News18 India World Cup 2019

ಶ್ಯಾನೆ ಟಾಪ್​ಗವ್ನೆ 'ಸಿಂಗ': ಚಿರು ಸರ್ಜಾ ಅಭಿನಯದ ಹೊಸ ಚಿತ್ರದ ಟ್ರೈಲರ್ ಔಟ್

ಈ ಹಿಂದೆ 'ರಾಮ್ ಲೀಲಾ' ಎಂಬ ಚಿತ್ರ ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ನಾಯಕನಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಆರ್ಮುಗಂ ರವಿಶಂಕರ್ ಹಾಗೂ ಬಿ. ಸುರೇಶ್ ಬಣ್ಣ ಹಚ್ಚಿದ್ದಾರೆ.

zahir | news18
Updated:June 14, 2019, 8:35 PM IST
ಶ್ಯಾನೆ ಟಾಪ್​ಗವ್ನೆ 'ಸಿಂಗ': ಚಿರು ಸರ್ಜಾ ಅಭಿನಯದ ಹೊಸ ಚಿತ್ರದ ಟ್ರೈಲರ್ ಔಟ್
ಸಿಂಗ
zahir | news18
Updated: June 14, 2019, 8:35 PM IST
ಸ್ಯಾಂಡಲ್​ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಒಂದಷ್ಟು ಮಾಸ್ ಮತ್ತೊಂದಷ್ಟು ಕ್ಲಾಸ್​ ಕಥೆಯೊಂದಿಗೆ ಈ ಬಾರಿ ತೆರೆ ಮೇಲೆ ಬರುವ ಸೂಚನೆಯನ್ನು ವಿಡಿಯೋದಲ್ಲಿ ಸರ್ಜಾ ಕುಡಿ ನೀಡಿದ್ದಾರೆ.

ಭರ್ಜರಿ ಆ್ಯಕ್ಷನ್​ಗಳಿಂದ ಕೂಡಿರುವ 'ಸಿಂಗ' ಚಿತ್ರವನ್ನು ಯುಕೆಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಇಲ್ಲಿ ತಾಯಿ ಸೆಂಟಿಮೆಂಟ್​ಗಾಗಿ ನಟಿ ತಾರಾ ಇದ್ದರೆ,  ನಗುವಿನ ಕಚಗುಳಿಯಿಡಲು ಶಿವರಾಜ್ ಕೆ.ಆರ್ ಪೇಟೆ ಕೂಡ 'ಸಿಂಗ'ನಿಗೆ ಸಾಥ್ ನೀಡಿದ್ದಾರೆ.

ಈ ಹಿಂದೆ 'ರಾಮ್ ಲೀಲಾ' ಎಂಬ ಚಿತ್ರ ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ನಾಯಕನಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಆರ್ಮುಗಂ ರವಿಶಂಕರ್ ಹಾಗೂ ಬಿ. ಸುರೇಶ್ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ  ಮೈ ನವಿರೇಳಿಸುವಂಥಾ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡು ಆ್ಯಕ್ಷನ್ ಹೀರೋ ಪಟ್ಟಕ್ಕೇರುವ ತವಕದಲ್ಲಿದ್ದಾರೆ.ಚಿತ್ರದಲ್ಲಿ ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಚೇತನ್ ಬರೆದಿರುವ ಹಾಡುಗಳು ಈಗಾಗಲೇ ಭರ್ಜರಿ ಹಿಟ್ ಆಗಿದ್ದು, ಅದರಲ್ಲೂ ಶಾನೆ ಟಾಪ್​ಗವ್ಳೆ ಗೀತೆ ಹೊಸ ಟ್ರೆಂಡ್ ಹುಟ್ಟುಹಾಕಿದೆ. 'ನಾಗಕನ್ನಿಕೆ' ಖ್ಯಾತಿಯ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವುದು ಮತ್ತೊಂದು ವಿಶೇಷ.

ತಮ್ಮ ಮುದ್ದು ಮುಖದಿಂದಲೇ ಮನೆಮಾತನಾಗಿದ್ದ ನಟಿ ಈ ವಿಡಿಯೋ ತುಣುಕಿನಲ್ಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಒಂದು ವರ್ಷದ ಬಳಿಕ ಚಿರು ಸರ್ಜಾ 'ಸಿಂಗ' ಅವತಾರದಲ್ಲಿ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದು, ಟ್ರೈಲರ್​ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
Loading...

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...