ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು (Singer KK Death) 53 ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರ ಬಳಿಕ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಇದನ್ನೂ ಮುನ್ನ ಪಂಜಾಬ್ ನ ರಾಫರ್ ಸಿಧು ಮುಸೇವಾಲಾ (Sidhu Moose Wala) ಅವರನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ ಬಾಲಿವುಡ್ (Bollywood) ಸ್ಟಾರ್ ರಾಫರ್ ಮತ್ತು ಗಾಯಕ ಅವರು ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಹೌದು, ಬಾಲಿವುಡ್ ನ ಖ್ಯಾತ ಗಾಯಕ ಮತ್ತು ರಾಫರ್ ಬಾದ್ಶಾ (Badshah) ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದು, ಸೆಲೆಬ್ರೆಟಿಗಳ ಜೀವನದಲ್ಲಿ ಕೆಲವೊಮ್ಮೆ ಹೀಗೂ ಆಗುತ್ತದೆ ಎಂಬ ಸಂದೇಶವನ್ನು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಬಾದ್ ಶಾ ಅವರು ಹೀಗೆಕೆ ಹೇಳುತ್ತಿದ್ದಾರೆ ಎಂದು ಕೇಳಿದರೆ ಇಲ್ಲಿದೆ ನೋಡಿ ಬಾದ್ ಶಾ ಬರೆದ ವಿವರಗಳು.
ಕೆಲವರು ನಾವು ಸಾಯಬೇಕೆಂದು ಪ್ರಾರ್ಥಿಸುತ್ತಾರೆ ಎಂದ ಬಾದ್ಶಾ:
ಹೌದು, ಬಾದ್ ಶಾ ತಮ್ಮ ಇನ್ಸ್ಟಾಗ್ರಾಂ ಗೆ ಓರ್ವ ವ್ಯಕ್ತಿ ಸಂದೇಶ ಕಳಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ ಜೊತೆಗೆ ತಮ್ಮ ಅನಿಸಿಕೆಯನ್ನೂ ಅದರೊಂದಿಗೆ ಸೇರಿಸಿದ್ದು, ಇದೀಗ ಈ ಪೋಟೋ ಎಲ್ಲಡೆ ವೈರಲ್ ಆಗುತ್ತಿದೆ. ಬಾದ್ಶಾ ಅವರಿಗೆ ಓರ್ವ ವ್ಯಕ್ತಿ ಇನ್ಸ್ಟಾಗ್ರಾಂ ನಲ್ಲಿ "ತು ಕಬ್ ಮರೇಗಾ..." ಎಂಬ ನಿಂದನೀಯ ಸಂದೇಶವನ್ನು ಕಳುಹಿಸಿದ್ದಾರೆ. ನೀವು ಸಾಯುವುದು ಯಾವಾಗ ಎಂದು ಕೇಳಿರುವ ಈ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಕೆಲ ಮಾತುಗಳನ್ನು ಬರೆದುಕೊಂಡಿದ್ದಾರೆ.
ಅದರಂತೆ, ‘ನಾವು ದಿನನಿತ್ಯದ ಆಧಾರದ ಮೇಲೆ ಯಾವ ರೀತಿಯ ದ್ವೇಷವನ್ನು ಎದುರಿಸುತ್ತೇವೆ ಎಂಬ ಕಲ್ಪನೆಯನ್ನು ನಿಮಗೆ ನೀಡಲು ಈ ಪೋಸ್ಟ್ ಹಾಕಬೇಕಾಯಿತು. ನೀವು ನೋಡುವುದು ಭ್ರಮೆ, ನೀವು ಕೇಳುವುದು ಸುಳ್ಳು, ಕೆಲವರು ನಿಮ್ಮನ್ನು ಭೇಟಿಯಾಗಲು ಸಾಯುತ್ತಾರೆ, ಕೆಲವರು ನೀವು ಸಾಯಬೇಕೆಂದು ಪ್ರಾರ್ಥಿಸುತ್ತಾರೆ‘ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Singer KK Death: ಕೆಕೆ ಸಾವಿಗೆ ಅವ್ರೇ ಕಾರಣನಾ? ಕೊನೆ ಉಸಿರು ಹೋಗೋ ಮುನ್ನ ಸೂಚನೆ ಕೊಟ್ಟಿದ್ರಂತೆ ಲೆಜೆಂಡ್ ಸಿಂಗರ್!
ಖ್ಯಾತ ಗಾಯಕನನ್ನು ಕಳೆದುಕೊಂಡ ಬಾಲಿವುಡ್:
ಇನ್ನು, ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು 53ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾದರು. ಈ ಸುದ್ದಿ ಬಾಲಿವುಡ್ ಮಂದಿಗೆ ಸಾಕ್ ನೀಡಿದಂತಾಗಿದ್ದು, ಉತ್ತಮ ಗಾಯಕನ ನಿಧನ ಬಾಲಿವುಡ್ಗೆ ತುಂಬಲಾರದ ನಷ್ಟವಾಗಿದೆ.ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಇದನ್ನೂ ಓದಿ: Singer KK Death: ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ ಸಂಗೀತಗಾರರಿವರು, ಸಾವಿಗೂ-ಸಂಗೀತಕ್ಕೂ ಲಿಂಕ್ ಇದ್ಯಾ?
ಕೆಲ ದಿನಗಳ ಹಿಂದೆ ಕೊಲೆಯಾಗಿದ್ದ ಪಂಜಾಬಿ ಗಾಯಕ:
ಕೆಲ ದಿನಗಳ ಹಿಂದೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಾಗಿತ್ತು. ಈ ಪ್ರಕರಣದ ತನಿಖೆಗೆ ಪಂಜಾಬ್ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ. ಪಂಜಾಬ್ ಪೊಲೀಸ್ ಡಿಜಿಪಿ ವಿಕೆ ಭನ್ವಾರಾ ಅವರು ಪಂಜಾಬ್‌ನಲ್ಲಿರುವ ಹಿರಿಯ ಅಧಿಕಾರಿಗಳನ್ನು ಎಸ್‌ಐಟಿಗೆ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಸಿಧು ಮುಸೇವಾಲಾ ಹತ್ಯೆಗೆ 9 ಎಂಎಂ ಪಿಸ್ತೂಲ್ ಬಳಸಲಾಗಿದೆ. ಹಂತಕರು ಕೊಲೆಗೆ 3 ರೀತಿಯ ಆಯುಧಗಳನ್ನು ಬಳಸಿದ್ದಾರೆ. ಸ್ಥಳದಲ್ಲಿ 30 ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ