ನನ್ನ ಜೊತೆ ಸಂಪರ್ಕದಲ್ಲಿದ್ದವರು ಕ್ವಾರಂಟೈನ್​ ಆಗಿ ಎಂದ ಕಿರುತೆರೆ​ ನಟಿ ..!

Navya Swamy: ಇತ್ತೀಚೆಗಷ್ಟೆ ರಚಿತಾ ರಾಮ್​ ಹಾಗೂ ಚಂದನ್​ ಕುಮಾರ್ ಹೈದರಾಬಾದಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ಹಾಗೂ ತೆಲುಗಿನ ಧಾರಾವಾಹಿಗಳಲ್ಲಿ ನಟಿಸಿರುವ ನವ್ಯಾ ಸ್ವಾಮಿ ಅವರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

Anitha E | news18-kannada
Updated:July 2, 2020, 2:10 PM IST
ನನ್ನ ಜೊತೆ ಸಂಪರ್ಕದಲ್ಲಿದ್ದವರು ಕ್ವಾರಂಟೈನ್​ ಆಗಿ ಎಂದ ಕಿರುತೆರೆ​ ನಟಿ ..!
ನವ್ಯಾ ಸ್ವಾಮಿ
  • Share this:
ಎಲ್ಲೆಡೆ ಕೊರೋನಾ ವೈರಸ್​ನಿಂದಾಗಿ ಸೋಂಕು ಹರಡುತ್ತಿದೆ. ಲಾಕ್​ಡೌನ್​ ಸಡಿಲಗೊಳಿಸಿದ ನಂತರ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ನಡುವೆಯೇ ತೆಲಂಗಾಣ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ನಟ-ನಟಿಯರು ಶೂಟಿಂಗ್​ಗೆ ಹಾಜರಾಗುತ್ತಿದ್ದಾರೆ. 

ಇತ್ತೀಚೆಗಷ್ಟೆ ರಚಿತಾ ರಾಮ್​ ಹಾಗೂ ಚಂದನ್​ ಕುಮಾರ್ ಹೈದರಾಬಾದಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ಹಾಗೂ ತೆಲುಗಿನ ಧಾರಾವಾಹಿಗಳಲ್ಲಿ ನಟಿಸಿರುವ ನವ್ಯಾ ಸ್ವಾಮಿ ಅವರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ನವ್ಯಾ ಸ್ವಾಮಿ


ಈ ವಿಷಯ ತಿಳಿಯುತ್ತಿದ್ದಂತೆಯೇ ಕ್ವಾರಂಟೈನ್​ ಆಗಿರುವ ನವ್ಯಾ ಸ್ವಾಮಿ, ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ. ಜೊತೆಗೆ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. 'ನನಗೆ ಕೊರೋನಾ ಸೋಂಕು ತಗುಲಿರುವುದು ನಿಜ. ನಾನು ಕ್ವಾರಂಟೈನ್​ ಆಗುವುದರೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಕ್ವಾರಂಟೈನ್ ಆಗಿ. ಕೊರೋನಾ ಸೋಂಕು ಇರುವ ಗುಣಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಗಾಗಿ' ಎಂದು ಮನವಿ ಮಾಡಿದ್ದಾರೆ ನವ್ಯಾ. 
View this post on Instagram
 

#staystrong #staypositive #donotpanic #covid19 #fightforcorona #gocoronago #fighttogether #morepower #thankful #navyaswamy


A post shared by Navya Swamy (@navya_swamy) on


'ಕೊರೋನಾ ಸೋಂಕು ತಗುಲಿದ ಮಾತ್ರಕ್ಕೆ ನಾಚಿಕೆ ಪಡುವ ಅಗತ್ಯವಿಲ್ಲ. ಆಡಿಕೊಳ್ಳುವ ಮಂದಿಯ ಮಾತುಗಳಿಗೆ ಕಿವಿಗೊಡದಿರಿ. ನನ್ನ ಆರೋಗ್ಯದ ಕುರಿತು ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ' ಎಂದಿದ್ದಾರೆ ಈ ನಟಿ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​​: ರಿಲೀಸ್​ ಆಯ್ತು ಹೊಸ ಚಿತ್ರದ ಪೋಸ್ಟರ್​..!

ಮೈಸೂರು ಮೂಲದ ನವ್ಯಾ ಸ್ವಾಮಿ ಈ ಹಿಂದೆ ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತಮಿಳು ಹಾಗೂ ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡ ನವ್ಯಾ ವಾಣಿ ರಾಣಿ, 'ನಾ ಪೇರು ಮೀನಾಕ್ಷಿ' ಧಾರಾವಾಹಿಗಳ ಮೂಲಕ ತಮಿಳು- ತೆಲುಗು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಹೊಸ ಲುಕ್​ನ ಫೋಟೋಗಳನ್ನು ಹಂಚಿಕೊಂಡು ಮಾಧ್ಯಮಗಳ ಮೇಲೆ ಗರಂ ಆದ ಸ್ಯಾಂಡಲ್​ವುಡ್​ ನಟಿ..!


 

 

ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮಿಮಿಕ್ರಿ ರಾಜ ಗೋಪಾಲ್ ಇನ್ನಿಲ್ಲ
First published: July 2, 2020, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading