ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಜನನಿಬಿಡ ಸ್ಥಳಕ್ಕೆ ಹೋದರೆ, ಅಲ್ಲಿ ನಾವು ನಮ್ಮ ಮಕ್ಕಳಿಗೆ (Children) ಕಿರಿಕಿರಿ ಆಗಬಾರದು ಎಂದು ಅವರನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತೇವೆ. ಅಥವಾ ನಮ್ಮ ತೋಳುಗಳಲ್ಲಿ ಮಗುವನ್ನು ಎತ್ತಿಕೊಂಡು ಆ ಜನದಟ್ಟಣೆಯನ್ನು (People) ದಾಟಿಸುತ್ತೇವೆ. ಎಷ್ಟೋ ಸಾರಿ ಮಕ್ಕಳಿಗೆ ಅಷ್ಟೊಂದು ಜನರಿರುವ ಸ್ಥಳಕ್ಕೆ ಹೋದಾಗ ತುಂಬಾನೇ ಕಿರಿಕಿರಿ ಅಂತ ಅನ್ನಿಸುತ್ತದೆ. ಎಷ್ಟೋ ಬಾರಿ ಈ ದೊಡ್ಡ ದೊಡ್ಡ ಸರತಿ ಸಾಲುಗಳಲ್ಲಿ ಗಂಟೆಗಟ್ಟಲೆ ಅಪ್ಪಂದಿರು ನಿಂತಾಗ ತಮ್ಮ ಹೆಗಲ ಮೇಲೆ ತಮ್ಮ ಮಗುವನ್ನು (Baby) ಕೂರಿಸಿಕೊಂಡು ಇರುವುದನ್ನು ನಾವು ನೋಡಿರುತ್ತೇವೆ.
ಹೀಗೆಯೇ ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಸಿನೆಮಾ ನಟನೊಬ್ಬ ಒಂದು ಮಗುವನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಬಂದಿದ್ದಾರೆ ನೋಡಿ.
ಈ ಸಿನೆಮಾ ನಟ ಮಗುವನ್ನ ತೋಳಿನಲ್ಲಿ ಎತ್ತಿಕೊಂಡು ಬಂದಿದ್ದಾರೆ
ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ತನ್ನ ತೋಳುಗಳಲ್ಲಿ ಮಗುವನ್ನು ಎತ್ತಿಕೊಂಡು ಜನಸಮೂಹದಿಂದ ರಕ್ಷಿಸಿದ್ದನ್ನು ನೋಡಿದ ನೆಟ್ಟಿಗರು ಇವರನ್ನು ನಿಜ ಜೀವನದ ಹೀರೋ ಅಂತ ಹೇಳುತ್ತಿದ್ದಾರೆ.
ಮುಂಬೈನ ಉಪನಗರಗಳಲ್ಲಿ ತಮ್ಮ ಮುಂಬರುವ ಚಿತ್ರ ‘ಸರ್ಕಸ್’ ಅನ್ನು ಪ್ರಚಾರ ಮಾಡುವಾಗ, ಅಲ್ಲಿಯೇ ಹಿಂದೆ ಸ್ವಲ್ಪ ದೂರದಲ್ಲಿ ಒಂದು ಮಗು ಅಳುತ್ತಿರುವುದನ್ನು ಮತ್ತು ಜನಸಮೂಹದಲ್ಲಿ ತಳ್ಳಲ್ಪಡುತ್ತಿರುವುದನ್ನು ಈ ನಟ ರಣವೀರ್ ಅವರು ಗಮನಿಸಿದರು.
ಮಗುವನ್ನು ಆ ಜನಸಮೂಹದಿಂದ ರಕ್ಷಿಸಿ ನಿಜವಾಗಿ ಹೀರೋ ಆದ ರಣವೀರ್
ನಟ ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈನ ಉಪನಗರಗಳಲ್ಲಿ ನಡೆದ ಮಲಾಡ್ ಮಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಜನಸಮೂಹದಲ್ಲಿ ತಳ್ಳಲ್ಪಡುತ್ತಿದ್ದ ಚಿಕ್ಕ ಮಗುವನ್ನು ಗಮನಿಸಿದರು.
ಆ ಚಿಕ್ಕ ಮಗುವಿಗೆ ಕಿರಿಕಿರಿ ಆಗುವುದನ್ನು ಗಮನಿಸಿದ ತಕ್ಷಣವೇ ಆ ಮಗುವನ್ನು ಅಲ್ಲಿಂದ ತನ್ನ ತೋಳಿನಲ್ಲಿ ಎತ್ತಿಕೊಂಡು ಬಂದರು ನಟ ರಣವೀರ್.
ಅವರು ಆ ಮಗುವನ್ನು ಸುರಕ್ಷಿತವಾಗಿ ಕರೆದೊಯ್ಯುವುದನ್ನು ಮತ್ತು ನಟ ತನ್ನ ಬಾಡಿಗಾರ್ಡ್ ಗಳ ಬಳಿಗೆ ಮರಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು.
ರಣವೀರ್ ಅವರ ಈ ವೀಡಿಯೋ ನೆಟ್ಟಿಗರ ಹೃದಯ ಗೆದ್ದಿದೆ
ನಟ ರಣವೀರ್ ತನ್ನ ತೋಳುಗಳಲ್ಲಿ ಮಗುವನ್ನು ಎತ್ತಿಕೊಂಡಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ನಟನು ಆ ಮಗುವಿನ ಬಗ್ಗೆ ತೋರಿಸಿದ ಕಾಳಜಿಯನ್ನು ಅಂತರ್ಜಾಲದಲ್ಲಿ ನೆಟ್ಟಿಗರ ಹೃದಯಗಳನ್ನು ಗೆಲ್ಲುತ್ತಿದೆ ಎಂದು ಹೇಳಬಹುದು.
View this post on Instagram
ಸರ್ಕಸ್ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ..
ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಣವೀರ್ ಜೊತೆಗೆ ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡಿಸ್, ಜಾನಿ ಲಿವರ್, ಸಂಜಯ್ ಮಿಶ್ರಾ ಮತ್ತು ವರುಣ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಪ್ರಸ್ತುತ ‘ಕರೆಂಟ್ ಲಗಾ ರೇ’ ಚಿತ್ರದ ಮೊದಲ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವು 1982 ರಲ್ಲಿ ಬಿಡುಗಡೆಯಾದ ‘ಅಂಗೂರ್’ ಚಿತ್ರವನ್ನು ಆಧರಿಸಿದೆ, ಇದು 1968 ರಲ್ಲಿ ಬಿಡುಗಡೆಯಾದ ‘ದೋ ದೂನಿ ಚಾರ್’ ಚಿತ್ರದ ರಿಮೇಕ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ