ಸಂದರ್ಶನ ಮಾಡಲು ಬಂದವರಿಗೆ ಲೈಂಗಿಕ ಕಿರುಕುಳ ನೀಡಿದ ಖ್ಯಾತ ಗಾಯಕ..!

Anitha E | news18
Updated:October 9, 2018, 2:30 PM IST
ಸಂದರ್ಶನ ಮಾಡಲು ಬಂದವರಿಗೆ ಲೈಂಗಿಕ ಕಿರುಕುಳ ನೀಡಿದ ಖ್ಯಾತ ಗಾಯಕ..!
  • Advertorial
  • Last Updated: October 9, 2018, 2:30 PM IST
  • Share this:
ನ್ಯೂಸ್​ 18 ಕನ್ನಡ 

ಬಿಟೌನ್‍ನಲ್ಲಿ ಪಾತ್ರಕ್ಕಾಗಿ ಪಲ್ಲಂಗದ (ಕಾಸ್ಟಿಂಗ್ ಕೌಚ್) ಅಬ್ಬರ ಜೋರಾಗಿದೆ. #MeToo  ಟ್ರೆಂಡಿಂಗ್ ಕೂಡ ಶುರುವಾಗಿದೆ. ಈಗಾಗಲೇ ದಕ್ಷಿಣ ಭಾರರದ ನಟಿಯರು ಇದರ ಬಗ್ಗೆ ಧನಿಯೆತ್ತಿದ್ದು ಸುದ್ದಿಯಾಗಿತ್ತು. ಆದರೆ ತನುಶ್ರೀ ದತ್ತ, ನಾನಾ ಪಾಟೇಕರ್ ವಿರುದ್ಧ ತಿರುಗಿ ಬಿದ್ದ ನಂತರ ಒಬ್ಬೊಬ್ಬರೇ ಬಾಲಿವುಡ್ ನಟಿಯರೂ ಕಿರುಕುಳ ಅನುಭವಿಸಿದ ಸಹ ಕಲಾವಿದರ ಪರ ಬೆಂಬಲವನ್ನು ಹೆಚ್ಚಿಸುತ್ತಲೇ ಇದ್ದಾರೆ. ಆದರೆ ಈಗ ಈ ವಿವಾದ ಒಬ್ಬ ಖ್ಯಾತ ಗಾಯಕರನ್ನೂ ಕಾಡುತ್ತಿದೆ.

ಹೌದು. ಕನ್ನಡದಲ್ಲಿ ಸೂಪರ್​ ಹಿಟ್​ ಹಾಡುಗಳನ್ನು ಹಾಡಿರುವ ಕೈಲಾಶ್ ಖೇರ್ ಈಗ #MeToo ಪ್ರತಿಭಟನೆಗೆ ಆಹಾರವಾಗಿದ್ದಾರೆ. ಒಮ್ಮೆ ಸಂದರ್ಶನಕ್ಕೆ ಬಂದಿದ್ದ ವಾಹಿನಿಯ ಸಂದರ್ಶಕಿಗೇ ಕಿರುಕಳ ನೀಡಿದ್ದಾರಂತೆ ಕೈಲಾಶ್ ಖೇರ್. ಈ ಆರೋಪವನ್ನು ವಾಹಿನಿಯ ನಿರೂಪಕಿ ಮಾಡಿರೋದು ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಕನ್ನಡತಿ ಶಿಲ್ಪಾ ಶೆಟ್ಟಿ ಕೂಡ ಪಾತ್ರಕ್ಕಾಗಿ ಪಲ್ಲಂಗ ವಿರುದ್ಧ ಧನಿ ಎತ್ತಿದವರ ಪರ ನಿಂತಿದ್ದಾರೆ. ಎಷ್ಟೋ ನಟಿಯರು ಇಂತಹ ಸಮಸ್ಯೆಗಳು ಬಂದಾಗ ಎದುರಿಸಿ ನಿಲ್ಲುವ ಛಾತಿ ತೋರಿಸಿರಲಿಲ್ಲ. ಈಗಲಾದರೂ ನಟಿಯರು ತಮಗಾದ ಅನ್ಯಾಯದ ವಿರುದ್ಧ ಹೇಳಿಕೊಳ್ಳೋಕೆ ಹೊರಟಿರೋದಕ್ಕೆ ನನ್ನ ಬೆಂಬಲ ಇದೆ ಎಂದಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಕನ್ನಡದ ನಟಿ ಶೃತಿ ಹರಿಹರನ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು ದೊಡ್ಡ ವಿವಾದ ಹುಟ್ಟುಹಾಕಿತ್ತು. ನಂತರ ನಟಿ ಶ್ರೀ ರೆಡ್ಡಿ ನಿರಂತರವಾಗಿ ಹಲವು ಟಾಲಿವುಡ್, ಕಾಲಿವುಡ್ ನಟರು ತಂತ್ರ ಜ್ಞರನ್ನು ಬೆತ್ತಲಾಗಿಸೋಕೆ ತಾವೇ ಬೆತ್ತಲಾಗಿ ನಿಂತು ಪ್ರತಿಭಟಿಸಿದ್ದರು.

ಒಟ್ಟಾರೆ ಹೆಣ್ಣಿಗೆ ಚಿತ್ರರಂಗದಲ್ಲಿ ಆಗುತ್ತಿರುವ ಶೋಷಣೆಗಳ ಪರ ನಿರಂತವಾಗಿ ಧನಿ ಏಳುತ್ತಲೇ ಇದ್ದರೂ ಅದ್ಯಾಕೋ ಸಂಘಟಿತವಾಗದೇ ಪ್ರತಿಭಟನೆಗಳು ಠುಸ್ ಆಗುತ್ತಿವೆ. ಈ ಬಾರಿಯ ಪ್ರತಿಭಟನೆ ಕೂಡ ಒಗ್ಗಟ್ಟಾಗದೇ ಕಳೆದು ಹೋಗುವ ಸಾಧ್ಯತೆಗಳೇ ಹೆಚ್ಚಿವೆ. ಎಲ್ಲರೂ ಸಂಘಟಿತರಾಗಿ ನ್ಯಾಯಕ್ಕಾಗಿ ಹೋರಾಡಿದ್ರೆ ಕಾಮುಕರು ಕಂಗಾಲಾಗುವುದರಲ್ಲಿ ಅನುಮಾನವೇ ಇಲ್ಲ.

  

 

 
First published:October 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ