Yugantara Serial: ಯುಗಾಂತರ ಧಾರಾವಾಹಿಯ ನಟನಟಿಯರನ್ನ ಭೇಟಿಯಾಗ್ಬೇಕಾ? ಈ ಪ್ರೋಗ್ರಾಂಗೆ ಹೋಗಿ - ಎಲ್ಲಿ? ಯಾವತ್ತು? ಡೀಟೆಲ್ಸ್ ಇಲ್ಲಿದೆ

Siri Kannada: ನಿಮಗೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದ್ದಲ್ಲಿ ಮೊದಲೇ ಮೇಲ್​ ಮಾಡಿ ಪಾಸ್​ ಪಡೆಯಬಹುದು. ನಂತರ ಪಾಸ್ ಅನ್ನು ಕಾರ್ಯಕ್ರಮಕ್ಕೆ ಹೋದಾಗ ತೋರಿಸಿದರೆ ಸಾಕು.

ಯುಗಾಂತರ

ಯುಗಾಂತರ

  • Share this:
ಕಳೆದ ಕೆಲ ವರ್ಷದ ಹಿಂದೆ ಆರಂಭವಾದ ಹೊಸ ಎಂಟರ್​ಟೈನ್​ಮೆಂಟ್​ ಚಾನೆಲ್ (Entertainment Channel) ​ ಸಿರಿ ಕನ್ನಡ (Siri Kannada) ವಿಭಿನ್ನ ಧಾರಾವಾಹಿ (Serial)  ಹಾಗೂ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುತ್ತಿದೆ. ನಾರಿಗೊಂದು‌ ಸೀರೆ' , 'ಲೈಫ್ ಓಕೆ', 'ಟೂರಿಂಗ್‌ ಟಾಕೀಸ್' 'ಧ್ರುವ ನಕ್ಷತ್ರ', 'ಪ್ರೇಮ್ ಜೊತೆ ಅಂಜಲಿ' ಹೀಗೆ ಅದ್ಭುತ ಧಾರಾವಾಹಿಗಳನ್ನು ಈ ಚಾನೆಲ್ ಜನರಿಗೆ ಮನರಂಜನೆ ನೀಡುತ್ತಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯೊಂದು ಸದ್ಯ 50 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹಾಗಾಗಿ ವಿಶೇಷ ಕಾರ್ಯಕ್ರಮವನ್ನು ವಾಹಿನಿ ಹಮ್ಮಿಕೊಂಡಿದೆ.

ನೀವೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು

ಮೇ 21ರಿಂದ ಈ ವಾಹಿನಿಯಲ್ಲಿ ಆರಂಭವಾಗಿದ್ದ ಯುಗಾಂತರ ಧಾರಾವಾಹಿ ಇದೀಗ ಯಶಸ್ವಿಯಾಗಿ 50 ಸಂಚಿಕೆ ಪೂರೈಸಿ ಮುನ್ನುಗುತ್ತಿದೆ. ಹಾಗಾಗಿ ನಿರ್ದೇಶಕರು ಮತ್ತು ಕಲಾವಿದರೊಂದಿಗೆ, ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಾಹಿನಿ ಎಲ್ಲರಿಗೂ ಆಹ್ವಾನ ನೀಡಿದ್ದು, ಸೀಮಿತ ಸೀಟುಗಳು ಲಭ್ಯವಿರುವುದರಿಂದ, ಆಸಕ್ತರು ಪಾಸುಗಳಿಗಾಗಿ, sarvamtheatre@gmail.com ಈ ವಿಳಾಸಕ್ಕೆ ಮೇಲ್ ಮಾಡಲು ವಾಹಿನಿ ತಿಳಿಸಿದೆ.
ನಿಮಗೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದ್ದಲ್ಲಿ ಮೊದಲೇ ಮೇಲ್​ ಮಾಡಿ ಪಾಸ್​ ಪಡೆಯಬಹುದು. ನಂತರ ಪಾಸ್ ಅನ್ನು ಕಾರ್ಯಕ್ರಮಕ್ಕೆ ಹೋದಾಗ ತೋರಿಸಿದರೆ ಸಾಕು.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಹೋಗಿಲ್ಲ ಕಾಫಿನಾಡು ಚಂದು, ಕಾಯ್ತಿದ್ದ ಫ್ಯಾನ್ಸ್​ಗೆ ನಿರಾಸೆ
ಕಾರ್ಯಕ್ರಮ ನಡೆಯುವ ವಿಳಾಸ

ದಿನಾಂಕ: 9 ಆಗಸ್ಟ್ 2022, ಮಂಗಳವಾರ

ಸ್ಥಳ: ಸಿ ಅಶ್ವಥ್ ಕಲಾ ಭವನ, ಎನ್ ಆರ್ ಕಾಲೊನಿ, ಬೆಂಗಳೂರು.

ಸಮಯ: ಸಂಜೆ 4.30 ರಿಂದ 7 ಗಂಟೆ.

ರೋಹಿಣಿ ಸಿಂಧೂರಿ ಜೀವನ ಆಧರಿತ ಧಾರಾವಾಹಿ?

ಎಸ್ ಎನ್ ಸೇತುರಾಂ ಈ ಹೆಸರನ್ನು ಕೇಳದವರು ಯಾರು ಇಲ್ಲ. ತಮ್ಮ ವಿಭಿನ್ನ ಮಾತುಗಾರಿಕೆ, ನಾಟಕದ ಮೂಲಕ ಪ್ರಸಿದ್ಧರಾಗಿರುವರು ಅವರು. ಅವರು ನಟಿಸಿರುವ ಧಾರಾವಾಹಿ ಎಂದರೆ ಜನರು ಮುಗಿ ಬಿದ್ದು ನೋಡುತ್ತಾರೆ, ಆದರೆ ಈ ಧಾರಾವಾಹಿ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಮಂಥನ ಸೇರಿದಂತೆ ವಿವಿಧ ಧಾರಾವಾಹಿಯನ್ನು ಈಗಾಗಲೇ ನಿರ್ದೇಶನ ಮಾಡಿ ಜನರ ಮನ ಗೆದ್ದಿರುವ ಇವರ ಮತ್ತೊಂದು ಧಾರಾವಾಹಿಯೇ ಈ ಯುಗಾಂತರ. ಈ ಯುಗಾಂತರ ಧಾರಾವಾಹಿ ಖಡಕ್ ಅಧಿಕಾರಿ ರೋಹಿಣಿ ಸಿಂಧೂರಿಯವರ ವೃತ್ತಿ ಬದುಕನ್ನೇ ಆಧರಿಸಿದೆ ಎನ್ನುವ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ: ನಾನು ಸಿಗರೇಟ್ ಸೇದುತ್ತೇನೆ, ತಪ್ಪೇನು? ಬಿಗ್​ಬಾಸ್​ ಮನೆಯಲ್ಲಿ ಸೋನು ಗೌಡ ಪ್ರಶ್ನೆ

ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅಂದರೆ ಜಿಲ್ಲಾಧಿಕಾರಿ ಅರುಂಧತಿ ಪಾತ್ರದಲ್ಲಿ ನಟಿ ದಿವ್ಯ ಕಾರಂತ್ ಕಾಣಿಸಿಕೊಂಡಿದ್ದು, ಅದರಲ್ಲಿ ಅವರ ಮಾತಿನ ಶೈಲಿ ಹಾಗೂ ಉಡುಗೆ ಸಹ ರೋಹಿಣಿ ಸಿಂಧೂರಿಯನ್ನು ಹೋಲುತ್ತಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದರು. ಸೇತುರಾಂ ಅವರ ಧಾರಾವಾಹಿ ಎಂದರೆ ಡೈಲಾಗ್ಗಳ ಮೂಲಕ ಫೇಮಸ್, ಒಂದು ಮಾತಿನ ಹಿಂದೆ ಸಾವಿರಾರು ಅರ್ಥಗಳನ್ನು ಅಡಗಿಸಿ ಹೇಳುವ ಅವರ ಪರಿ ಜನರಿಗೆ ಇಷ್ಟ. ಹಾಗಾಗಿ ಈ ಧಾರಾವಾಹಿಯ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇತ್ತು, ಹಾಗೆಯೆ ಜನರಿಗೆ ಹತ್ತಿರವಾಗುವ ಎಲ್ಲಾ ಅಂಶಗಳು ಈ ಧಾರಾವಾಹಿಯಲ್ಲಿ ಇದೆ ಎನ್ನಲಾಗುತ್ತಿದೆ.
Published by:Sandhya M
First published: