• Home
  • »
  • News
  • »
  • entertainment
  • »
  • Salman Khan: ಮತ್ತೆ ಕೃಷಿ ಮಾಡುತ್ತಾ ಕಾಣಿಸಿಕೊಂಡ ಸಲ್ಮಾನ್​ ಖಾನ್​..!

Salman Khan: ಮತ್ತೆ ಕೃಷಿ ಮಾಡುತ್ತಾ ಕಾಣಿಸಿಕೊಂಡ ಸಲ್ಮಾನ್​ ಖಾನ್​..!

ನಟ ಸಲ್ಮಾನ್​ ಖಾನ್​

ನಟ ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​ ಹಂಚಿಕೊಂಡಿದ್ದ ಹಳೇ ಫೋಟೋದಲ್ಲಿ ಅಂಗೈ ಬಿಟ್ಟು ಉಳಿದೆಲ್ಲ ಭಾಗವೂ ಮಣ್ಣನಿನಲ್ಲಿ ತೊಯ್ದಿತ್ತು. ಈ ಫೋಟೋ ನೋಡಿದ ಅನೇಕರು ಸಲ್ಮಾನ್​ ಖಾನ್​ ಕೇವಲ ಪೋಸ್​ ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು.

  • Share this:

ಬಾಲಿವುಡ್ ಬ್ಯಾಡ್​ ಬಾಯ್ ಸಲ್ಮಾನ್​ ಖಾನ್​ ಇತ್ತೀಚೆಗೆ ರಿಯಾಲಿಟಿ ಶೋ ಬಿಗ್​ಬಾಸ್​ನಿಂದಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಲ್ಮಾನ್​ ಖಾನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಒಂದು ಫೋಟೋದಿಂದಾಗಿ ಸದ್ಯ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಸಲ್ಮಾನ್​ ಖಾನ್​ ಮತ್ತೆ ಕೃಷಿ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಸಲ್ಮಾನ್​ ಖಾನ್, ಕೃಷಿ ಮಾಡಿ ಸುಸ್ತಾಗಿ ಕುಳಿತಿದ್ದ ಫೋಟೋ ಒಂದನ್ನು ಹಾಕಿದ್ದರು. ಅದರಲ್ಲಿ ಅವರ ಮೈ ಪೂರ್ತಿ ಮಣ್ಣಾಗಿತ್ತು. ಆದರೆ, ಕೈ ಮಾತ್ರ ಮಣ್ಣಾಗಿರಲಿಲ್ಲ. ಇದು ಸಾಕಷ್ಟು ಟ್ರೋಲ್​ ಆಗಿತ್ತು. ಈ ವಿಚಾರದಲ್ಲಿ ಟ್ರೋಲ್​ ಮಾಡಿದವರಿಗೆ ಸಲ್ಮಾನ್​ ಖಾನ್​ ಖಡಕ್​ ತಿರುಗೇಟು ಸಹ ನೀಡಿದ್ದರು. ಕೊರೋನಾ ವೈರಸ್ ಲಾಕ್​ಡೌನ್​ ಆದ ಬೆನ್ನಲ್ಲೇ ಸಲ್ಮಾನ್​ ಖಾನ್​ ತಮ್ಮ ಫಾರ್ಮ್​ಹೌಸ್​ಗೆ ತೆರಳಿದ್ದರು. ಅಲ್ಲಿ ತಮ್ಮ ಗದ್ದೆಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಂಡಿದ್ದರು. 


ಸಲ್ಮಾನ್​ ಖಾನ್​ ಹಂಚಿಕೊಂಡಿದ್ದ ಹಳೇ ಫೋಟೋದಲ್ಲಿ ಅಂಗೈ ಬಿಟ್ಟು ಉಳಿದೆಲ್ಲ ಭಾಗವೂ ಮಣ್ಣನಿನಲ್ಲಿ ತೊಯ್ದಿತ್ತು. ಈ ಫೋಟೋ ನೋಡಿದ ಅನೇಕರು ಸಲ್ಮಾನ್​ ಖಾನ್​ ಕೇವಲ ಪೋಸ್​ ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು. ಆಗ, ಸಲ್ಮಾನ್​ ಖಾನ್​ ಅವರೆಲ್ಲರಿಗೂ ಉತ್ತರ ನೀಡಲು, ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಆ ವಿಡಿಯೋದಲ್ಲಿ ಸಲ್ಮಾನ್​ ಖಾನ್​ ಟ್ರ್ಯಾಕ್ಟರ್​ ಓಡಿಸುತ್ತಿದ್ದು, ಜೊತೆಗೆ ನಾಟಿ ಮಾಡುತ್ತಿದ್ದಾರೆ. ಈ ಮೂಲಕ ಸಲ್ಲು ಆಗ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.


ಈಗ ಮತ್ತೆ, ಸಲ್ಮಾನ್​ ಖಾನ್​ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಆ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಸಲ್ಲು ಗುದ್ದಲಿ ಹಿಡಿದು ನೆಲ ಅಗೆಯುತ್ತಿದ್ದಾರೆ. ಈ ಪೋಸ್ಟ್ ನೋಡಿದ ಸ್ಟಾರ್​ಗಳು ಹಾಗೂ ನೆಟ್ಟಿಗರು ವಾವ್​ ಎನ್ನುತ್ತಿದ್ದಾರೆ.
ಅಷ್ಟೇ ಅಲ್ಲದೆ ಸಲ್ಮಾನ್​ ಖಾನ್​ ತಮ್ಮ ಶರ್ಟ್​ಲೆಸ್​ ಫೋಟೋವೊಂದನ್ನೂ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.ಸಲ್ಮಾನ್​ ಖಾನ್​ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಕಂಡ ದಬಾಂಗ್​ 3 ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಸುದೀಪ್​ ಕೂಡ ಬಣ್ಣ ಹಚ್ಚಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಸಲ್ಮಾನ್​ ಖಾನ್​ ರಾಧೆ ಸಿನಿಮಾದ ಚಿತ್ರೀಕರಣದ ಜೊತೆಗೆ ರಿಯಾಲಿ ಟಿ ಕಾರ್ಯಕ್ರಮದಲ್ಲೂ ಬ್ಯುಸಿಯಾಗಿದ್ದಾರೆ.  ರಾಧೆ ಸಿನಿಮಾ ಮೇ ತಿಂಗಳಲ್ಲಿನಲ್ಲೇ ತೆರೆಕಾಣಬೇಕಿತ್ತು. ಆದರೆ, ಕೊರೋನಾ ಲಾಕ್​ಡೌನ್​ನಿಂದಾಗಿ​ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

Published by:Anitha E
First published: