Kapil Sharma ಕಾರ್ಯಕ್ರಮಕ್ಕೆ ಎಂದು ಹೋಗಿ ಭಾಗವಹಿಸದೇ ಮರಳಿದ Smriti Irani, ಅಲ್ಲಿ ನಡೆದಿದ್ದೇನು?

Smriti Irani And Kapil Sharma: ಸ್ಮೃತಿಯ ಸಂಚಿಕೆಯನ್ನು ಚಿತ್ರೀಕರಿಸಲು ಸಾಧ್ಯವಾಗದಿದ್ದರೂ, ಮಂಗಳವಾರ, ಸನ್ನಿ ಡಿಯೋಲ್ ಕಪಿಲ್ ಶರ್ಮಾ ಅವರ ಮಗ ಕರಣ್ ಡಿಯೋಲ್ ಅವರ ಮುಂಬರುವ ಚಿತ್ರ 'ವೆಲ್ಲೆ' ಪ್ರಚಾರಕ್ಕಾಗಿ ಚಿತ್ರೀಕರಣಕ್ಕಾಗಿ ಸೆಟ್‌ಗೆ ಆಗಮಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani)  ರಾಜಕೀಯಕ್ಕೆ(Politics) ಬರುವ ಮೊದಲು ಧಾರವಾಹಿಗಳಲ್ಲಿ ಮಿಂಚಿದ್ದರು, ಅಲ್ಲದೇ ಇತ್ತೀಚೆಗಷ್ಟೆ ಪುಸ್ತಕವೊಂದನ್ನ ಸಹ ಬರೆದಿದ್ದಾರೆ, ಇದೇ ಕಾರಣಕ್ಕೆ ಅವರು ತಮ್ಮ ‘ಲಾಲ್ ಸಲಾಮ್’(Lal Salaam) ಪುಸ್ತಕದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. ಆದರೆ ಅವರನ್ನು ಸೆಟ್‌ನ ಸಿಬ್ಬಂದಿ ಗುರುತಿಸಲಿಲ್ಲ. ಗಾರ್ಡ್ ಸ್ಮೃತಿಯನ್ನು ಒಳಗೆ ಹೋಗದಂತೆ ತಡೆದಿದ್ದಾರೆ, ಆದರೆ ಸೆಟ್ ತಲುಪಿದ ಝೊಮಾಟೊ(Zomato) ಫುಡ್ ಡೆಲಿವರಿ ಬಾಯ್ ನನ್ನು(delivery boy) ಗಾರ್ಡ್ ಯಾವುದೇ ರೀತಿ ಪ್ರಶ್ನೆ ಮಾಡದೇ ಹಾಗೆಯೇ ಒಳಗೆ ಬಿಟ್ಟಿದ್ದಾರೆ, ಇದು ಸ್ಮೃತಿ ಕೋಪಕ್ಕೆ ಕಾರಣವಾಗಿದ್ದು, ಇರಾನಿ ಆ ಸಂಚಿಕೆಯ ಶೂಟಿಂಗ್ ಮಾಡದೆ ವಾಪಸ್ಸಾಗಿದ್ದಾರೆ.

ಈ ಘಟನೆ ಬಗ್ಗೆ ಕಪಿಲ್ ಮತ್ತು ಅವರ ನಿರ್ಮಾಣ ತಂಡಕ್ಕೆ ಈ ವಿಷಯ ತಿಳಿದಾಗ, ಸೆಟ್‌ನಲ್ಲಿ ಗೊಂದಲ ಉಂಟಾಯಿತು. ಇದಾದ ನಂತರ ನಿರ್ಮಾಣ ತಂಡ ಸ್ಮೃತಿ ಇರಾನಿ ಅವರೊಂದಿಗೆ ಮಾತನಾಡಲು ಸಾಕಷ್ಟು ಪ್ರಯತ್ನಿಸಿದೆ, ಆದರೆ ಸ್ಮೃತಿ ಇರಾನಿ ಅವರು ನಿರಾಕರಿಸಿದ ಕಾರಣ ಅಂತಿಮವಾಗಿ ಶೂಟಿಂಗ್ ಅನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ಎದುರಾಯಿತು, ಇನ್ನು ಈ ಘಟನೆಯ  ನಂತರ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಆಗಮಿಸಿ, ಕಪಿಲ್ ಅವರ ನಿರ್ಮಾಣ ತಂಡದೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕೆಲಸಗಳು ಕಾರ್ಯರೂಪಕ್ಕೆ ಬರದಿದ್ದಾಗ, ನಿರ್ಮಾಣ ತಂಡವು ಸೆಟ್‌ಗೆ ಸಂಬಂಧಿಸಿದ ಜನರನ್ನು ಮನೆಗೆ ಹೋಗುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.

ಏನಿದು ಕಥೆ?

ಮೂಲಗಳ ಪ್ರಕಾರ, ಕೇಂದ್ರ ಸಚಿವರು ತಮ್ಮ ಚಾಲಕ ಮತ್ತು ಇಬ್ಬರು ಜನರ ತಂಡದೊಂದಿಗೆ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಸಂಜೆ ಕಪಿಲ್ ಶರ್ಮಾ ಅವರ ಸೆಟ್‌ಗೆ ಬಂದಿದ್ದರು. ಪ್ರವೇಶ ದ್ವಾರದಲ್ಲಿದ್ದ ಸೆಕ್ಯುರಿಟಿ ಗಾರ್ಡ್  ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಮತ್ತು ಅವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಸ್ಮೃತಿ ಅವರು ತನ್ನನ್ನ ಸೆಟ್​ನಲ್ಲಿ ಸಂಚಿಕೆಯನ್ನು ಶೂಟ್ ಮಾಡಲು ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. ನಾನು ಈ ಕಾರ್ಯಕ್ರಮದ ವಿಶೇಷ ಅತಿಥಿ ಎಂದು ಹೇಳಿದರೂ ಸಹ ಇದಕ್ಕೆ ಸಿಬ್ಬಂದಿ, ‘ನಮಗೆ ಯಾವುದೇ ಆದೇಶ ಬಂದಿಲ್ಲ, ಕ್ಷಮಿಸಿ ಮೇಡಂ, ನೀವು ಒಳಗೆ ಹೋಗುವಂತಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಮುಖದ ಮೇಲಿನ ಕೂದಲು ತೆಗೆಯೋಕೆ ಪ್ರಿಯಾಂಕಾ ಛೋಪ್ರಾ ಗೋಧಿ ಹಿಟ್ಟು ಬಳಸ್ತಾರಂತೆ!

ಸ್ಮೃತಿ ಕಾವಲುಗಾರನ ಮನವೊಲಿಸಲು ಬಹಳ ಸಮಯ ಪ್ರಯತ್ನಿಸುತ್ತಿದ್ದರು, ಆದರೆ ಸಿಬ್ಬಂದಿ ಒಪ್ಪಿರಲಿಲ್ಲ. ಆದರೆ ಈ ಮಾತುಕತೆ ನಡೆಯುತ್ತಿರುವಾಗ  Zomato ನ ಡೆಲಿವರಿ ಬಾಯ್ ಬಂದನು, ಅವನು ಕಲಾವಿದರಿಗೆ ಆಹಾರದ ಪ್ಯಾಕೆಟ್‌ಗಳನ್ನು ತಲುಪಿಸಲು ಒಳಗೆ ಬಂದನು, ಗಾರ್ಡ್ ಏನನ್ನೂ ಕೇಳದೆ ಅವನನ್ನು ಬಿಟ್ಟಿದ್ದಾರೆ. ಇದರಿಂದ ಕೇಂದ್ರ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿಯ ಪ್ರಕಾರ, ಅವರು ನಿರ್ಮಾಣ ತಂಡ ಮತ್ತು ಕಪಿಲ್ ಶರ್ಮಾಗೆ ಫೋನ್ ಮಾಡಿದ್ದಾರೆ, ಆದರೆ ಮಾತನಾಡಲು ಸಾಧ್ಯವಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಸ್ಮೃತಿ ಇರಾನಿ ಶೂಟಿಂಗ್ ಮಾಡದೇ ವಾಪಸ್ಸಾಗಿದ್ದಾರೆ.

ಸಚಿವರನ್ನು ತಡೆದ ವಿಚಾರ ತಿಳಿದ ಸಿಬಂದಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ತಾನು ಒಳಗೆ ಹೋಗದಂತೆ ತಡೆದವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಂದು  ಭದ್ರತಾ ಸಿಬ್ಬಂದಿಗೆ ತಿಳಿದಾಗ ನಂತರ ಗಾಬರಿಗೊಂಡು ಸೆಟ್‌ನಿಂದ ಓಡಿಹೋಗಿದ್ದು, ತನ್ನ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾನೆ. ಇಲ್ಲಿ ನಿರ್ಮಾಣ ತಂಡ ಸತತ ಪ್ರಯತ್ನ ಮಾಡಿದರೂ ಸ್ಮೃತಿ ಇರಾನಿ ಅವರನ್ನು ಶೂಟಿಂಗ್‌ಗೆ ಮರಳುವಂತೆ ಮನವೊಲಿಸಲು ಸಾಧ್ಯವಾಗಲಿಲ್ಲ.

ಸನ್ನಿ ಡಿಯೋಲ್ ಪುತ್ರನ ಚಿತ್ರದ ಪ್ರಚಾರ ಸಂಚಿಕೆ ಶೂಟ್

ಸ್ಮೃತಿಯ ಸಂಚಿಕೆಯನ್ನು ಚಿತ್ರೀಕರಿಸಲು ಸಾಧ್ಯವಾಗದಿದ್ದರೂ, ಮಂಗಳವಾರ, ಸನ್ನಿ ಡಿಯೋಲ್ ಕಪಿಲ್ ಶರ್ಮಾ ಅವರ ಮಗ ಕರಣ್ ಡಿಯೋಲ್ ಅವರ ಮುಂಬರುವ ಚಿತ್ರ 'ವೆಲ್ಲೆ' ಪ್ರಚಾರಕ್ಕಾಗಿ ಚಿತ್ರೀಕರಣಕ್ಕಾಗಿ ಸೆಟ್‌ಗೆ ಆಗಮಿಸಿದರು. ಅವರ ಸಂಚಿಕೆಯನ್ನು ಚಿತ್ರೀಕರಿಸಲಾಯಿತು. ಇನ್ನು ಸ್ಮೃತಿ ಇರಾನಿ ಅವರ ಪುಸ್ತಕದ ಬಗ್ಗೆ ತಿಳಿಯಲು ಓದುಗರು ಮತ್ತು ವೀಕ್ಷಕರು ಸ್ವಲ್ಪ ದಿನ ಕಾಯಬೇಕಾಗಿದೆ.

ಇದನ್ನೂ ಓದಿ: ಜಮಾಲಿಗುಡ್ಡದಲ್ಲಿ ಡಾಲಿ Dhananjaya: ಕುತೂಹಲ ಹೆಚ್ಚಿಸಿದ ಸಿನಿಮಾದ ಟೈಟಲ್​ ಪೋಸ್ಟರ್​..!

ಮೂಲಗಳ ಪ್ರಕಾರ, ಸ್ಮೃತಿ ಇರಾನಿ ಅವರು ನೈಜ ಘಟನೆಯ ಮೇಲೆ ಈ ಥ್ರಿಲ್ಲರ್ ಪುಸ್ತಕ 'ಲಾಲ್ ಸಲಾಮ್' ಬರೆದಿದ್ದಾರೆ ಮತ್ತು ಈ ಪುಸ್ತಕವನ್ನು ಪೂರ್ಣಗೊಳಿಸಲು ಅವರು ಸುಮಾರು 10 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ವೆಸ್ಟ್‌ಲ್ಯಾಂಡ್ ಪಬ್ಲಿಷಿಂಗ್ ಕಂಪನಿಯ ಈ ಪುಸ್ತಕವು ನವೆಂಬರ್ 29 ರಂದು ಮಾರುಕಟ್ಟೆಗೆ ಬರಲಿದೆ.
Published by:Sandhya M
First published: