• Home
  • »
  • News
  • »
  • entertainment
  • »
  • Chinmayi Sripada: ಬಾಡಿಗೆ ತಾಯ್ತನದ ಗಾಸಿಪ್‌ಗೆ ತೆರೆ, ಗರ್ಭಿಣಿಯಾದಾಗಿನ ಏಕೈಕ ಫೋಟೋ ಹಂಚಿಕೊಂಡ ಚಿನ್ಮಯಿ‌ ಶ್ರೀಪಾದ್

Chinmayi Sripada: ಬಾಡಿಗೆ ತಾಯ್ತನದ ಗಾಸಿಪ್‌ಗೆ ತೆರೆ, ಗರ್ಭಿಣಿಯಾದಾಗಿನ ಏಕೈಕ ಫೋಟೋ ಹಂಚಿಕೊಂಡ ಚಿನ್ಮಯಿ‌ ಶ್ರೀಪಾದ್

ಗಾಯಕಿ ಚಿನ್ಮಯಿ ಸಿರಿಪಾದ

ಗಾಯಕಿ ಚಿನ್ಮಯಿ ಸಿರಿಪಾದ

ಒಮ್ಮೆಲೆ ಅವಳಿ ಮಕ್ಕಳಾಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಅವರಿಗೆ ಮಗುವಾಗಿದ್ದು ಬಾಡಿಗೆ ತಾಯಿಯಿಂದ ಎಂದು ಹಲವರು ಕಾಮೆಂಟ್‌ ಮಾಡಿದ್ದರು.

  • News18 Kannada
  • Last Updated :
  • New Delhi, India
  • Share this:

ಪ್ರಸಿದ್ಧ ಗಾಯಕಿ ಚಿನ್ಮಯಿ ಶ್ರೀಪಾದ್‌ (Singer Chinmayi Sripada)  ಇದೇ ಮೊದಲ ಬಾರಿಗೆ ತಾನು ಗರ್ಭಿಣಿಯಾದಾಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಗರ್ಭಿಣಿಯಾದಾಗ (Pregnant) ನಾನು ತೆಗೆದುಕೊಂಡ ಏಕೈಕ ಸೆಲ್ಫಿ (Selfie) ಎಂದು ಅವರು ಬರೆದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ನಟ-ರಾಹುಲ್ ರವೀಂದ್ರನ್ ಹಾಗೂ ಚಿನ್ಮಯಿ ಶ್ರೀಪಾದ್‌ ಅವಳಿ ಮಕ್ಕಳನ್ನು ಸ್ವಾಗತಿಸಿದ್ದರು. ದೃಪ್ತಾ ಮತ್ತು ಶರ್ವಾಸ್‌ ಅನ್ನೋ ಅವಳಿ ಜವಳಿ (Twins) ಮಕ್ಕಳಿಗೆ ತಾಯಿಯಾದ ಚಿನ್ಮಯಿ ಗರ್ಭಿಣಿಯಾದಾಗಿನ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ (Share) ಮಾಡಿರಲಿಲ್ಲ. ಒಮ್ಮೆಲೆ ಅವಳಿ ಮಕ್ಕಳಾಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಅವರಿಗೆ ಮಗುವಾಗಿದ್ದು ಬಾಡಿಗೆ ತಾಯಿಯಿಂದ ಎಂದು ಹಲವರು ಕಾಮೆಂಟ್‌ ಮಾಡಿದ್ದರು.


ಭಯಗೊಂಡಿದ್ದರಿಂದ ಫೋಟೋ ತೆಗೆಸಿಕೊಂಡಿಲ್ಲ


ತಾನು ಬಾಡಿಗೆ ತಾಯಿಯಿಂದ ಮಗುವನ್ನು ಪಡೆದಿದ್ದೇನೆ ಎಂದು ಜನ ಅಂದುಕೊಂಡರೆ ಅದಕ್ಕೆ ನಾನೇನು ಮಾಡಲಾಗುವುದಿಲ್ಲ. ಆದರೆ ನಾನು ಗರ್ಭಿಣಿಯಾದಾಗಿನಿಂದಲೂ ಪೋಟೋ ತೆಗೆದುಕೊಳ್ಳುವುದನ್ನು ಅವಾಯ್ಡ್‌ ಮಾಡುತ್ತಿದ್ದೆ. ನಾನು ಸ್ವಲ್ಪ ಭಯಭೀತಳಾಗಿದ್ದೆ. ನನ್ನ ಪರಿಚಯದವರು ಹಾಗೂ ಸ್ನೇಹಿತರಿಗೂ ಪೋಟೋ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದೆ. ಹೀಗಾಗಿ ಎಲ್ಲರೂ ಅದನ್ನು ಗೌರವಿಸಿದ್ದರು ಎಂಬುದಾಗಿ ಇನ್‌ ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ವಿಡಿಯೋ ದಲ್ಲಿ ಹೇಳಿಕೊಂಡಿದ್ದಾರೆ.


ಇದೀಗ ತಾವು 32 ವಾರಗಳ ಗರ್ಭಿಣಿಯಾದಾಗ ತೆಗೆದುಕೊಂಡ ಏಕೈಕ ಸೆಲ್ಫಿ ಯನ್ನು ಹಂಚಿಕೊಂಡಿರುವ ಅವರು, ತಾವು ಪೋಟೋಗಳಿಂದ ದೂರವಿದ್ದುದರ ಬಗ್ಗೆ ತಮಗೆ ಪಶ್ಚಾತ್ತಾಪವಿದೆ ಎಂದಿದ್ದಾರೆ. ನವೆಂಬರ್ 2020 ರಲ್ಲಿ ತನ್ನ ಗರ್ಭಪಾತದ ನಂತರ ಭಯಗೊಂಡಿದ್ದೆ ಎಂದು ಚಿನ್ಮಯಿ ಒಪ್ಪಿಕೊಂಡಿದ್ದಾರೆ.


“ಸರೋಗಸಿಯಿಂದ ಮಗುವಾಗಿದೆ ಅಂದುಕೊಳ್ಳುವುದು ಅವರಿಗೆ ಬಿಟ್ಟದ್ದು!”


ಗರ್ಭಿಯಾಗಿದ್ದಾಗಲೂ ನಾನು ರೆಕಾರ್ಡಿಂಗ್‌ ಮಾಡುತ್ತಿದ್ದೆ. ಪತ್ರಿಕಾ ಗೋಷ್ಠಿಯನ್ನೂ ನಡೆಸಿದ್ದೇನೆ. ಆದರೆ ಜನರು ಹಾಗೂ ಪತ್ರಕರ್ತರು ನನ್ನ ಗೌಪ್ಯತೆಯ ಮನವಿಯನ್ನು ಗೌರವಿಸಿದ್ದರು ಎಂಬುದಾಗಿ ಚಿನ್ಮಯಿ ಹೇಳಿಕೊಂಡಿದ್ದಾರೆ. ಅಲ್ಲದೇ, "ಸರೊಗಸಿ, ಬಾಡಿಗೆ ತಾಯ್ತನದ ಬಗ್ಗೆ ಉತ್ತರಿಸಿರುವ ಚಿನ್ಮಯಿ, ಯಾರಾದರೂ ಬಾಡಿಗೆ ತಾಯ್ತನ ಅಥವಾ IUI (ಗರ್ಭಾಶಯದ ಗರ್ಭಾಶಯದ ಗರ್ಭಧಾರಣೆ) ಅಥವಾ IVF (ಇನ್ ವಿಟ್ರೋ ಫರ್ಟಿಲೈಸೇಶನ್) ಅಥವಾ ಸಾಮಾನ್ಯವಾಗಿ ಮಗುವನ್ನು ಹೊಂದಿದ್ದರೂ ಆ ತಾಯಿಯು ತಾಯಿಯೇ ಆಗಿರುತ್ತಾಳೆ. ಹಾಗಾಗಿ ನಾನು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದಿದ್ದೇನೆ ಎಂದು ಜನರು ಭಾವಿಸಿದರೆ ನಾನು ಹೆದರುವುದಿಲ್ಲ, ಅವರು ಬಯಸಿದ್ದನ್ನು ಊಹಿಸಿಕೊಳ್ಳುವುದು ಅವರಿಗೆ ಬಿಟ್ಟದ್ದು. ನನ್ನ ಬಗ್ಗೆ ಅವರ ಅಭಿಪ್ರಾಯ ನನ್ನ ಸಮಸ್ಯೆಯಲ್ಲ ಎಂದಿದ್ದಾರೆ.
ಗರ್ಭಪಾತದ ಬಳಿಕ ತೆಗೆದುಕೊಂಡ ಫೋಟೋ!


“Be Kind, not speculate” ಎಂಬ ಬರಹ ಹೊಂದಿರುವ ಪೋಟೋವೊಂದನ್ನು ಇನ್‌ ಸ್ಟಾಗ್ರಾಂ ನಲ್ಲಿ ಚಿನ್ಮಯಿ ಪೋಸ್ಟ್‌ ಮಾಡಿದ್ದರು. ಹಳದಿ ಹೂವಿನ ಪ್ರಿಂಟೆಂಟ್‌ ಸೀರೆಯಲ್ಲಿರುವ ಈ ಫೋಟೋ 2020 ನವೆಂಬರ್‌ ನಲ್ಲಿ ತಮಗೆ ಗರ್ಭಪಾತವಾಗಿ 5-6 ದಿನಗಳ ನಂತರ ತೆಗೆದುಕೊಡಿದ್ದು ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ದೀಪವೊಂದು ಆರಿ ಹೋಗಿ ವರುಷವಾಗಿದೆ! ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ


ಆ ಸಮಯದಲ್ಲೂ ಕೂಡ ನಾನು ಹೋಗಿ ಪ್ರದರ್ಶನ ನೀಡಿದ್ದೇನೆ. ನಾನು ಕುರ್ಚಿಯ ಮೇಲೆ ಕುಳಿತು ಹಾಡನ್ನು ಹಾಡಿದ್ದೇನೆ. ನನಗೆ ಸಣ್ಣ ಆಪರೇಷನ್‌ ಆಗಿದೆ. ನನಗೆ ನಿಂತುಕೊಂಡು ಹಾಡಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳಿದ್ದೆ. ಮಗುವನ್ನು ಕಳೆದುಕೊಂಡ ನಿರಂತರ ದುಃಖದ ಬಳಿಕ ನಾನು ಸಂಗೀತದಲ್ಲಿ ಸಂತೋಷವನ್ನು ಕಂಡುಕೊಂಡಿದ್ದೇನೆ. ಅದೇ ಈ ನಾನು ನಿಮಗೆ ಏನನ್ನೂ ಹೇಳದೇ ಹೋದ್ದರಿಂದ ಈ ಫೋಟೋವನ್ನು ನೋಡುವಾಗ ನಿಮಗೆ ಏನೂ ತಿಳಿದಿರೋದಿಲ್ಲ ಎಂದು ಚಿನ್ಮಯಿ ಹೇಳಿದ್ದಾರೆ.


ಇನ್ನು, ಇತ್ತೀಚಿಗೆ ಚಿನ್ಮಯಿ ತನ್ನ ಮಗ ಮತ್ತು ಮಗಳಿಗೆ ಹಾಲುಣಿಸುವ ಹೃದಯಸ್ಪರ್ಶಿ ಚಿತ್ರವನ್ನು ಇನ್‌ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು.


ಇದನ್ನೂ ಓದಿ: ಮಗಳು ವಮಿಕಾ ಜೊತೆ ಅನುಷ್ಕಾ ಶರ್ಮಾ ಕೋಲ್ಕತ್ತಾ ಡೇಸ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್


ಸಾಮಾನ್ಯವಾಗಿ ಸೆಲೆಬ್ರಿಟಿಗಳು ಗರ್ಭಿಣಿಯಾದಾಗ ಫೋಟೋ ಶೂಟ್‌ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋದು ಕಾಮನ್.‌ ಆದ್ರೆ ಚಿನ್ಮಯಿ ಹಾಗೆ ಪ್ರೆಗ್ನೆನ್ಸಿ ಪೋಟೋಗಳನ್ನು ಹಂಚಿಕೊಳ್ಳದೇ ಇರುವುದೇ ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿತ್ತು.

First published: