ಜನಪ್ರಿಯ ಬಾಲಿವುಡ್ (Bollywood) ಹಾಡುಗಾರ (Singer) ಜುಬಿನ್ ನೌಟಿಯಲ್ ಡಿಸೆಂಬರ್ 1 ರ ಬೆಳಗ್ಗೆ ಮುಂಬೈಯಲ್ಲಿರುವ ಕಟ್ಟಡದ ಮೆಟ್ಟಿಲುಗಳಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎತ್ತರದ ಕಟ್ಟಡದ ಮೆಟ್ಟಿಲುಗಳಿಂದ ಕೆಳಕ್ಕೆ ಬಿದ್ದ ಪರಿಣಾಮವಾಗಿ ಜುಬಿನ್ ತೀವ್ರವಾಗಿ ಗಾಯಗೊಂಡಿದ್ದು ತುರ್ತಾಗಿ ಅವರನ್ನು ಮುಂಬೈ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ ಎಂಬುದು ವರದಿಯಾಗಿದೆ. ಮೆಟ್ಟಿಲುಗಳಿಂದ ಬಿದ್ದ ಆಘಾತದಿಂದಾಗಿ ಜುಬಿನ್ ಮೊಣಕೈ ಮುರಿದಿದ್ದು, ಪಕ್ಕೆಲುಬು ಬಿರುಕುಬಿಟ್ಟಿದೆ. ತಲೆಗೆ ಗಂಭೀರ ಗಾಯವಾಗಿದೆ ಎಂಬುದು ತಿಳಿದುಬಂದಿದೆ.
ಜುಬಿನ್ ಬಲಗೈಗೆ ಹೆಚ್ಚಿನ ಪೆಟ್ಟು ಬಿದ್ದಿರುವುದರಿಂದ ಜುಬಿನ್ ಬಲಗೈಗೆ ಶಸ್ತ್ರಕ್ರಿಯೆ ಮಾಡಬೇಕಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಗಾಯಕನ ಸ್ಥಿತಿ ಇದೀಗ ಹೇಗಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ದೊರೆಯಬೇಕಾಗಿದೆ. ಮೆಟ್ಟಿಲುಗಳಿಂದ ಬಿದ್ದ ಪರಿಣಾಮವಾಗಿ ಜುಬಿನ್ ತಲೆಗೆ ತೀವ್ರವಾಗಿ ಏಟಾಗಿದೆ ಎಂಬುದು ವರದಿಯಾಗಿದೆ.
ಜುಬಿನ್ ಪರಿಸ್ಥಿತಿ ಕುರಿತು ಮಾಹಿತಿ ಇಲ್ಲ
ಜುಬಿನ್ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಜುಬಿನ್ ಸ್ನೇಹಿತರಾಗಲಿ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಆಘಾತಕಾರಿ ಸುದ್ದಿಯು ಬಾಲಿವುಡ್ ಅಂಗಳದಲ್ಲಿಯೇ ತಲ್ಲಣವನ್ನುಂಟು ಮಾಡಿದ್ದು ಜುಬಿನ್ ಅಭಿಮಾನಿಗಳು ಗಾಯಕ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದು ಸಾಮಾಜಿಕ ತಾಣದಲ್ಲಿ ಸಂದೇಶಗಳನ್ನು ಕಳುಹಿಸಿದ್ದಾರೆ.
ಅಭಿಮಾನಿಗಳ ಹಾರೈಕೆ
ಜುಬಿನ್ ಶೀಘ್ರವೇ ಗುಣಮುಖರಾಗಿ ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದು, ಶೀಘ್ರ ಗುಣಮುಖರಾಗಿ ಎಂದು ನಾವು ಹಾರೈಸುತ್ತೇವೆ. ಇನ್ನಷ್ಟು ಆರೋಗ್ಯವಂತರಾಗಿ ಮರಳಿ ಎಂದು ಇನ್ನೊಬ್ಬ ಅಭಿಮಾನಿ ಹಾರೈಸಿದ್ದಾರೆ.
ಇನ್ನಷ್ಟು ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರು ಜುಬಿನ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಉದಯೋನ್ಮುಖ ಹಾಡುಗಾರನಾಗಿ ಜುಬಿನ್
ಜುಬಿನ್ ಉದಯೋನ್ಮುಖ ಹಾಡುಗಾರನಾಗಿ ಬಾಲಿವುಡ್ನಲ್ಲಿ ಹೆಸರುವಾಸಿಯಾಗಿದ್ದು ಅನೇಕ ಹಿಟ್ ಹಾಡುಗಳನ್ನು ಕಲಾಕ್ಷೇತ್ರಕ್ಕೆ ಅರ್ಪಿಸಿದ್ದಾರೆ. ತಮ್ಮ ಸುಶ್ರಾವ್ಯ ಕಂಠದಿಂದ ಕಲಾರಸಿಕರ ಮನಗೆದ್ದ ಜುಬಿನ್ ಬಾಲಿವುಡ್ನಲ್ಲಿ ಹೆಸರುವಾಸಿಯಾಗಿದ್ದಾರೆ.
33 ರ ಹರೆಯದ ಜುಬಿನ್ 2014 ರಲ್ಲಿ ತಮ್ಮ ವೃತ್ತಿರಂಗವನ್ನು ಆರಂಭಿಸಿದ್ದಾರೆ. ಸಂಗೀತ ಆಲ್ಬಮ್ಗಳಲ್ಲಿ ಹಾಡುವ ಮೂಲಕ ತನ್ನ ಇಂಪಾದ ಕಂಠದಿಂದ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ.
ವಿಕ್ಕಿ ಕೌಶಲ್ ಅಭಿನಯದ ಗೋವಿಂದ್ ನಾಮ್ ಮೇರಾ ಚಿತ್ರದಲ್ಲಿ ಬನಾ ಶರಾಬಿ ಹಾಡನ್ನು ಜುಬಿನ್ ಹಾಡಿದ್ದು, ಕಾಜಲ್ ಬಣ್ಣ ಹಚ್ಚಿರುವ ಚಿತ್ರವಾದ ಸಲಾಮ್ ವೆಂಕಿಯಲ್ಲಿ ಯು 'ತೆರೆ ಹುವೇ ಹಮ್' ಹಾಡನ್ನೂ ಸುಶ್ರಾವ್ಯವಾಗಿ ಹಾಡಿದ್ದಾರೆ.
ದುಬೈನಲ್ಲಿ ಲೈವ್ ಕನ್ಸರ್ಟ್ ನೀಡಿದ್ದ ಹಾಡುಗಾರ
ಇತ್ತೀಚೆಗೆ ದುಬೈನಲ್ಲಿ ಲೈವ್ ಕನ್ಸರ್ಟ್ ಅನ್ನು ಜುಬಿನ್ ನೀಡಿದ್ದರು. ಈ ಸಮಯದಲ್ಲಿ ದುಬೈನಲ್ಲಿರುವ ಸಂಗೀತ ಅಭಿಮಾನಿಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದ ಜುಬಿನ್ ಇಲ್ಲಿನ ಕಲಾರಸಿಕರಿಗಾಗಿ ಹಾಡು ಹಾಡುವುದು ನನ್ನ ಮೆಚ್ಚಿನ ವಿಷಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Ayra Yash: ಮುದ್ದು ಗೊಂಬೆಯಂತೆ ಮಿಂಚಿದ ಐರಾ! ಫ್ಯಾಮಿಲಿ ಜೊತೆ ಬರ್ತ್ಡೇ ಸೆಲೆಬ್ರೇಷನ್ ಹೀಗಿತ್ತು
ದುಬೈ ನೆಲದಲ್ಲಿ ಪ್ರದರ್ಶನ ನೀಡುವುದು ತಮಗೆ ಹೆಚ್ಚು ಉತ್ಸಾಹಕರ ವಿಷಯವಾಗಿದೆ ಎಂದು ತಿಳಿಸಿದ್ದ ಹಾಡುಗಾರ ದುಬೈನಲ್ಲಿರುವ ಅಭಿಮಾನಿಗಳನ್ನು, ಪ್ರೇಕ್ಷಕರನ್ನು ರಂಜಿಸಲು ಸಾಧ್ಯವಾಗಿರುವುದಕ್ಕೆ ನನಗೆ ಖುಷಿ ಇದೆ ಎಂದು ಮನಬಿಚ್ಚಿ ತಿಳಿಸಿದ್ದರು.
ಜುಬಿನ್ ಹಾಡಿರುವ ಹಿಟ್ ಹಾಡುಗಳು
ಜುಬಿನ್ ಲುಟ್ ಗಯೆ ಹಾಗೂ ಹಮ್ನಾವಾ ಮೇರೇ ಮೊದಲಾದ ಖ್ಯಾತ ಹಾಡುಗಳಿಗೆ ಪ್ರಸಿದ್ಧರಾಗಿದ್ದಾರೆ. ಸಾಮ್ನೆ ಆಯೆ, ಮನಿಕೆ ಮೊದಲಾದ ಸೂಪರ್ಹಿಟ್ ಹಾಡುಗಳನ್ನು ನೀಡಿದ ಗಾಯಕರಾಗಿದ್ದಾರೆ.
ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಡುಗಾರನಾಗಿ ಖ್ಯಾತಿ ಪಡೆದಿದ್ದಾರೆ. ಜುಬಿನ್ ಕೆಲವೊಂದು ಖ್ಯಾತಿ ಪಡೆದ ಹಾಡುಗಳಾದ ರಾತೇನ್ ಲಂಬಿಯಾನ್, ತುಜೆ ಕಿತನೆ ಚಾಹ್ನೆ ಲಗೇ ಹಮ್, ತುಮ್ ಹಿ ಆನಾ, ಬೆವಫಾ ತೆರಾ ಮಾಸೂಮ್ ಚೆಹರಾಗಳಿಗೆ ಸುಶ್ರಾವ್ಯ ಕಂಠದ ಮೂಲಕ ಕಲಾರಸಿಕರನ್ನು ರಂಜಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ