ಥಿಯೇಟರ್​ಗೆ ಜನರನ್ನ ಸೆಳೆಯೋಕೆ ಹೊಸ ತಂತ್ರ: ಮಲ್ಟಿಪ್ಲೆಕ್ಸ್​- ಚಿತ್ರಮಂದಿರಗಳಲ್ಲಿ ಕಡಿಮೆಯಾದ ಟಿಕೆಟ್ ದರ

ಪ್ರೇಕ್ಷಕರನ್ನು ಸೆಳೆಯಲು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ನವರು ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಹಿಂದೆಂದಿಗಿಂತಲೂ ಕಡಿಮೆ ಬೆಲೆಗೆ ಟಿಕೆಟ್​ ಮಾರಾಟ ಮಾಡುತ್ತಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನಿಂದ ಬಹುತೇಕ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಬಾಗಿಲು ತೆರೆದಿವೆ. ಏಳು ತಿಂಗಳ ಬಳಿಕ ಬೆಳ್ಳಿತೆರೆ ಮೇಲೆ ಸಿನಿಮಾ ರಿಲೀಸ್ ಆಗಿದೆ. ನಿನ್ನೆಯಿಂದ ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್ ಬಾಗಿಲು ತೆರೆಯಲು ಅವಕಾಶ ಸಿಕ್ಕಿದ್ದರೂ, ಕೆಲವೇ ಚಿತ್ರಮಂದಿರಗಳು ಮಾತ್ರ ಓಪನ್ ಆಗಿದ್ದವು. ಅದರ ಜೊತೆಗೆ ಕೆಲವು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರೇಕ್ಷಕರಿಲ್ಲದೆ ಕೆಲವು ಸಿನಿಮಾ ಶೋಗಳನ್ನು ಕ್ಯಾನ್ಸಲ್​ ಸಹ ಮಾಡಲಾಗಿತ್ತು. ಆದರೆ ಇಂದಿನಿಂದ ಸಾಕಷ್ಟು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿವೆ. ಇಂದಾದರೂ ಸಿನಿ ಪ್ರಿಯರು ಸಿನಿಮಾ ನೋಡಲು ಬರುತ್ತಾರಾ ಎಂದು ಥಿಯೇಟರ್​ಗಳ ಮಾಲೀಕರು ಹಾಗೂ ಮಲ್ಟಿಪ್ಲೆಕ್ಸ್​ನವರು ಕಾಯುವಂತಾಗಿದೆ. ಸಿನಿಮಾ ರಿಲೀಸ್​ ಮಾಡಲು ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ನಿಯಮಗಳನ್ನು ಪಾಲಿಸಲಾಗುತ್ತಿದೆ. ಜೊತೆಗೆ ಜನರ ಸುರಕ್ಷೆತೆಗಾಗಿ ಸಾಕಷ್ಟು ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಆದರೂ ಜನರು ಸಿನಿಮಾ ನೋಡಲು ಊಹಿಸಿದಷ್ಟು ಬರುತ್ತಿಲ್ಲ. 

ಇಂದಿನಿಂದ ಬೆಳ್ಳಿತೆರೆ ಮೇಲೆ ಮತ್ತೆ ರಾರಾಜಿಸೋಕೆ ಸಿದ್ಧನಾಗಿದ್ದಾನೆ ಶಿವಾರ್ಜುನ. ಸಂತೋಷ ಚಿತ್ರಮಂದಿರದಲ್ಲಿ ಶಿವಾರ್ಜುನ ಸಿನಿಮಾ ಇಂದು ರಿಲೀಸ್ ಆಗಿದೆ. ಅಲ್ಲದೆ ಚಿತ್ರಮಂದಿರಗಳ ಹಬ್​ ಆಗಿರುವ ಮೆಜೆಸ್ಟಿಕ್​ ಏರಿಯಾದಲ್ಲಿ  ಸ್ವಪ್ನ, ಸಂತೋಷ, ಭೂಮಿಕಾ ಥಿಯೇಟರ್​ ಗಳಲ್ಲಿ ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ.

Shivarjuna Kannada Movie Re releasing on October 16 in 100 theaters,
ಶಿವಾರ್ಜುನ ಪೋಸ್ಟರ್​


ಪ್ರೇಕ್ಷಕರನ್ನು ಸೆಳೆಯಲು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ನವರು ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಹಿಂದೆಂದಿಗಿಂತಲೂ ಕಡಿಮೆ ಬೆಲೆಗೆ ಟಿಕೆಟ್​ ಮಾರಾಟ ಮಾಡುತ್ತಿದ್ದಾರೆ.

Single screens and multiplex reduced the tickets rate to attract movie lovers
ಕಡಿಮೆಯಾದ ಟಿಕೆಟ್ ಬೆಲೆ
ಮಲ್ಟಿಪ್ಲೆಕ್ಸ್​ಗಳಲ್ಲಿ ಸಾಮಾನ್ಯವಾಗಿ ರಿಕ್ಲೈನರ್​ ಸೀಟ್​ 400-1000ರದವರೆಗೆ ಇರುತ್ತಿತ್ತು. ವಾರದ ದಿನಗಳಲ್ಲಿ ಮಾತ್ರ 300ಕ್ಕೆ ಇಳಿಸಲಾಗುತ್ತಿತ್ತು. ಆದರೆ ಈಗ ಅದು 150ಕ್ಕೆ ಇಳಿದಿದೆ. ಇನ್ನು ಸಾಮಾನ್ಯವಾದ ಸೀಟ್​ಗಳು ಅಂದರೆ ಕ್ಲಾಸಿಕ್​ 90 ರೂಪಾಯಿಗೆ ಇಳಿಸಲಾಗಿದೆ.Single screens and multiplex reduced the tickets rate to attract movie lovers
ಕಡಿಮೆಯಾದ ಟಿಕೆಟ್ ದರ


ಇನ್ನು ಹಲವು ಚಿತ್ರಮಂದಿರಗಳೂ ಸಹ ಇದೇ ಮಾರ್ಗ ಅನುಸರಿಸುತ್ತಿವೆ. ಮೊದಲು
ಬಾಲ್ಕನಿ 120 ರೂಪಾಯಿ ಇತ್ತು,. ಈಗ 100 ರೂಪಾಯಿಗೆ ಇಳಿಕೆಯಾಗಿದೆ. 100 ರೂಪಾಯಿ ಇದ್ದ ಗಾಂಧಿಕ್ಲಾಸ್ ಟಿಕೆಟ್ ದರ 90 ರೂಪಾಯಿಯಾಗಿದೆ. ಕನ್ನಡದ 7 ಚಿತ್ರಗಳು ಸೇರಿದಂತೆ 12ಕ್ಕೂ ಹೆಚ್ಚು ಸಿನಿಮಾಗಳು ರೀ-ರಿಲೀಸ್ ಆಗಿವೆ. ಕನ್ನಡದ ಲವ್ ಮಾಕ್ಟೇಲ್, ಮಾಯಬಜಾರ್, ಶಿವಾಜಿ ಸುರತ್ಕಲ್, ಶಿವಾರ್ಜುನ, 3 rd ಕ್ಲಾಸ್, 5 ಅಡಿ 7 ಅಂಗುಲ ಸಿನಿಮಾಗಳು ರೀ ರಿಲೀಸ್ ಆಗಿವೆ. ಹಿಂದಿಯ ಥಪ್ಪಡ್, ತೆಲುಗಿನ ಭೀಷ್ಮ, ತಮಿಳಿನ ಧಾರಾಳ ಪ್ರಭು, ಇಂಗ್ಲಿಷ್ ಸಿನಿಮಾ ಐ ಸ್ಪೈ ಕೂಡ ರೀ-ರಿಲೀಸ್ ಆಗಿವೆ.
Published by:Anitha E
First published: