಆಡಿಷನ್​ ಕೊಟ್ಟು ಸಿನಿಮಾ ಅವಕಾಶ ಗಿಟ್ಟಿಕೊಂಡಿದ್ದರೋ, ಅಂತೆಯೇ ಉದಯ್​ ಕಿರಣ್​ ಸಹ ತಮ್ಮ ಶ್ರಮದಿಂದ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಳ್ಳುತ್ತಿದ್ದರು.

so many similarities between sushant singh rajput and uday kirans film Journey
ಉದಯ್​ ಕಿರಣ್​ ಹಾಗೂ ಸುಶಾಂತ್


ನಟ ಉದಯ್​ ಕಿರಣ್​ ಟಾಲಿವುಡ್​ನಲ್ಲಿ ಯಶಸ್ಸಿನ ಉತ್ತುಂಗವೇರುತ್ತಿರುವಾಗಲೇ, ಅಂದರೆ 2003ರಲ್ಲಿ ಚಿರಂಜೀವಿ ಅವರ ಮಗಳ ಜೊತೆ ನಿಶ್ಚಿತಾರ್ಥ ಆಗಿ ಮದುವೆ ಫಿಕ್ಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಅದು ಕ್ಯಾನ್ಸಲ್​ ಆಗಿತ್ತು. ಅಲ್ಲಿಂದ ಉದಯ್​ ಕಿರಣ್​ ಅವರಿಗೆ ಸಿನಿಮಾ ಅವಕಾಶಗಳೇ ಸಿಗಲಿಲ್ಲ. ಸಾಲದಕ್ಕೆ ಸಹಿ ಮಾಡಿಸಿಕೊಂಡಿದ್ದವರೆಲ್ಲ ಸಿನಿಮಾಗಳಿಂದ ಉದಯ್​ ಅವರನ್ನು ಹೊರ ಹಾಕಿದ್ದರಂತೆ. ಇದಕ್ಕೆ ಕಾರಣ ಮೆಗಾಸ್ಟಾರ್ ಚಿರಂಜೀವಿ ಎಂದೂ ಹೇಳಲಾಗುತ್ತದೆ.

ಇದನ್ನೂ ಓದಿ: ಬಿ-ಟೌನ್​ನಲ್ಲಿರುವ ಸ್ವಜನಪಕ್ಷಪಾತದ ವಿರುದ್ಧ ಅಸಮಾಧಾನ ಹೊರ ಹಾಕಿದ ನಟ ರಣವೀರ್​ ಶೌರಿ

ಚಿರಂಜೀವಿ ಅವರಇಗೆ ಭಯಪಟ್ಟು ಉದಯ್​ ಕಿರಣ್​ ಅವರನ್ನೂ ಯಾರೂ ಸಿನಿಮಾಗೆ ತೆಗೆದುಕೊಳ್ಳುತ್ತಿರಲಿಲ್ಲ ಅನ್ನೋ ಸುದ್ದಿ ಸಹ ತುಂಬಾ ದಿನಗಳ ಕಾಲ ಟಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ನಂತರ ಈ ಕುರಿತಾಗಿ ಮೌನ ಮುರಿದಿದ್ದ ಚಿರಂಜೀವಿ ಯಾರು ಬೇಕಾದರೂ ಉದಯ್​ ಕಿರಣ್​ ಅವಕಾಶ ಕೊಡಬಹುದು ನನ್ನ ಅಭ್ಯಂತರ ಇಲ್ಲ ಎಂದಿದ್ದರು.

so many similarities between sushant singh rajput and uday kirans film Journey
ಚಿರಂಜೀವಿ ಹಾಗೂ ಉದಯ್​ ಕಿರಣ್​


ಆದರೆ ಉದಯ್​ ಕಿರಣ್​ ಆತ್ಮಹತ್ಯೆ ಮಾಡಿಕೊಂಡು ಕೆಲ ಸಮಯ ಕಳೆದ ನಂತರ, ಅವರ ಅಕ್ಕ ಮಾತ್ರ ಉದಯ್​ ಸಾವಿಗೆ ಚಿಂರಜೀವಿ ಹಾಗೂ ಸಿನಿಮಾ ಅವಕಾಶ ಸಿಗದೇ ಇರುವುದು ಕಾರಣ ಅಲ್ಲ ಎಂದಿದ್ದರು.

ಇದನ್ನೂ ಓದಿ: ಡ್ಯಾನ್ಸ್​ ಮಾಡಲು ಹೋಗಿ ಗಾಳಿಯಲ್ಲಿ ತೇಲುವುದನ್ನು ಕಲಿತ ಡೇವಿಡ್​ ವಾರ್ನರ್​..!

ಈ ಇಬ್ಬರೂ ಪ್ರತಿಭಾವಂತ ನಟರನ್ನು ಕಳೆದುಕೊಂಡಿದ್ದು ಮಾತ್ರ ಸಿನಿರಂಗಕ್ಕಾದ ದೊಡ್ಡ ನಷ್ಟ ಎಂದರೆ ತಪ್ಪಾಗದು. ಸಿನಿ ರಂಗದಲ್ಲಿ ಚಿಗುರಿದ್ದ ಈ ಪ್ರತಿಭೆಗಳು ಮರಗಳಾಗಿ ಬೆಳೆಯುವ ಮೊದಲೇ ಕಮರಿ ಹೋಗಿದ್ದು ನಿಜಕ್ಕೂ ಸಿನಿಪ್ರಿಯರಿಗೆ ತೀರಲಾರದ ನೋವನ್ನುಂಟು ಮಾಡಿದೆ.

Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್​​ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!


ಇದನ್ನೂ ಓದಿ: ಕಡೆಗೂ ಲೋಕಾರ್ಪಣೆಗೊಂಡಿದೆ ಸುಶಾಂತ್​ ಕನಸಾಗಿದ್ದ ವೆಬ್​ಸೈಟ್​
First published: