ಚಂದನ್ ಶೆಟ್ಟಿ ಫೇಸ್ಬುಕ್ ಖಾತೆ ಮತ್ತೊಮ್ಮೆ ಹ್ಯಾಕ್; ಮಾದೇಶ್ವರನ ಶಾಪ ಅಂದ್ರು ಅಭಿಮಾನಿಗಳು
ಇನ್ನು ಸಾಕಷ್ಟು ಅಭಿಮಾನಿಗಳು ಈ ಬಗ್ಗೆ ಕಮೆಂಟ್ ಹಾಕಿದ್ದಾರೆ. ಇದು ಮಾದೇಶ್ವರನ ಶಾಪ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಚಂದನ್ ಶೆಟ್ಟಿ ವಿಯೆಟ್ನಾಂ ಅವರ ಮನ ಗೆದ್ದಿದ್ದಾರೆ ಎಂದಿದ್ದಾರೆ.
ಕೋಲು ಮಂಡೆ ಹಾಡಿನ ಮೂಲಕ ಗಾಯಕ ಚಂದನ್ ಶೆಟ್ಟಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಅವರ ಫೇಸ್ಬುಕ್ ಖಾತೆ ಹ್ಯಾಕ್ ಆಗಿತ್ತು. ಇದಾದ ಮೂರೇ ದಿನಕ್ಕೆ ಅವರ ಫೇಸ್ಬುಕ್ ಖಾತೆ ಮತ್ತೆ ಹ್ಯಾಕ್ ಆಗಿದೆ.
ಗಣೇಶ ಹಬ್ಬದ ಪ್ರಯುಕ್ತ ಚಂದನ್ ಶೆಟ್ಟಿ ಅವರು ಕೋಲು ಮಂಡೆ ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಹಾಡು ವಿವಾದ ಸೃಷ್ಠಿಸಿತು. ಈ ಹಾಡಿನಲ್ಲಿ ಮಹದೇಶ್ವರನಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಚಂದನ್ ಶೆಟ್ಟಿ ವಿರುದ್ಧ ಮಲೆ ಮಹದೇಶ್ವರ ಭಕ್ತರು ಸಿಟ್ಟಾಗಿದ್ದರು. ನಂತರ ಚಂದನ್ ಶೆಟ್ಟಿ ಮಾಧ್ಯಮದ ಮೂಲಕ ಕ್ಷಮಾಪಣೆ ಕೇಳಿದ್ದರು, ಮಾತ್ರವಲ್ಲದೆ ಯ್ಯೂಟೂಬ್ನಿಂದ ಹಾಡನ್ನು ತೆಗೆದು ಹಾಕಲಾಗಿತ್ತು. ಸದ್ಯ,ಚಂದನ್ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ.
ಹೀಗಿರವಾಗಲೇ, ಆಗಸ್ಟ್ 29ರಂದು ರ್ಯಾಪರ್ ಚಂದನ್ ಶೆಟ್ಟಿ ಅವರ ಫೇಸ್ಬುಕ್ ಖಾತೆ ಹ್ಯಾಕ್ ಆಗಿತ್ತು. ಅಷ್ಟೇ ಅಲ್ಲ, ಲೈವ್ ವಿಡಿಯೋ ವೇಳೆ ಅಶ್ಲೀಲ ಚಿಹ್ನಗಳ ಬಳಕೆ ಮಾಡಿದ್ದ. ವಿದೇಶಿ ವ್ಯಕ್ತಿಯೊಬ್ಬ ನಿರಂತರವಾಗಿ ಲೈವ್ ವಿಡಿಯೋ ಪ್ರಸಾರ ಮಾಡಿದ್ದ. ಲೈವ್ ಬಂದ ವ್ಯಕ್ತಿ ವಿಯೆಟ್ನಾಂ ಮೂಲದವನು ಎನ್ನಲಾಗಿದೆ.
ಶನಿವಾರ ಮುಂಜಾನೆ ಕೂಡ ಚಂದನ್ ಶೆಟ್ಟಿ ಖಾತೆ ಮತ್ತೆ ಹ್ಯಾಕ್ ಆಗಿದೆ. ವಿಯೆಟ್ನಾಂ ಭಾಷೆಯಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದೆ. ಇತ್ತೀಚೆಗೆ ಚಂದನ್ ಶೆಟ್ಟಿ ಖಾತೆ ಹ್ಯಾಕ್ ಮಾಡಿದವರು ವಿಯೆಟ್ನಾಂ ಮೂಲದವರೇ ಆಗಿತ್ತು. ಈಗ ಹ್ಯಾಕ್ ಮಾಡಿದವರೂ ಅವರೇ ಎಂದು ಹೇಳಲಾಗಿದೆ.
ಇನ್ನು ಸಾಕಷ್ಟು ಅಭಿಮಾನಿಗಳು ಈ ಬಗ್ಗೆ ಕಮೆಂಟ್ ಹಾಕಿದ್ದಾರೆ. ಇದು ಮಾದೇಶ್ವರನ ಶಾಪ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಚಂದನ್ ಶೆಟ್ಟಿ ವಿಯೆಟ್ನಾಂ ಅವರ ಮನ ಗೆದ್ದಿದ್ದಾರೆ ಎಂದಿದ್ದಾರೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ