• Home
  • »
  • News
  • »
  • entertainment
  • »
  • Razia Ram Hero Atharva: ಹಾಸನದ ಸಿವಿಲ್ ಇಂಜಿನಿಯರ್ ರಾಮನಾದ ಕಥೆ: ರಜಿಯಾಗೆ ಸಿಕ್ಕ ಹೀರೋನ ರಿಯಲ್ ಸ್ಟೋರಿ ಸಖತ್ ಇಂಟ್ರಸ್ಟಿಂಗ್

Razia Ram Hero Atharva: ಹಾಸನದ ಸಿವಿಲ್ ಇಂಜಿನಿಯರ್ ರಾಮನಾದ ಕಥೆ: ರಜಿಯಾಗೆ ಸಿಕ್ಕ ಹೀರೋನ ರಿಯಲ್ ಸ್ಟೋರಿ ಸಖತ್ ಇಂಟ್ರಸ್ಟಿಂಗ್

ರಾಮ್ ಪಾತ್ರಧಾರಿ ಅಥರ್ವ ಸಿವಿಲ್ ಇಂಜಿನಿಯರ್

ರಾಮ್ ಪಾತ್ರಧಾರಿ ಅಥರ್ವ ಸಿವಿಲ್ ಇಂಜಿನಿಯರ್

ನ್ಯೂಸ್-18 ಡಿಜಿಟಲ್​ ಕನ್ನಡಕ್ಕೆ ತಮ್ಮ ಬಗ್ಗೆ ಅಥರ್ವ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಆ ವಿಷಯಗಳನ್ನ ಇಲ್ಲಿ ಒಂದೊಂದಾಗಿಯೇ ಹೇಳ್ತಾ ಹೋಗುತ್ತೇವೆ ಬನ್ನಿ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯಲ್ಲಿ (Small Screen) ತನ್ನ ಕಂಟೆಂಟ್ ನಿಂದಲೇ ಭಾರೀ ಸಂಚಲನ ಸೃಷ್ಟಿಸಿದ ಧಾರಾವಾಹಿ (Serial) ಯಾವುದು? ಈ ಒಂದು ಪ್ರಶ್ನೆಗೆ ಸದ್ಯ ಒಂದೇ ಉತ್ತರ ಇದೆ. ಅದುವೇ ರಜಿಯಾ (Razia Ram) ರಾಮ್. ರಜಿಯಾ ರಾಮ್ ಒಂದು ಸೂಕ್ಷ್ಮ ವಿಷಯದ ಧಾರವಾಹಿನೇ ಆಗಿದೆ. ಇದನ್ನ ಸುಮ್ನೆ ಮಾಡಿದ್ರೆ ಮುಗಿದೆ ಹೋಯಿತು. ವಿವಾದ ಕಟ್ಟಿಟ್ಟ ಬುತ್ತಿ. ಅಷ್ಟು ಸೆನ್ಸಿಬಲ್ ವಿಷಯವನ್ನ ಸಿರಿ ಕನ್ನಡ (Siri Kannada Channel) ಚಾನೆಲ್ ಪ್ಲಾನ್ ಮಾಡಿಕೊಂಡು ಸೀರಿಯಲ್ ಮಾಡಿಸುತ್ತಿದೆ. ಪ್ರತಿ ಸಂಚಿಕೆಯನ್ನ ಅಷ್ಟೆ ಸೂಕ್ಷ್ಮವಾಗಿ ಗಮನಿಸಿಯೇ ಪ್ರಸಾರ ಮಾಡಲಾಗುತ್ತಿದೆ. ಜವಾಬ್ದಾರಿಯುತವಾಗಿಯೇ ಪ್ರಸಾರ ಆಗುತ್ತಿರೋ ಈ ಸೀರಿಯಲ್​ ನ ರಾಮನ ಪಾತ್ರಧಾರಿಯ ರಿಯಲ್ ಕಥೆ ಕೂಡ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಅದನ್ನ ಸ್ವತಃ ಆ ನಟ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ.


ರಜಿಯಾ "ರಾಮ್" ರಿಯಲ್ ನೇಮ್ ಏನು?
ರಜಿಯಾ ರಾಮ್ ಸೀರಿಯಲ್ ನ ನಟ ರಾಮ್ ಪಾತ್ರಧಾರಿಯ ಹೆಸರು ಅಥರ್ವ. ತುಂಬಾ ವಿಶೇಷವಾಗಿಯೇ ಇದೆ. ಈ ನಟ ಕೂಡ ವಿಶೇಷವಾಗಿಯೇ ಇದ್ದಾರೆ. ರಿಯಲ್ ಲೈಫ್ ಕೂಡ ಅಷ್ಟೇ ಸ್ಪೆಷಲ್ ಆಗಿಯೇ ಇದೆ.


ನ್ಯೂಸ್-18 ಡಿಜಿಟಲ್​ ಕನ್ನಡಕ್ಕೆ ತಮ್ಮ ಬಗ್ಗೆ ಅಥರ್ವ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಆ ವಿಷಯಗಳನ್ನ ಇಲ್ಲಿ ಒಂದೊಂದಾಗಿಯೇ ಹೇಳ್ತಾ ಹೋಗುತ್ತೇವೆ ಬನ್ನಿ.


ರಾಮ್ ಪಾತ್ರಧಾರಿ ಅಥರ್ವ ಸಿವಿಲ್ ಇಂಜಿನಿಯರ್
ರಜಿಯಾ ರಾಮ್ ಸೀರಿಯಲ್​ನ ಹೀರೋ ಅಥರ್ವ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾರೆ. ನಾನು 2020 ಕೊರೊನಾ ಕಾಲದಲ್ಲಿಯೇ ಇಂಜಿನಿಯರಿಂಗ್ ಮುಗಿಸಿದೆ ಅಂತಲೂ ತಮಾಷೆಯಾಗಿಯೇ ಹೇಳಿಕೊಳ್ತಾರೆ. ಸಿವಿಲ್ ಇಂಜಿನಿಯರಿಂಗ್ ಮುಗಿಸಿಕೊಂಡ್ಮಲೇ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.


Razia Ram Hero Atharva talk about his Real Story
ರಜಿಯಾ "ರಾಮ್" ರಿಯಲ್ ನೇಮ್ ಏನು?


ಮನೆಯಲ್ಲಿ ಬೇಡ ಅಂದ್ರು-2 ವರ್ಷ ಟೈಮ್ ಕೊಡಿ ಎಂದೆ-ಅಥರ್ವ
ರಾಮ್ ಪಾತ್ರಧಾರಿ ಅಥರ್ವ ಇಂಜಿನಿಯರಿಂಗ್ ಮುಗಿಸಿಕೊಂಡಿದ್ದರು. ಕೂಡಲೇ ಆ್ಯಕ್ಟಿಂಗ್ ಅನ್ನೆ ಕರಿಯರ್ ಮಾಡಿಕೊಳ್ಳುತ್ತೇನೆ ಅಂದಾಗ, ಮನೆಯಲ್ಲಿ ಯಾರೂ ಒಪ್ಪಿಕೊಳ್ಳಲೇ ಇಲ್ಲ. ಆದರೂ ಮನೆಯವರಿಗೆ ಕನ್ವೆನ್ಸ್ ಮಾಡಿ 2 ವರ್ಷ ಟೈಮ್ ತೆಗೆದುಕೊಂಡು ಬೆಂಗಳೂರು ಕಡೆಗೆ ಅಥರ್ವ ಬಂದೇ ಬಿಟ್ಟರು.


ಇದಾದ್ಮೇಲೆ 6 ತಿಂಗಳು ಯಾವುದು ಅವಕಾಶಗಳೇ ಸಿಕ್ಕಿರಲಿಲ್ಲ. ಆದರೆ ಪ್ರದೀಪ್ ತಿಪಟೂರು ಅವರ ಮಾರ್ಗದರ್ಶನ ಸಿಕ್ಕ ಮೇಲೆ ನಾಟಕ-ಬೀದಿ ನಾಟಕ ಅಂತಲೇ ಅಥರ್ವ ಬ್ಯುಸಿ ಆದ್ರು.


ಇದನ್ನೂ ಓದಿ: Gana Bajana Season 3: ಸ್ಟಾರ್ ಸುವರ್ಣದಲ್ಲಿ ಮತ್ತೆ ಗಾನಬಜಾನ, ಸೀಸನ್ 3ಗೆ ರಿಷಬ್ ಶೆಟ್ಟಿ ಆ್ಯಂಡ್ ಟೀಮ್ ಆಗಮನ!


ಅದಾದ್ಮೆಲೆ ರಜಿಯಾ ರಾಮ್ ಸೀರಿಯಲ್​ನಲ್ಲಿ ರಾಮ್ ಪಾತ್ರವೂ ಸಿಕ್ಕಿ ಬಿಡ್ತು. ಈಗ ರಾಮ್ ಪಾತ್ರಧಾರಿ ಅಥರ್ವ ಫುಲ್ ಖುಷ್ ಆಗಿದ್ದಾರೆ. ಮನೆಯಲ್ಲಿ ಅಪ್ಪ-ಅಮ್ಮ ಕೂಡ ತುಂಬಾ ಖುಷಿಯಾಗಿದ್ದಾರೆ.


ರಾಮ್ ಪಾತ್ರ ಮಾಡಿದಾಗ RSS ಕಾರ್ಯಕರ್ತರ ಬೆಂಬಲ
ರಜಿಯಾ ರಾಮ್ ಒಂದು ವಿಶೇಷ ಸೀರಿಯಲ್ ಆಗಿದೆ. ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನ ಮದುವೆ ಆಗೋದೇ ಈ ಕಥೆಯ ವಿಶೇಷವಾಗಿದೆ. ಅದರಂತೆ ಈ ಸೀರಿಯಲ್ ಆರಂಭವಾದಾಗ ವಿರೋಧಗಳು ಬಂದಿವೆ. ಧಮ್ಕಿಯ ಕರೆಗಳೂ ಬಂದಿವೆ.


Razia Ram Hero Atharva talk about his Real Story
ಹಾಸನದ ಸಿವಿಲ್ ಇಂಜಿನಿಯರ್ ರಾಮನಾದ ಕಥೆ


ಆಗ ರಾಮ್ ಪಾತ್ರಧಾರಿ ಅಥರ್ವಗೆ ಧೈರ್ಯ ನೀಡುವ ಕೆಲಸವನ್ನ RSS ಕಾರ್ಯಕರ್ತರು ಮಾಡಿದ್ದಾರೆ. ನೀವು ಭಯ ಪಡೆಬೇಡಿ. ನಿಮ್ಮ ಪಾತ್ರವನ್ನ ನೀವು ಮಾಡಿ ಅಂತಲೇ ಬೆಂಬಲಿಸಿದ್ದಾರೆ. ಇದರಿಂದ ಅಥರ್ವ ಅಷ್ಟೇ ಖುಷಿಯಲ್ಲಿಯೇ ಅಷ್ಟೆ ನಿಷ್ಠೆಯಿಂದಲೇ ರಜಿಯಾ ರಾಮ್ ಸೀರಿಯಲ್ ಪಾತ್ರವನ್ನ ನಿರ್ವಹಿಸಿ ಈಗ ಗೆದ್ದಿದ್ದಾರೆ.


ರಜಿಯಾ ರಾಮ್ ಸೀರಿಯಲ್​ಗೆ ಇಬ್ಬರು ಡೈರೆಕ್ಟರ್
ರಜಿಯಾ ರಾಮ್ ಸೀರಿಯಲ್​ ಅನ್ನ ಇಬ್ಬರು ಡೈರೆಕ್ಷನ್ ಮಾಡಿದ್ದಾರೆ. 100 ಎಪಿಸೋಡ್​ಗಳನ್ನ ಸುಧಾಕರ್ ರೆಡ್ಡಿ ಡೈರೆಕ್ಟ್ ಮಾಡಿದ್ದಾರೆ. ದಿನೇಶ್ ಅನ್ನೋರು ಇನ್ನುಳಿದ 50 ಎಪಿಸೋಡ್​ಗಳನ್ನ ನಿರ್ದೇಶನ ಮಾಡುತ್ತಿದ್ದಾರೆ.


Razia Ram Hero Atharva talk about his Real Story
ಮನೆಯಲ್ಲಿ ಬೇಡ ಅಂದ್ರು-2 ವರ್ಷ ಟೈಮ್ ಕೊಡಿ ಎಂದೆ-ಅಥರ್ವ


ರಜಿಯಾ ರಾಮ್ ಟಿಆರ್​ಪಿ ಟಾಪ್-ರನ್ನಿಂಗ್ ಸಕ್ಸಸ್​ಫುಲಿ
ರಜಿಯಾ ರಾಮ್ ಸೀರಿಯಲ್ ಚೆನ್ನಾಗಿಯೇ ಹೋಗುತ್ತಿದೆ. ಜನ ಕೂಡ ಇದನ್ನ ಒಪ್ಪಿಕೊಂಡಿದ್ದಾರೆ. ಅಪ್ಪಿಕೊಂಡು ಒಳ್ಳೆ ಟಿಆರ್​ಪಿ ಅನ್ನ ಕೂಡ ಕೊಡ್ತಾಯಿದ್ದಾರೆ. ಇಂತಹ ಈ ಸೀರಿಯಲ್ ಈಗ ಸಿರಿಕನ್ನಡದ ಟಿಆರ್​ಪಿ ವಿಷಯದಲ್ಲಿ ಟಾಪ್ ಅಲ್ಲಿಯೇ ಇದೆ.
ಇನ್ನು ಈ ಸೀರಿಯಲ್ ಮೂಲಕ ನವನಟ ಅಥರ್ವ ಮನೆ ಮಾತಾಗಿದ್ದಾರೆ. ಮನೆಯವರ ನಂಬಿಕೆಯನ್ನೂ ಉಳಿಸಿಕೊಂಡಿದ್ದಾರೆ. ಹೆಮ್ಮೆ ಪಡುವಂತೆನೂ ಇದ್ದಾರೆ.


ಇದನ್ನೂ ಓದಿ:Kantara: ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದ ಕಾಂತಾರ, ರಾಜ್ಯದಲ್ಲಿ ಈವರೆಗೂ 1 ಕೋಟಿ ಟಿಕೆಟ್‌ಗಳು ಸೇಲ್!


ಸೀರಿಯಲ್ ಜೊತೆ ಜೊತೆಗೆ ನಾಟಕ-ಬೀದಿ ನಾಟಕ ಅಂತಲೂ ನಟ ಅಥರ್ವ ಬ್ಯುಸಿ ಆಗಿರುತ್ತಾರೆ. ಸಿನಿಮಾ ಆಫರ್ ಕೂಡ ಬಂದಿದೆ. ಸದ್ಯ ಮಾತುಕತೆ ಕೂಡ ನಡೆಯುತ್ತಿದೆ. ಇನ್ನುಳಿದಂತೆ ಅಥರ್ವ, ರಜಿಯಾಳ ರಾಮನಾಗಿ ಎಲ್ಲರ ದಿಲ್ ಕದ್ದಿದ್ದಾರೆ.

First published: