• Home
 • »
 • News
 • »
 • entertainment
 • »
 • Chandan Shetty-Nivedita Gowda: ಪುಟ್ಟು ಲಕ್ಷ್ಮೀಯಾದ ನಿವೇದಿತಾ, ಬಾರೇ ಬಾರೇ ಎಂದು ಹಳ್ಳಿ ಸ್ಟೈಲಲ್ಲಿ ಕರೆದ ಚಂದನ್ ಶೆಟ್ಟಿ!

Chandan Shetty-Nivedita Gowda: ಪುಟ್ಟು ಲಕ್ಷ್ಮೀಯಾದ ನಿವೇದಿತಾ, ಬಾರೇ ಬಾರೇ ಎಂದು ಹಳ್ಳಿ ಸ್ಟೈಲಲ್ಲಿ ಕರೆದ ಚಂದನ್ ಶೆಟ್ಟಿ!

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದು ನಿಮಿಷದಲ್ಲಿ ಈ ಹಾಡು ಮಾಡಿದ್ದಾರೆ. ಇಬ್ಬರು ಹಳ್ಳಿ ಹುಡುಗ, ಹುಡುಗಿ ರೀತಿ ರೆಡಿಯಾಗಿ, ಡ್ಯಾನ್ಸ್ ಮಾಡಿದ್ದಾರೆ!

 • News18 Kannada
 • Last Updated :
 • Karnataka, India
 • Share this:

  ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Nivedita Gowda) ಈಗ ಕಿರುತೆರೆಯ ಸ್ಟಾರ್ ಜೋಡಿಗಳು. ಸೋಷಿಯಲ್ ಮೀಡಿಯಾದಲ್ಲಿ (Social Media) ಸಕ್ರಿಯ ಆಗಿರುವ ಈ ಜೋಡಿ ಅಭಿಮಾನಿಗಳೊಂದಿಗೆ ತಮ್ಮ ಅಪ್ಡೇಟ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಲಿಪ್ ಕಿಸ್ ಮಾಡಿದ ವಿಡಿಯೋ ಶೇರ್ ಮಾಡಿದ್ದು. ಇದಕ್ಕೆ ಕೆಲ ನೆಟ್ಟಿಗರು ವಿರೋಧ ವ್ಯಕ್ತ ಪಡಿಸಿದ್ದರು. ಈಗ ಚಂದನ್ ಶೆಟ್ಟಿ ಅವರು ಹೊಸ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಹಳ್ಳಿಯೊಂದರಲ್ಲಿ ಪುಟ್ಟ ಮನೆ ಬಳಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಹೊಸ ರೀಲ್ಸ್ (New Reels) ಮಾಡಿದ್ದಾರೆ. ಅದನ್ನು ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಂಡಿದ್ದಾರೆ. ಒನ್ ಮಿನಿಟ್ ಮ್ಯೂಸಿಕ್ ಥೀಮ್ ನಲ್ಲಿ ಇದನ್ನು ಮಾಡಿದ್ದು, ಚೆನ್ನಾಗಿ ಮೂಡಿಬಂದಿದೆ.


  "ಪುಟ್ಟು ಲಕ್ಷ್ಮೀ ಬಾರೇ ಬಾರೇ"
  ಚಂದನ್ ಶೆಟ್ಟಿ ಅವರು ಮತ್ತು ನಿವೇದಿತಾ ಗೌಡ ಅವರು ಒಂದು ನಿಮಿಷದಲ್ಲಿ ಈ ಹಾಡು ಮಾಡಿದ್ದಾರೆ. ಇಬ್ಬರು ಹಳ್ಳಿ ಹುಡುಗ, ಹುಡುಗಿ ರೀತಿ ರೆಡಿಯಾಗಿದ್ದು ಡ್ಯಾನ್ಸ್ ಮಾಡಿದ್ದಾರೆ. ಚಂದನ್ ಬೈಕ್ ಮೇಲೆ ಕುಳಿತು. ಹೇ ಪುಟ್ಟು ಲಕ್ಷ್ಮೀ ಬಾರೇ, ಸ್ಪಲ್ಪ ಚೆಂದಾಗಿ ರೆಡಿಯಾಗಿ ಬಾರಮ್ಮಿ, ಹೋ ಮುದ್ದು ಲಕ್ಷ್ಮೀ, ಹತ್ತಿ ಬೈಕ್ ನ್ನು ಗಟ್ಟಿಯಾಗಿ ತಬ್ಬಿಕೋ. ನಿನಗಂತ 2 ರೂಪಾಯಿ ಇಟ್ಟೀನಿ. ಗೂಡು ಅಂಗಡಿಯಲ್ಲಿ ಕೊಡಿಸ್ತೀನಿ ಮಿಠಾಯಿ ಎಂದು ಡ್ಯಾನ್ಸ್ ಮಾಡಿದ್ದಾರೆ.


  ಠಪೋರಿ ಸ್ಟೈಲ್ ನಲ್ಲಿ ಡ್ಯಾನ್ಸ್ ಮಾಡಿ
  ಈ ರೀಲ್ಸ್ ಹಾಕಿರುವ ಚಂದನ್ ಶೆಟ್ಟಿ, ಠಪೋರಿ ಸ್ಟೈಲ್ ನಲ್ಲಿ ನೀವೂ ರೀಲ್ಸ್ ಮಾಡಿ ಮಜಾ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಅಲ್ಲದೇ ಒನ್ ಮಿನಿಟ್ ಪುಟ್ಟುಲಕ್ಷ್ಮೀ ಸಾಂಗ್‍ನ ರೀಲ್ಸ್ ಶೇರ್ ಮಾಡಲು ಖುಷಿ ಆಗುತ್ತಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: Anushka Shetty birthday: ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಸ್ವೀಟಿಯ ಗೊತ್ತಿರದ ಗುಟ್ಟುಗಳು ಇವು! 


  ಹೊಸ ರೀಲ್ಸ್ ಮೆಚ್ಚಿದ ಅಭಿಮಾನಿಗಳು
  ಚಂದನ್ ಶೆಟ್ಟಿ ಅವರು ಮತ್ತು ನಿವೇದಿತಾ ಗೌಡ ಪುಟ್ಟು ಲಕ್ಷ್ಮೀ ಸಾಂಗ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೋಶಿಲ್ ಮೀಡಿಯಾದಲ್ಲಿ ಹಾಕಿದ ಕೆಲವೇ ಕ್ಷಣಗಳಲಿ ಹೆಚ್ಚು ವೀವ್ಸ್ ಪಡೆದಿದೆ. ಹಳ್ಳಿ ಹುಡುಗಿ ಆಗ್ಲಿ, ಸಿಟಿ ಹುಡುಗಿ ಆಗ್ಲಿ, ನಮ್ಮ ನಿವಿ ಸೂಪರ್, ಡಾಲ್ ಎಂದು ಅಭಿಮಾನಿಗಳು ಹೇಳಿದ್ದಾರೆ. ಡ್ಯಾನ್ಸ್ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.


  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ


  ಬಿಗ್ ಬಾಸ್ ನಿಂದ ಪ್ರಸಿದ್ಧಿ
  ಟಿಕ್ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ, ಅದರ ಮೂಲಕ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಿದ್ದರು. ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋ ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್  ಮಾಡುತ್ತಾರೆ.


  ಇದನ್ನೂ ಓದಿ: Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಚಾರು ರೆಡಿ, ಅತ್ತಿಗೆಗೆ ಕಿಡ್ನಿ ಕೊಡಲು ರಾಮಾಚಾರಿ ತಯಾರಿ! 


  ನಿವೇದಿತಾ ಗೌಡ ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ.  ಅಭಿಮಾನಿಗಳು ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಾರೆ.

  Published by:Savitha Savitha
  First published: