ಲಾಕ್ಡೌನ್ನಿಂದಾಗಿ ಜನರ ಓಡಾಟ ತೀರಾ ಕಡಿಮೆಯಾಗಿದ್ದಾಗ ವನ್ಯ ಜೀವಿಗಳು ವಸತಿ ಪ್ರದೇಶಗಳಲ್ಲಿ ಹಾಗೂ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಆದರೆ ಲಾಕ್ಡೌನ್ ಸಡಿಲಗೊಂಡ ನಂತರವೂ ಅಲ್ಲಲ್ಲಿ ಇನ್ನೂ ವನ್ಯ ಜೀವಿಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ಆಲಿಯಾ ಭಟ್ ಅವರ ಈಜುಕೊಳಕ್ಕೆ ಅತಿಥಿಯೊಂದು ಭೇಟಿ ನೀಡಿತ್ತು.
ಆಲಿಯಾ ಭಟ್ ಅವರ ಮನೆಯಂಗಳದಲ್ಲಿರುವ ಈಜುಕೊಳಕ್ಕೆ ಪುಟ್ಟ ಹಾವೊಂದು ಬಂದು ನೀರಿನಲ್ಲಿ ಈಜಾಡಿ ಹೋಗಿದೆ. ಇದನ್ನು ನೋಡಿದ ನಟಿಯ ತಾಯಿ ಸೋನಿ ಅದನ್ನು ವಿಡಿಯೋ ಮಾಡಿದ್ದಾರೆ.
ಈಜುಕೊಳದ ಪಕ್ಕದಲ್ಲೇ ಇರುವ ಗಾರ್ಡನ್ನಿಂದ ಬಂದ ಹಾವು ಸೀದಾ ಈಜುಕೊಳಕ್ಕೆ ಇಳಿಯುತ್ತದೆ. ಅಲ್ಲಿಗೆ ಮನೆ ಕೆಲಸದವರು ಬಂದ ಸದ್ದು ಕೇಳಿದ ನಂತರ, ಅದು ಮತ್ತೆ ಗಾರ್ಡನ್ ಒಳಗೆ ಹೋಗುತ್ತದೆ. ಇದನ್ನು ಸೋನಿ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
Snake in the water Part 2 #snakeinthewater #lockdowninthecountryside #lockdownlife #lockdowndiaries
ಆಲಿಯಾ ಭಟ್ ಹಾಗೂ ಅವರ ಅಪ್ಪ-ಅಮ್ಮ ತಮ್ಮ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಹುಟ್ಟುಹಬ್ಬ ಆಚರಿಸುವ ಮೂಲಕ ಸುದ್ದಿಯಾಗಿದ್ದರು. ಇನ್ನು ಆಲಿಯಾ ಭಟ್ ಸಿನಿಮಾ ವಿಷಯಕ್ಕೆ ಬಂದರೆ, ಅಪ್ಪ ಮಹೇಶ್ ಭಟ್ ನಿರ್ದೇಶನದಲ್ಲಿ ಸಡಕ್ 2 ಚಿತ್ರದಲ್ಲಿ ನಟಿಸಿದ್ದು, ಅದು ಸದ್ಯದಲ್ಲೇ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ.
ಹೊಸ ಲುಕ್ನ ಫೋಟೋಗಳನ್ನು ಹಂಚಿಕೊಂಡು ಮಾಧ್ಯಮಗಳ ಮೇಲೆ ಗರಂ ಆದ ಸ್ಯಾಂಡಲ್ವುಡ್ ನಟಿ..!
ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮಿಮಿಕ್ರಿ ರಾಜ ಗೋಪಾಲ್ ಇನ್ನಿಲ್ಲ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ