ದೇಶದಲ್ಲಿ ಮೂಸೇವಾಲನ ಸಾವಿನ (Death) ನೋವು ಮರೆಯಾಗುವ ಮುನ್ನವೇ ಇನ್ನೊಬ್ಬ ಖ್ಯಾತ ಗಾಯನ (Singer) ಸಾವಿನ ಸುದ್ದಿ ಜನರನ್ನು ನೋವಿನಲ್ಲಿ ಮುಳುಗಿಸಿದೆ. ಬಾಲಿವುಡ್ ಕಂಡ ಅಪ್ರತಿಮ ಗಾಯಕ, ಕೆಕೆ ಎಂದು ಖ್ಯಾತರಾಗಿರುವ ಕೃಷ್ಣಕುಮಾರ್ ಕುನ್ನತ್ (Krishnakumar Kunnath) ಕೊನೆಯುಸಿರೆಳೆದಿದ್ದಾರೆ. ಕೇವಲ 53 ವರ್ಷದ ಈ ಗಾಯಕ ಹಾಡು ನಿಲ್ಲಿಸಿದ್ದು, ಅಭಿಮಾನಿಗಳಿಗೆ ತಡೆಯಲಾಗದ ನೋವು ನೀಡಿದ್ದಾರೆ. ಇನ್ನು ಅಗಲಿದ ಗಾಯಕನಿಗೆ ಪ್ರಧಾನಿ ಮೋದಿ (Modi) ಸೇರಿದಂತೆ ಬಾಲಿವುಡ್ ನಟ ನಟಿಯರು ಸಂತಾಪ ಸೂಚಿಸಿದ್ದಾರೆ.
View this post on Instagram
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಕೆಕೆ ಎಂದೇ ಖ್ಯಾತರಾಗಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ಬಹಳ ನೋವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರಿಗೆ ಬಹಳ ಇಷ್ಟವಾಗುತ್ತಿತ್ತು. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದಿದ್ದಾರೆ.
Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.
— Narendra Modi (@narendramodi) May 31, 2022
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸಂತಾಪ ಸೂಚಿಸಿದ್ದು, ಕೃಷ್ಣಕುಮಾರ್ ಕುನ್ನತ್ ಅವರನ್ನು ಜನರು ಕೆಕೆ ಎಂದು ಪ್ರೀತಿಯಿಂದ ಕರೆಯುತ್ತಾರೆ, ಭಾರತೀಯ ಸಂಗೀತ ಉದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರು. ನಿನ್ನೆ ರಾತ್ರಿ ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖವಾಯಿತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Krishnakumar Kunnath, fondly known as KK, was one of the most versatile singers of the Indian music industry. His soulful voice gave us many memorable songs.
Saddened by the news of his untimely demise last night. My heartfelt condolences to his family & fans across the world. pic.twitter.com/7Es5qklcHc
— Rahul Gandhi (@RahulGandhi) June 1, 2022
A voice and talent like no other.. They don't make them like him anymore. Working on the songs he sang was always that much more special. You will always be in our hearts KK and live eternally through your songs. RIP Legend KK #ripkk pic.twitter.com/7UcYnx1WDy
— Emraan Hashmi (@emraanhashmi) June 1, 2022
Extremely sad and shocked to know of the sad demise of KK. What a loss! Om Shanti 🙏🏻
— Akshay Kumar (@akshaykumar) May 31, 2022
ಬಾಲಿವುಡ್ನ ಇನ್ನೂ ಹತ್ತು ಹಲವಾರು ಸೆಲೆಬ್ರಿಟಿಗಳು ನೋವಿನ ವಿಚಾರವನ್ನು ಹಂಚಿಕೊಂಡು, ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ