Singer KK Death: ಸಂಗೀತ ಕಾರ್ಯಕ್ರಮ ನೀಡುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಹೆಸರಾಂತ ಗಾಯಕ ಕೆಕೆ; ಅವರ ಕೊನೆ ವಿಡಿಯೋ ನೋಡಿ

Krishnakumar Kunnath Death: ಶಾಲೆ ಮತ್ತು ಕಾಲೇಜುಗಳ ವಿದಾಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 53 ವರ್ಷದ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಹಾಡುಗಳು ಪ್ರಸಿದ್ಧಿ ಹೊಂದಿದ್ದವು.

ಸಿಂಗರ್ ಕೆಕೆ

ಸಿಂಗರ್ ಕೆಕೆ

  • Share this:
    ಕೋಲ್ಕತ್ತಾ: ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು (Singer KK Death) 53 ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾದರು. 53 ವರ್ಷದ ಗಾಯಕ ಕೋಲ್ಕತ್ತಾದ (Kolkata) ನಜ್ರುಲ್ ಮಂಚಾ ಆಡಿಟೋರಿಯಂನಲ್ಲಿರುವ ಸಂಗೀತ ಕಚೇರಿಯಲ್ಲಿ ಅವರು ತಂಗಿದ್ದ ಹೋಟೆಲ್‌ನ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾರೆ ಎಂದು ವರದಿಯಾಗಿತ್ತು. ಆದರೆ ಗಾಯಕ ಮೃತಪಟ್ಟಿರುವುದಾಗಿ ( Krishnakumar Kunnath Death) ಸಿಎಂಆರ್‌ಐ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅವರು 'ಯಾರೋನ್' ನಂತಹ ಹಾಡುಗಳಿಗೆ ಹೆಸರುವಾಸಿಯಾಗಿದ್ದರು, ಇದು 1990 ರ ದಶಕದ ಉತ್ತರಾರ್ಧದಲ್ಲಿ ಅತ್ಯಂತ ದೊಡ್ಡ ಹಿಟ್ ಆಗಿ ಹೊರಹೊಮ್ಮಿತ್ತು. ಶಾಲೆ ಮತ್ತು ಕಾಲೇಜುಗಳ ವಿದಾಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಹಾಡುಗಳು ಪ್ರಸಿದ್ಧಿ ಹೊಂದಿದ್ದವು.

    ಅವರ 1999 ರ ಮೊದಲ ಆಲ್ಬಂ ‘ಪಾಲ್’ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತ್ತು. 2000 ರ ದಶಕದ ಆರಂಭದಿಂದ ಅವರು ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಆರಂಭಿಸಿದರು. ತಮ್ಮ ಜನಪ್ರಿಯ ಹಾಡುಗಳಿಂದ ಬಾಲಿವುಡ್ ಚಲನಚಿತ್ರಗಳನ್ನು ಜನಪ್ರಿಯತೆ ಗಳಿಸಿದ್ದರು. ಅವರ ಕೊನೆಯ ಪ್ರದರ್ಶನದ ವಿಡಿಯೋ ಇಲ್ಲಿದೆ







    ಎಲೆಕ್ಟ್ರಿಕ್ ಲೈವ್​ಗಳಿಗೆ ಹೆಸರುವಾಸಿಯಾಗಿದ್ದ ಗಾಯಕ
    ಅವರು ದೆಹಲಿಯಲ್ಲಿ ಜನಿಸಿದರು ಅವರು ಎಲೆಕ್ಟ್ರಿಕ್ ಲೈವ್ ಶೋಗಳಿಗೆ ಹೆಸರುವಾಸಿಯಾಗಿದ್ದರು. ಅವರ Instagram ಪುಟದಲ್ಲಿ ಎಂಟು ಗಂಟೆಗಳ ಹಿಂದೆ ಕೋಲ್ಕತ್ತಾದಲ್ಲಿ ಅವರ ಸಂಗೀತ ಕಚೇರಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಗಿತ್ತು.

    ಕನ್ನಡದಲ್ಲೂ ಹಾಡಿದ್ದ ಕೆಕೆ!
    ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.








    View this post on Instagram






    A post shared by KK (@kk_live_now)






    ಇದನ್ನೂ ಓದಿ: Singer KK Death: ಸಂಗೀತ ಕಾರ್ಯಕ್ರಮ ನೀಡುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಹೆಸರಾಂತ ಗಾಯಕ ಕೆಕೆ

    ಅವರ ನಿಧನಕ್ಕೆ ಗಾಯಕಿ ಹರ್ಷದೀಪ್ ಕೌರ್ ಆಘಾತ ವ್ಯಕ್ತಪಡಿಸಿದ್ದಾರೆ. “ನಮ್ಮ ಪ್ರೀತಿಯ #KK ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದು ನಿಜವಾಗಿಯೂ ನಿಜವಾಗಲು ಸಾಧ್ಯವಿಲ್ಲ. ಪ್ರೀತಿಯ ಧ್ವನಿ ಹೋಯಿತು. ಈ ವಿಷಯವೇ ಹೃದಯ ವಿದ್ರಾವಕವಾಗಿದೆ.ಎಂದು  ಅವರು ಆಘಾತ ವ್ಯಕ್ತಪಡಿಸಿದ್ದಾರೆ.

    ಗಣ್ಯರಿಂದ ಸಂತಾಪ
    ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್ “ಕೆಕೆ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖ ಮತ್ತು ಆಘಾತವಾಗಿದೆ. ಎಂತಹ ನಷ್ಟ! ಓಂ ಶಾಂತಿ”ಎಂದು ಕಂಬನಿ ಮಿಡಿದಿದ್ದಾರೆ.

    ಸಚಿವ ಅರುಪ್ ಬಿಸ್ವಾಸ್ ಅವರು ಕೆಕೆ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ, “ಗಾಯಕ ಅನುಪಮ್ ರಾಯ್ ಅವರು ನನಗೆ ಕರೆ ಮಾಡಿ ಆಸ್ಪತ್ರೆಯಿಂದ ಕೆಟ್ಟ ವಿಷಯವೊಂದು ತಲುಪಿದೆ ಎಂದು ಹೇಳಿದರು. ನಂತರ ನಾನು ಆಸ್ಪತ್ರೆಯನ್ನು ಸಂಪರ್ಕಿಸಿದೆ. ಕೆಕೆ ಅವರ ಮೃತಪಟ್ಟಿದ್ದಾರೆ ಎಂದು ಗಾಯಕ ಅನುಪಮ್ ರಾಯ್ ನನಗೆ ಹೇಳಿದರು. ನಂತರ ನಾನು ಆಸ್ಪತ್ರೆಗೆ ಧಾವಿಸಿದೆ. ” ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: Sidhu Moose Wala: ನಡು ರಸ್ತೆಯಲ್ಲೇ ಕೊಲೆಯಾದ ಖ್ಯಾತ ಸಿಂಗರ್​! ಗನ್​ ಸಂಸ್ಕೃತಿ ಉತ್ತೇಜಿಸುತ್ತಿದ್ದ ಸಿಧು ಗನ್‌ ಏಟಿಗೆ ಬಲಿಯಾಗಿದ್ದು ಹೇಗೆ?

    ಗಾಯಕ ಅಮಿತ್ ಕುಮಾರ್ ಅವರ ಪತ್ನಿ ರೀಮಾ ಗಂಗೂಲಿ ಅವರು ಈ ಸುದ್ದಿಯನ್ನು ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ತುಂಬಾ ಕೆಟ್ಟ ಸುದ್ದಿ kk ಇನ್ನಿಲ್ಲ... ಓಂ ಶಾಂತಿ" ಎಂದು ಅವರು ಬರೆದುಕೊಂಡಿದ್ದಾರೆ.
    Published by:guruganesh bhat
    First published: