Singer KK Death: ಸೇಲ್ಸ್ ಕೆಲಸ ಮಾಡ್ತಿದ್ರಂತೆ ಸಿಂಗರ್ ಕೆಕೆ - ಮದುವೆಯಾಗಲು ಇವ್ರು ಪಟ್ಟ ಕಷ್ಟ ಅಷ್ಟಿಷ್ಟಲ್ಲ

Bollywood: ಬಾಲಿವುಡ್​ ಕಂಡ ಅಪ್ರತಿಮ ಗಾಯಕ, ಕೆಕೆ ಎಂದು ಖ್ಯಾತರಾಗಿರುವ ಕೃಷ್ಣಕುಮಾರ್ ಕುನ್ನತ್  ಸಾವು ನಿಜಕ್ಕೂ ಬೇಸರದ ವಿಚಾರ.  ಕೇವಲ 53 ವರ್ಷದ ಈ ಗಾಯಕ ಹಾಡು ನಿಲ್ಲಿಸಿದ್ದು, ಅಭಿಮಾನಿಗಳಿಗೆ ತಡೆಯಲಾಗದ ನೋವು ನೀಡಿದ್ದಾರೆ.

ಗಾಯಕ ಕೆಕೆ

ಗಾಯಕ ಕೆಕೆ

  • Share this:
ಭಾರತದ ಅಪ್ರತಿಮ ಗಾಯಕ ಕೆಕೆ (KK) ಇನ್ನಿಲ್ಲ.  ಈ ಸುದ್ದಿ ನಿಜಕ್ಕೂ ಬಾಲಿವುಡ್​ಗೆ (Bollywood)  ಸಿಡಿಲು ಬಡಿದ ರೀತಿ ಆಗಿದೆ. ಅದ್ಬುತ ಗಾಯಕನನ್ನ (Singer) ಕಳೆದುಕೊಂಡು ಸಂಗೀತ ಕ್ಷೇತ್ರ ಬಡವಾಗಿದೆ ಎಂದರೆ ತಪ್ಪಿಲ್ಲ. ಮೇ 31 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ನೇರ ಪ್ರದರ್ಶನ ನೀಡಿದ ನಂತರ ಕೃಷ್ಣಕುಮಾರ್ ಕುನ್ನತ್  (Krishnakumar Kunnath) ಕೊನೆಯುಸಿರೆಳೆದಿದ್ದಾರೆ. ಈ ಗಾಯಕ ತನ್ನ 53 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ದೊಡ್ಡ ನೋವಿನ ವಿಚಾರ. ಅವರಿಗೆ ಹೃದಯಾಘಾತವಾಗಿತ್ತು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ಇದೆ. ಗಾಯಕ ಈಗ ಅವರ ಪತ್ನಿ ಜ್ಯೋತಿ ಲಕ್ಷ್ಮಿ ಕೃಷ್ಣ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪ್ರೀತಿಯ ಗಂಡನಿಲ್ಲದೇ ಹೆಂಡತಿಯ ಬದುಕು ಕತ್ತಲಾಗಿದೆ.  ಈ ಕೆಕೆ ಪ್ರೇಮಕತೆ ಎಷ್ಟೋ ಜನರಿಗೆ ಗೊತ್ತಿಲ್ಲ.

ಈ ಗಾಯಕನು ತನ್ನ ಬಾಲ್ಯದ ಪ್ರಿಯತಮೆಯನ್ನು 1991 ರಲ್ಲಿ ಮದುವೆಯಾಗಿದ್ದು, ಈ ಕತೆಯನ್ನು ಸ್ವತಃ ಕೆಕೆ ಕಪಿಲ್ ಶರ್ಮಾ ಶೋನಲ್ಲಿ ಹೇಳಿದ್ದಾರೆ.  ಈ ಹಿಂದೆ, ಕೆಕೆ ಹಾಸ್ಯನಟ-ನಿರೂಪಕ ಕಪಿಲ್ ಶರ್ಮಾ ಅವರ ಶೋ 'ದಿ ಕಪಿಲ್ ಶರ್ಮಾ ಶೋ' ನಲ್ಲಿ ಡಾ. ಪಲಾಶ್ ಸೇನ್ ಮತ್ತು ಶಾನ್ ಅವರೊಂದಿಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಸೇಲ್ಸ್ ಕೆಲಸ ಮಾಡಿದ್ದರ ಬಗ್ಗೆ ಬಹಿರಂಗಪಡಿಸಿದ್ದಾರೆ.

ಸೇಲ್ಸ್ ಕೆಲಸ ಮಾಡಿದ್ದರಂತೆ ಕೆಕೆ

ಆ ಸಮಯದಲ್ಲಿ ಕೆಕೆ ನಿರುದ್ಯೋಗಿಯಾಗಿದ್ದುದರಿಂದ ಅವರು ಮದುವೆಯಾಗಲು ಸೇಲ್ಸ್ ಕೆಲಸವನ್ನು ಮಾಡುತ್ತಿದ್ದರಂತೆ. "ನಾನು ಆ ಕೆಲಸವನ್ನು ಮೂರು ತಿಂಗಳು ಮಾಡಿದ್ದೇನೆ ಮತ್ತು ನಂತರ ಅದನ್ನು ಬಿಟ್ಟಿದ್ದೇನೆ" ಎಂದು ಕೆಕೆ ಹೇಳಿದ್ದರು. ಕೆಕೆ ಅವರ ಮೊದಲ ಆಲ್ಬಂ ಪಾಲ್ 1999 ರಲ್ಲಿ ಹೊರಬಂದಿತು. ಎರಡು ದಶಕಗಳ ನಂತರ, ಈ ಹಾಡು ಇನ್ನೂ ದೇಶದ ಸಂಗೀತ ಪ್ರೇಮಿಗಳ ನೆಚ್ಚಿನ ಹಾಡು ಎನ್ನಬಹುದು. ನಂತರ ಜಾಹೀರಾತುಗಳು ಹಾಗೂ ಸಿನಿಮಾಗಳಲ್ಲಿ ಕೆಕೆ ಅವಕಾಶ ಪಡೆದುಕೊಂಡಿದ್ದಾರೆ.

ಕೆಕೆ ಬಾಲಿವುಡ್‌ಗೆ ಪ್ರವೇಶಿಸುವ ಮೊದಲು 3,500 ಜಿಂಗಲ್‌ಗಳನ್ನು ಹಾಡಿದ್ದಾರೆ. ಜಾಹೀರಾತುಗಳಲ್ಲಿ ಜಿಂಗಲ್ಸ್‌ ಹಾಡುವ ಮೂಲಕ ಕೆಕೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಎ.ಆರ್. ರೆಹಮಾನ್ ಅವರ ಜೊತೆ ಕೆಲಸ ಮಾಡಿದ್ದಾರೆ. 1999 ರಲ್ಲಿ, ಅವರು ತಮ್ಮ ಮೊದಲ ಆಲ್ಬಂ ಪಾಲ್ ಮೂಲಕ ಜನಪ್ರಿಯರಾಗಿದ್ದಾರೆ. ಹಮ್ ದಿಲ್ ದೇ ಚುಕೆ ಸನಮ್ (1999), ತಮಿಳಿನ "ಅಪಾಡಿ ಪೋಡು", ದೇವದಾಸ್ ಚಿತ್ರದ (2002)"ಡೋಲಾ ರೇ ಡೋಲಾ", "ಕ್ಯಾ ಮುಝೆ ಪ್ಯಾರ್ ಹೈ" ವೋ ಲಮ್ಹೆ (2006), "ಆಂಖೋನ್ ಮೇ ತೇರಿ ಹೀಗೆ ಹತ್ತು ಹಲವಾರು ಪ್ರಸಿದ್ದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಅದ್ಬುತ ಹಾಡುಗಳ ಜೊತೆ ಅವರು ಹಲವಾರು ಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದು, ಫಿಲ್ಮ್ಫೇರ್ ಸೌತ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.

ಇದನ್ನೂ ಓದಿ: ಡಾ ರಾಜ್ ಗೆ ಇಷ್ಟವಾಗಿದ್ದ ಚಿತ್ರವನ್ನು ಆಮಿರ್ ಖಾನ್ ಹಾಳು ಮಾಡಿದ್ರಾ? ಇದು ಅಪ್ಪು ಹೇಳಿದ್ದಂತೆ

ಅದ್ಭುತ ಹಾಡುಗಳ ಸರದಾರ

22 ಜನವರಿ 2008 ರಂದು, ಎಂಟು ವರ್ಷಗಳ ನಂತರ KK ತನ್ನ ಎರಡನೇ ಆಲ್ಬಂ ಹಮ್ಸಾಫರ್ ಅನ್ನು ಬಿಡುಗಡೆ ಮಾಡಿದ್ದರು. "ಆಸ್ಮಾನ್ ಕೆ", "ದೇಖೋ ನಾ", "ಯೇ ಕಹಾನ್ ಮಿಲ್ ಗಯೇ ಹಮ್" ಮತ್ತು "ರೇನ್ ಭಾಯ್ ಕರಿ" ಈ ಆಲ್ಬಂನ ಪ್ರಸಿದ್ಧ ಹಾಡುಗಳಾಗಿವೆ. 2000 ರ ದಶಕದ ಆರಂಭದಿಂದ ಅವರು ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಆರಂಭಿಸಿದರು.

ತಮ್ಮ ಜನಪ್ರಿಯ ಹಾಡುಗಳಿಂದ ಬಾಲಿವುಡ್ ಚಲನಚಿತ್ರಗಳನ್ನು ಜನಪ್ರಿಯತೆ ಗಳಿಸಿದ್ದರು. ದೇಶದಲ್ಲಿ ಮೂಸೇವಾಲನ ಸಾವಿನ ನೋವು ಮರೆಯಾಗುವ ಮುನ್ನವೇ ಇನ್ನೊಬ್ಬ ಖ್ಯಾತ ಗಾಯನ ಸಾವಿನ ಸುದ್ದಿ ಜನರನ್ನು ನೋವಿನಲ್ಲಿ ಮುಳುಗಿಸಿದೆ.

ಇದನ್ನೂ ಓದಿ: ಥಿಯೇಟರ್​ಗೆ ಬರ್ತಿದ್ದಾರೆ ಗಜಾನನ ಆ್ಯಂಡ್​ ಗ್ಯಾಂಗ್​, ಹೆವ್ವಿ ಕ್ವಾಟ್ಲೆ ಕೊಡ್ತಾರೆ ಅಂದ ಅದಿತಿ

ಬಾಲಿವುಡ್​ ಕಂಡ ಅಪ್ರತಿಮ ಗಾಯಕ, ಕೆಕೆ ಎಂದು ಖ್ಯಾತರಾಗಿರುವ ಕೃಷ್ಣಕುಮಾರ್ ಕುನ್ನತ್  ಸಾವು ನಿಜಕ್ಕೂ ಬೇಸರದ ವಿಚಾರ.  ಕೇವಲ 53 ವರ್ಷದ ಈ ಗಾಯಕ ಹಾಡು ನಿಲ್ಲಿಸಿದ್ದು, ಅಭಿಮಾನಿಗಳಿಗೆ ತಡೆಯಲಾಗದ ನೋವು ನೀಡಿದ್ದಾರೆ. ಇನ್ನು ಅಗಲಿದ ಗಾಯಕನಿಗೆ ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್​ ನಟ ನಟಿಯರು ಸಂತಾಪ ಸೂಚಿಸಿದ್ದಾರೆ.
Published by:Sandhya M
First published: