HOME » NEWS » Entertainment » SINGER SP BALASUBRAHMANYAM HEALTH STABLE SAYS TODAY HOSPITAL HEALTH BULLETIN HK

SPB Health Update : ಎಸ್ ಬಿಪಿ ಆರೋಗ್ಯದಲ್ಲಿ ಚೇತರಿಕೆ ; ಆಸ್ಪತ್ರೆಯಿಂದ ಪ್ರಕಟಣೆ

SPB Health Update : ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಈಗಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ನಮ್ಮ ಕ್ಲಿನಿಕಲ್ ಟೀಮ್​ನಿಂದ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.

news18-kannada
Updated:August 26, 2020, 11:28 PM IST
SPB Health Update : ಎಸ್ ಬಿಪಿ ಆರೋಗ್ಯದಲ್ಲಿ ಚೇತರಿಕೆ ; ಆಸ್ಪತ್ರೆಯಿಂದ ಪ್ರಕಟಣೆ
ಎಸ್ ಪಿ ಬಾಲಸುಬ್ರಹ್ಮಣ್ಯಂ
  • Share this:
ಗಾನ ಗಂಧರ್ವ, ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಎಂಜಿಎಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇಂದು ಬಿಡುಗಡೆಯಾದ ಎಂಜಿಎಂ ಆಸ್ಪತ್ರೆಯ ಆಸ್ಪತ್ರೆಯ ಹೆಲ್ತ್ ಬುಲೆಟಿನ್​ನಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.

ಕೋವಿಡ್-19 ಸೋಂಕಿನಿಂದ ದಾಖಲಾಗಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ವೆಂಟಿಲೇಟರ್ ಮತ್ತು ಇಸಿಎಂಒ ಸಪೋರ್ಟ್​ನಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಅವರ ಈಗಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ನಮ್ಮ ಕ್ಲಿನಿಕಲ್ ಟೀಮ್​ನಿಂದ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಸಚಿವ ರಮೇಶ್ ಜಾರಕಿಹೊಳಿಗೆ 15 ದಿನ ಗಡುವು ನೀಡಿ ಪ್ರತಿಭಟನೆ ವಾಪಸ್ ಪಡೆದ ಪ್ರವಾಹ ಸಂತ್ರಸ್ತರು.!

ಈ ಬಗ್ಗೆ ಮಾಹಿತಿ ನೀಡಿರುವ ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರ ಮಗ ಚರಣ, ತಂದೆಯ ಶ್ವಾಸಕೋಶದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ. ಅವರು ಬರೆಯಲು, ಹಾಡಲು ಹೆಚ್ಚು ಪ್ರಯತ್ನಿಸಿದ್ದು. ಅವರು ಸಂಗೀತಕ್ಕಾಗಿ ಟ್ಯಾಪ್ ಮಾಡುತ್ತಿದ್ದಾರೆ, ಇದನ್ನು ನೋಡಿದ ವೈದ್ಯರು ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು. ತೆಲುಗು ಸೇರಿದಂತೆ 16ಕ್ಕೂ ಅಧಿಕ ಭಾಷೆಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎಸ್​ಪಿಬಿ ರವರ ಆರೋಗ್ಯಸ್ಥಿತಿ ಬಗ್ಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ಬೇಗ ಗುಣಮುಖರಾಗಿ ಬರಲಿ ಎಂದು ಆಶಿಸುತ್ತಿದ್ದಾರೆ.
Published by: G Hareeshkumar
First published: August 26, 2020, 11:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories