ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar) ಕುಮಾರ್ ಅಭಿನಯದ ವೇದ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಎಲ್ಲೆ ನೋಡಿದ್ರೂ ಅರ್ಜುನ್ (Arjun Janya) ಜನ್ಯ ಸಂಗೀತದ ಈ ಚಿತ್ರದ ಹಾಡುಗಳದ್ದೇ ಈಗ ಭಾರೀ ಸದ್ದು ಇದೆ. ಇದರ ಬೆನ್ನಲ್ಲಿಯೇ ಇದೇ ವೇದ ಚಿತ್ರದ "ಗಿಲ್ಲಕ್ಕೋ" ಹಾಡು ವೈರಲ್ ಆಗಿಬಿಟ್ಟಿದೆ. ಯಾವುದೇ ರೀಲ್ಸ್ ಅಲ್ಲೂ ಈ ಹಾಡಿನ ಹಿನ್ನೆಲೆ ಇದ್ದೇ ಇರುತ್ತದೆ. ಇಲ್ವೇ (Reels Craze) ರೀಲ್ಸ್ ಕ್ರೇಜ್ ಇರೋರು ಇದೇ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಇದಕ್ಕೂ ಹೆಚ್ಚಾಗಿ ಸೆಲೆಬ್ರಿಟಿಗಳು ಈ ಒಂದು ಹಾಡಿಗೆ ರೀಲ್ಸ್ ಮಾಡ್ತಿದ್ದಾರೆ. ಅದೇ ರೀತಿ ಪುಟ್ಟ ಪರದೆಯ ರಾಮಾಚಾರಿ ಪಾತ್ರ ಖ್ಯಾತಿಯ ನಟ ರಿತ್ವಿಕ್ (Rithvik Krupakar) ಕೃಪಾಕರ್ ಕೂಡ ಇದೇ ಹಾಡಿಗೆ ಈಗ ರೀಲ್ಸ್ ಮಾಡಿದ್ದಾರೆ.
ಶಿವನ ಹಾಡಿಗೆ ರಾಮಾಚಾರಿಯ ಸೂಪರ್ ರೀಲ್ಸ್
ಕನ್ನಡದ ವೇದ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿವೆ. ಇರೋ ಎಲ್ಲ ಹಾಡುಗಳೂ ಜನರ ಮನಸನ್ನ ಕದ್ದು ಬಿಟ್ಟಿವೆ. ಪ್ರತಿ ಸಂಗೀತ ಪ್ರೇಮಿ ಕೂಡ ಈ ಚಿತ್ರದ ಹಾಡನ್ನ ಈಗಲೂ ಗುನುಗುತ್ತಿದ್ದಾರೆ.
ವೇದ ಸಿನಿಮಾದಲ್ಲಿ ಒಳ್ಳೆ ಕಥೆ ಇದೆ. ಈ ಕಥೆಗೆ ತಕ್ಕನಾದ ಹಾಡುಗಳು ಇವೆ. ಶಿವರಾಜ್ ಕುಮಾರ್ ಮತ್ತು ಅದಿತಿ ಸಾಗರ್ ಪಾತ್ರವೂ ಕನ್ನಡ ನಾಡಿನ ಜನರ ಮನಸನ್ನ ಕದ್ದು ಬಿಟ್ಟಿದೆ.
View this post on Instagram
ಇತ್ತೀಚಿಗೆ ಮಾಡಿರೋ ಈ ರೀಲ್ಸ್ ನಿಜಕ್ಕೂ ಸ್ಪೆಷಲ್ ಅನಿಸುತ್ತದೆ. ಇದಕ್ಕಾಗಿಯೇ ವಿಶೇಷವಾದ ಕಾಸ್ಟೂಮ್ ಅನ್ನ ನಟ ರಿತ್ವಿಕ್ ಕೃಪಾಕರ್ ಧರಿಸಿಕೊಂಡಿದ್ದಾರೆ.
ಹಳದಿ ಬಣ್ಣದ ಗಾಡಿ-ಸೂಪರ್ ಡೂಪರ್ ಲುಕ್ಕು!
ರಾಮಾಚಾರಿ ರಿತ್ವಿಕ್ ಕೃಪಾಕರ್ ತುಂಬಾ ಚೆನ್ನಾಗಿರೋ ರೀಲ್ಸ್ ಮಾಡಿದ್ದಾರೆ. ಇದಕ್ಕಾಗಿಯೇ ಲುಂಗಿ ಧರಿಸಿದ್ದಾರೆ. ಅದ್ಭುತ ಕಲರ್ ಇರೋ ಶಾರ್ಟ್ ಕುರ್ತಾ ಕೂಡ ಹಾಕಿದ್ದಾರೆ. ಕೊರಳಲ್ಲಿ ರುದ್ರಾಕ್ಷಿನೂ ಇದೆ. ಹಿಂಗೆ ಈ ಒಂದು ರೀಲ್ಸ್ಗಾಗಿಯೇ ರಿತ್ವಿಕ್ ರೆಡಿ ಆಗಿದ್ದಾರೆ.
ಸಖತ್ ಸ್ಟೈಲ್ ಆಗಿಯೇ ರಿತ್ವಿಕ್ ಈ ಒಂದು ರೀಲ್ಸ್ ಅಲ್ಲಿ ಕಾಣಿಸಿಕೊಳ್ತಾರೆ. ಹಳದಿ ಬಣ್ಣದ ಗಾಡಿನೂ ಏರಿ ಬರ್ತಾರೆ. ಒಂದು ರೀತಿ ಇದು ಗಿಲ್ಲಕ್ಕೋ ಹಾಡಿನ ಇನ್ನೂ ಒಂದು ವಿಶೇಷ Version ಅಂತಲೇ ಹೇಳಬಹುದು. ಹಾಗಿದೆ ಈ ಒಂದು ರೀತಿಲ್ಸ್
ರಾಮಾಚಾರಿ ರೀಲ್ಸ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್
ಪುಟ್ಟ ಪರದೆಯ ರಾಮಾಚಾರಿ ರೀಲ್ಸ್ ಮಾಡೋದ್ರಲ್ಲೂ ಇಂಟ್ರಸ್ಟ್ ಇಟ್ಟುಕೊಂಡಿದ್ದಾರೆ. ಅದರಲ್ಲೂ ಶಿವರಾಜ್ ಕುಮಾರ್ ಅವರ ಗಿಲ್ಲಕ್ಕೋ ಹಾಡಿಗೆ ರೀಲ್ಸ್ ಮಾಡಿರೋದು ತುಂಬಾನೆ ಖುಷಿ ತಂದಿದೆ.
ಈ ಸಂತೋಷವನ್ನ ಹಂಚಿಕೊಳ್ಳುತ್ತಲೇ ನಟ ರಿತ್ವಿಕ್ ಕೃಪಾಕರ್ ತಮ್ಮ ವಿಶೇಷ ರೀಲ್ಸ್ ವೀಡಿಯೋವನ್ನ ಎಲ್ಲರ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ. ಹಾಗೇನೆ ಈ ರೀಲ್ಸ್ ಮಾಡೋಕೆ ಹೆಲ್ಪ್ ಮಾಡಿರೋ ಎಲ್ಲರಿಗೂ ಥ್ಯಾಂಕ್ಸ್ ಕೂಡ ರಿತ್ವಿಕ್ ಇದೇ ಪೇಜ್ ಅಲ್ಲಿಯೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Puttanna Kanagal: ಕನ್ನಡದ ರಂಗನಾಯಕಿ ಚಿತ್ರದಲ್ಲಿ ಆರತಿ ಅಲ್ಲದೇ ಇನ್ನೂ ಒಬ್ಬ ನಾಯಕಿ ಇದ್ರು ಗೊತ್ತೇ?
ಒಟ್ಟಾರೆ, ರೀಲ್ಸ್ ಕ್ರೇಜ್ ಇರೋರ ಸಾಲಿನಲ್ಲಿ ಕಿರುತೆರೆಯ ರಾಮಾಚಾರಿ ಕೂಡ ಇದ್ದಾರೆ. ತಮ್ಮ ವಿಶೇಷ ರೀಲ್ಸ್ ಮೂಲಕ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ರೀಲ್ಸ್ ನೋಡಿದವ್ರು ರಿತ್ವಿಕ್ ಮುಂದಿನ ರೀಲ್ಸ್ ಯಾವುದಿರಬಹುದು ಅಂತಲೂ ಗೆಸ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ