Asha Bhosle: ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹಾಡಲು ಹೋಗ್ತಿದ್ರಂತೆ ಆಶಾ ಭೋಂಸ್ಲೆ! ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಆಶಾ ಭೋಂಸ್ಲೆ ಅವರು 89ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಹಿರಿಯ ಗಾಯಕಿ 1940ರ ದಶಕದಿಂದಲೂ ಹಿಂದಿ ಸಿನಿಮಾಗಳಲ್ಲಿ ಹಾಡುತ್ತಿದ್ದಾರೆ. ಆಶಾ ಮತ್ತು ಅವರ ಸಹೋದರಿ ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರು ಹಿಂದಿ ಚಲನಚಿತ್ರ ಸಂಗೀತದ ಆ ಆರಂಭಿಕ ದಿನಗಳಲ್ಲಿ ಜನಪ್ರಿಯ ಗಾಯಕಿಯಾಗಿದ್ದರೂ, ಅಂತಹ ಸ್ಥಾನಕ್ಕೆ ಬರಲು ಇಬ್ಬರು ಸಹೋದರಿಯರು ತುಂಬಾನೇ ಅಡೆತಡೆಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದಾರೆ ನೋಡಿ.

ಆಶಾ ಭೋಂಸ್ಲೆ

ಆಶಾ ಭೋಂಸ್ಲೆ

  • Share this:
ನಾವು ಇವತ್ತಿಗೂ ‘ಪಿಯಾ ತೂ ಅಬ್ ತೊ ಆಜಾ’, ‘ಓ ಹಸೀನಾ ಝುಲ್ಫೋ ವಾಲಿ’ ಮತ್ತು ‘ಏ ಮೇರಾ ದಿಲ್’ ಹಾಡುಗಳನ್ನು (Songs) ಟಿವಿಯಲ್ಲಿ ನೋಡಿದರೆ ಅಥವಾ ರೇಡಿಯೋದಲ್ಲಿ (Radio) ಕೇಳಿದರೆ, ನಮಗೆ ಈ ಹಾಡುಗಳಲ್ಲಿ ಅಭಿನಯಿಸಿದ ಚಿತ್ರನಟಿಯರಿಗಿಂತಲೂ ಮೊದಲು ನೆನಪಾಗುವುದು ಈ ಹಾಡುಗಳನ್ನು ಅಷ್ಟೇ ಜೋಶ್ ನಿಂದ ಹಾಡಿದ ಹಿಂದಿ ಚಿತ್ರೋದ್ಯಮದ (Hindi film industry) ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾದ ಆಶಾ ಭೋಂಸ್ಲೆ (Asha Bhosle).  ಹೌದು.. ಹಿಂದಿ ಚಿತ್ರೋದ್ಯಮದಲ್ಲಿ ಅದರಲ್ಲೂ 80 ಮತ್ತು 90 ರ ದಶಕದಲ್ಲಿ ಬಹುತೇಕ ಹಿಟ್ ಚಿತ್ರಗಳ ಹಾಡುಗಳನ್ನು ಹಾಡಿದವರು ಎಂದರೆ ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರು. ಆಶಾ ಅವರು ಲತಾ (Latha) ಅವರ ಸಹೋದರಿ, ಆಶಾ ಹಾಡಲು ಶುರು ಮಾಡಿದ್ದು ಲತಾ ನಂತರದಲ್ಲಿ. 

ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರಷ್ಟು ಹಾಡುಗಳನ್ನು ಹಾಡದೆ ಇದ್ದರೂ ಆಶಾ ಅವರು ತಮ್ಮ ವಿಶಿಷ್ಟವಾದ ಧ್ವನಿಗೆ ಹೆಸರುವಾಸಿಯಾಗಿದ್ದರು. ಆಶಾ ಭೋಂಸ್ಲೆ ಅವರು ಸದಾ ಮುಖದಲ್ಲಿ ನಗುವನ್ನು ಇಟ್ಟುಕೊಂಡು ಕೆಲಸ ಮಾಡಿದವರು, ಅವರು ಪಟ್ಟ ಕಷ್ಟಗಳು ಬಹುತೇಕರಿಗೆ ಗೊತ್ತೇ ಇಲ್ಲ.

89ನೇ ವರ್ಷಕ್ಕೆ ಕಾಲಿಟ್ಟ ಹಿರಿಯ ಗಾಯಕಿ 
ಆಶಾ ಭೋಂಸ್ಲೆ ಅವರು 89ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಹಿರಿಯ ಗಾಯಕಿ 1940ರ ದಶಕದಿಂದಲೂ ಹಿಂದಿ ಸಿನಿಮಾಗಳಲ್ಲಿ ಹಾಡುತ್ತಿದ್ದಾರೆ. ಆಶಾ ಮತ್ತು ಅವರ ಸಹೋದರಿ ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರು ಹಿಂದಿ ಚಲನಚಿತ್ರ ಸಂಗೀತದ ಆ ಆರಂಭಿಕ ದಿನಗಳಲ್ಲಿ ಜನಪ್ರಿಯ ಗಾಯಕಿಯಾಗಿದ್ದರೂ, ಅಂತಹ ಸ್ಥಾನಕ್ಕೆ ಬರಲು ಇಬ್ಬರು ಸಹೋದರಿಯರು ತುಂಬಾನೇ ಅಡೆತಡೆಗಳನ್ನು ಎದುರಿಸಬೇಕಾಯಿತು.

ಇದನ್ನೂ ಓದಿ: Yogita Bihani: ವಿಕ್ರಮ್ ವೇದಾ ಚಿತ್ರದ ಸಹನಟಿಯನ್ನು ಹಾಡಿ ಹೊಗಳಿದ ಸೈಫ್ ಅಲಿ ಖಾನ್

ಸಂಗೀತ ಸಂಯೋಜಕ ಆರ್.ಡಿ.ಬರ್ಮನ್ ಅವರನ್ನು ಮದುವೆಯಾಗುವ ಮೊದಲು, ಆಶಾ ಅವರು ಗಣಪತರಾವ್ ಭೋಸ್ಲೆ ಅವರನ್ನು ವಿವಾಹವಾದರು, ಈ ದಂಪತಿಗಳಿಗೆ ಮೂವರು ಮಕ್ಕಳಿದ್ದರು.

ಏಕಾಂಗಿಯಾಗಿ ಮೂವರು ಮಕ್ಕಳನ್ನು ಸಾಕ್ತಿದ್ದ ಆಶಾ ಭೋಂಸ್ಲೆ
ತನ್ನ ಮೊದಲ ಮದುವೆಯ ಸಮಯದಲ್ಲಿ, ಆಶಾ ಅವರ ಪತಿ ತಿಂಗಳಿಗೆ ಕೇವಲ 100 ರೂಪಾಯಿಗಳನ್ನು ಮಾತ್ರ ಸಂಪಾದಿಸುತ್ತಾರೆ ಎಂದು ತಿಳಿದು ಅವರೊಂದಿಗೆ ಅವರು ಸಹ ಮನೆಯ ಮತ್ತು ಮಕ್ಕಳ ಜವಾಬ್ದಾರಿಯನ್ನು ಸಹ ಹೊರಬೇಕಾಯಿತು. ಇದರ ಜೊತೆಗೆ ಆಶಾ ಅವರು ತಮ್ಮ ಮನೆ ಕೆಲಸಗಳನ್ನು ಮಾಡಿಕೊಂಡು ಮತ್ತು ಮಕ್ಕಳನ್ನು ಏಕಾಂಗಿಯಾಗಿ ನೋಡಿಕೊಳ್ಳುತ್ತಿದ್ದರು.

1993ರಲ್ಲಿ ದೂರದರ್ಶನ ಕೋಲ್ಕತಾದಲ್ಲಿ ಪ್ರಸಾರವಾದ ಸಲೀಲ್ ಚೌಧರಿ ಅವರೊಂದಿಗಿನ ಚಾಟ್ ನಲ್ಲಿ ಆಶಾ ಅವರು “ತಾನು ಹಾಡಲು ಪ್ರಾರಂಭಿಸಿದಾಗ, ತಾನು ಮುಂಬೈನಿಂದ ತುಂಬಾ ದೂರದ ಊರಿನಲ್ಲಿ ವಾಸಿಸುತ್ತಿದ್ದೆ ಮತ್ತು ಮುಂಬೈ ನಗರಕ್ಕೆ ಬರಲು ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ” ಎಂದು ಹೇಳಿಕೊಂಡಿದ್ದರು.

"ನಾನು ನನ್ನ ಒಂದು ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕಾಗಿತ್ತು, ಆದ್ದರಿಂದ ನಾನು ಹೋಗಿ ಹಾಡಬಹುದು ಮತ್ತು ಹಣವನ್ನು ಸಂಪಾದಿಸಬಹುದು. ಆ ಹೋರಾಟದ ದಿನಗಳಲ್ಲಿ, ಕೆಲವೊಮ್ಮೆ ನಾನು ಒಂದು ಹಾಡನ್ನು ಪಡೆಯುತ್ತಿದ್ದೆ, ಕೆಲವೊಮ್ಮೆ ನಾನು ಅದನ್ನು ಸಹ ಪಡೆಯುತ್ತಿರಲಿಲ್ಲ. ನಾನು ರಿಯಾಜ್ ಗಾಗಿ ಬೆಳಿಗ್ಗೆ 5 ಗಂಟೆಗೆ ಎಚ್ಚರಗೊಳ್ಳುತ್ತಿದ್ದೆ. ಇದೆಲ್ಲದರ ಹೊರತಾಗಿ, ನಾನು ಎಲ್ಲಾ ಮನೆ ಕೆಲಸಗಳನ್ನು ಸಹ ಮಾಡಬೇಕಾಗಿತ್ತು" ಎಂದು ಅವರು ಹೇಳಿದರು.

ಇವರ ದೈನಂದಿನ ದಿನಚರಿ ಹೇಗಿತ್ತು ನೋಡಿ 
ಆಶಾ ಅವರು ನಂತರ ಮುಂಬೈ ನಗರದಲ್ಲಿರುವ ಬೊರಿವಲಿಗೆ ಸ್ಥಳಾಂತರಗೊಂಡಾಗ, ಅದು ಒಂದು ಗ್ರಾಮವಾಗಿತ್ತು ಎಂದು ನೆನಪಿಸಿಕೊಂಡರು. ಆಗ ಜಗತ್ತಿಗೆ ಆಶಾ ಅಂತ ಒಬ್ಬ ಪ್ರತಿಭಾವಂತ ಗಾಯಕಿ ಇದ್ದಾರೆ ಅಂತ ತಿಳಿಯಲು ಶುರುವಾಯಿತು. ಆದರೆ ಆಶಾ ಅವರ ದೈನಂದಿನ ದಿನಚರಿಯು ಬೆಳಿಗ್ಗೆ ಎದ್ದು ಬಾವಿಯಿಂದ ನೀರು ತರುವುದು, ಮನೆಯಲ್ಲಿರುವ ಮಕ್ಕಳಿಗಾಗಿ ಮತ್ತು ಗಂಡ, ಅತ್ತೆ ಮತ್ತು ಮಾವನಿಗೆ ಅಡುಗೆಯನ್ನು ಬೇಯಿಸುವುದು, ಮಕ್ಕಳಿಗೆ ಊಟದ ಡಬ್ಬಿಗಳನ್ನು ಪ್ಯಾಕ್ ಮಾಡುವುದು, ಅವರನ್ನು ಶಾಲೆಗೆ ಬಿಡುವುದು ಮತ್ತು ಅವರ ಅತ್ತೆ ಮತ್ತು ಮಾವಂದಿರನ್ನು ನೋಡಿಕೊಳ್ಳುವುದು ಸಹ ಒಳಗೊಂಡಿತ್ತು.

ಇದನ್ನೂ ಓದಿ:  Bigg Boss: ಈತನ ಮೇಲೆ ಚಿಕ್ಕಪ್ಪನೇ ನಡೆಸಿದ್ದನಂತೆ ಅತ್ಯಾಚಾರ! ಸ್ಫೋಟಕ ವಿಚಾರ ಬಾಯ್ಬಿಟ್ಟ ಬಿಗ್ ಬಾಸ್ ಸ್ಪರ್ಧಿ

ಇದೆಲ್ಲದರ ನಂತರ, ಅವರು ಗಂಟೆಗಟ್ಟಲೆ ಸ್ಟುಡಿಯೋದಲ್ಲಿ ನಿಂತು ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದರು, ಕೆಲವೊಮ್ಮೆ ಅದು ರಾತ್ರಿ 8 ಗಂಟೆವರೆಗೆ ಆಗುತ್ತಿತ್ತು.

ನಂತರ ಅವರು ಹಳೆಯ ಚಿಕ್ಕ ಮನೆಯಿಂದ ದೊಡ್ಡ ಮನೆಗೆ ಸ್ಥಳಾಂತರಗೊಂಡಾಗಲೂ, ಮನೆ ಕೆಲಸಗಳು ಅವರೇ ಮಾಡಿಕೊಳ್ಳುತ್ತಿದ್ದರು. "ದೇವರು ನನಗೆ ಸಾಕಷ್ಟು ಶಕ್ತಿಯನ್ನು ನೀಡಿದ್ದಾನೆ ಮತ್ತು ಬಲವಾದ ಇಚ್ಛಾಶಕ್ತಿಯನ್ನು ಸಹ ನೀಡಿದ್ದಾನೆ. ನಾನು ಯಾವುದಕ್ಕೂ ಬೇಡ ಎಂದು ಎಂದಿಗೂ ಹೇಳುವುದಿಲ್ಲ. ನಾನು ಎದ್ದು ನಿಂತು ಹಾಡುತ್ತಿದ್ದೆ, ಅದು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಅಲ್ಲಿಯವರೆಗೆ ಕೆಲವೊಮ್ಮೆ 6 ಗಂಟೆ, 8 ಗಂಟೆ ಆಗುತ್ತಿತ್ತು. ಕೆಲವೊಮ್ಮೆ ಇಡೀ ರಾತ್ರಿ ಕೆಲಸ ಮಾಡಬೇಕಾಗುತ್ತಿತ್ತು" ಎಂದು ಅವರು ಹೇಳಿದರು.

ಕ್ಯಾಬರೆ ಹಾಡುಗಾರ್ತಿಯಾಗಿ ಹಾಡಿದ್ದಕ್ಕೆ ಜನ ಹೀಗೆ ಹೇಳಿದ್ರಂತೆ 
2007ರಲ್ಲಿ ಐಟಿಎಂಬಿ ಕಾರ್ಯಕ್ರಮದೊಂದಿಗಿನ ಸಂಭಾಷಣೆಯಲ್ಲಿ, ಆಶಾ ಅವರು “ತನ್ನನ್ನು ಕ್ಯಾಬರೆ ಹಾಡುಗಾರ್ತಿಯಾಗಿ ನೋಡುತ್ತಾರೆ ಮತ್ತು ಅನೇಕ ಹಿರಿಯರು ತನ್ನ ಗಾಯನ ಶೈಲಿಯನ್ನು ಆಕ್ಷೇಪಿಸುತ್ತಾರೆ” ಎಂದು ಹಂಚಿಕೊಂಡರು. "ನೀವು ಅಂತಹ ಹಾಡುಗಳನ್ನು ಏಕೆ ಹಾಡುತ್ತೀರಿ ಎಂದು ಜನರು ಕೇಳುತ್ತಿದ್ದರು. ನಾನು ಅದನ್ನು ಬಿಡಬೇಕೇ ಎಂದು ನಾನು ಕೇಳಿದೆ? ಹಾಗಾದರೆ ನನ್ನ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ನಾನು ಸಂತೋಷಕ್ಕಾಗಿ ಹಾಡುತ್ತಿದ್ದೆನಾ? ಇದು ನನ್ನ ಅಗತ್ಯವಾಗಿತ್ತು. ನಾನು ನನ್ನ ಮಕ್ಕಳನ್ನು ಬೆಳೆಸಬೇಕಾಗಿತ್ತು" ಎಂದು ಅವರು ಹೇಳಿದರು.

ಹಿರಿಯ ಗಾಯಕಿ ತನ್ನ ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯದ ಜವಾಬ್ದಾರಿಯು ತನ್ನನ್ನು ಇನ್ನೂ ಕೆಲಸ ಮಾಡುವಂತೆ ಮಾಡಿತು ಮತ್ತು ಭಾರತದಂತಹ ಸಮಾಜದಲ್ಲಿ ಏಕ ಪೋಷಕರಾಗಿರುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಒಪ್ಪಿಕೊಂಡರು. "ಭಾರತದಲ್ಲಿ ಒಬ್ಬ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂದು ನಿಮಗೆ ತಿಳಿದಿದೆ, ಇದು ತುಂಬಾನೇ ಭಯಾನಕವಾಗಿದೆ. ಆದರೆ ನಾನು ಅದೆಲ್ಲವನ್ನೂ ಧೈರ್ಯದಿಂದ ಎದುರಿಸಿದೆ" ಎಂದು ಅವರು ಹೇಳಿದರು.

ಮಕ್ಕಳು ಚಿತ್ರರಂಗಕ್ಕೆ ಸೇರುವುದನ್ನು ವಿರೋಧಿಸಿದ್ರಂತೆ 
ಆಶಾ ಭೋಂಸ್ಲೆ ಖಂಡಿತವಾಗಿಯೂ ದೇಶದ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿದ್ದರೂ, ವೃತ್ತಿಯ ಅಪಾಯಗಳನ್ನು ಅವರು ತುಂಬಾ ಚೆನ್ನಾಗಿ ತಿಳಿದಿದ್ದಾರೆ, ಅದಕ್ಕಾಗಿಯೇ ಅವರು ತಮ್ಮ ಮಕ್ಕಳು ಚಲನಚಿತ್ರೋದ್ಯಮಕ್ಕೆ ಸೇರುವ ಆಲೋಚನೆಯನ್ನು ವಿರೋಧಿಸಿದರು. ಗಾಯಕ ಹೇಮಂತ್ ಕುಮಾರ್ ಅವರ ಹೆಸರು ಇರುವ ಅವರ ಹಿರಿಯ ಮಗ ಹೇಮಂತ್ ಭೋಸ್ಲೆ, ಸ್ವಲ್ಪ ಸಮಯದವರೆಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು.

"ಅವರು ಚಿತ್ರರಂಗಕ್ಕೆ ಸೇರುವುದನ್ನು ನಾನು ವಿರೋಧಿಸಿದ್ದೆ, ಅದರ ಹೊರತಾಗಿಯೂ, ನನ್ನ ಹಿರಿಯ ಮಗ ಹೇಮಂತ್ ಭೋಸ್ಲೆ ಸಂಗೀತ ನಿರ್ದೇಶಕರಾದರು. ಆದರೆ ಅವರಲ್ಲಿ ಯಾರೂ ಸಂಗೀತ ಕ್ಷೇತ್ರಕ್ಕೆ ಪ್ರವೇಶಿಸುವುದು ನನಗೆ ಇಷ್ಟವಿರಲಿಲ್ಲ. ಏಕೆಂದರೆ, ಚಲನಚಿತ್ರಗಳ ಬಗ್ಗೆ ಒಂದು ವಿಷಯವಿದೆ. ನೀವು ಅದೃಷ್ಟವಂತರಾಗಿದ್ದರೆ, ಮತ್ತು ನೀವು ಉತ್ತಮರಾಗಿದ್ದರೆ, ಎಲ್ಲರೂ ನಿಮ್ಮನ್ನು ಪೀಠದ ಮೇಲೆ ಇರಿಸುತ್ತಾರೆ. ಆದರೆ ನೀವು ಯಾವಾಗ ಬೀಳುತ್ತೀರಿ ಎಂದು ಸಹ ನೀವು ಅರಿತುಕೊಳ್ಳುವುದಿಲ್ಲ. ನೀವು ಕೆಲವೊಮ್ಮೆ ಸಾಕಷ್ಟು ಕೆಲಸವನ್ನು ಪಡೆಯುತ್ತೀರಿ, ಆದರೆ ಒಂದೊಂದು ದಿನ ನಿಮಗೆ ಏನೂ ಕೆಲಸ ಇರುವುದಿಲ್ಲ.

ಇದನ್ನೂ ಓದಿ:  Urvashi Rautela: ಪಂತ್ ಆಯ್ತು, ಈಗ ಪಾಕ್ ಆಟಗಾರನೇ ಬೇಕಂತೆ! ಬಾಲಿವುಡ್​ ನಟಿ ರೀಲ್ಸ್​ ವಿಡಿಯೋ ವೈರಲ್​

“ಸಿನೆಮಾ ರಂಗಕ್ಕೆ ಯಾರಾದರೂ ಹೊಸಬರು ಪ್ರವೇಶಿಸಿದ ತಕ್ಷಣ, ಹಳಬರನ್ನು ಮರೆತು ಬಿಡುತ್ತಾರೆ" ಎಂದು ಅವರು ಹೇಳಿದರು. ಚಲನಚಿತ್ರಗಳು ಅವರಿಗೆ ದಯೆ ತೋರದಿದ್ದರೆ ತನ್ನ ಮಕ್ಕಳಿಗೆ ಏನಾಗಬಹುದು ಎಂಬ ಆಲೋಚನೆ ಅವರನ್ನು ಹೆದರಿಸಿತು ಎಂದು ಆಶಾ ಹೇಳಿದರು. "ಈ ರೀತಿಯ ಏನಾದರೂ ಸಂಭವಿಸಿದರೆ, ನನ್ನ ಮಕ್ಕಳು ಏನು ಮಾಡುತ್ತಾರೆ? ಆದ್ದರಿಂದ ನಾನು ಅವರು ಸಿನೆಮಾ ರಂಗಕ್ಕೆ ಬರುವುದನ್ನು ವಿರೋಧಿಸಿದೆ. ನೀವು ಈ ವೃತ್ತಿಗೆ ಹೋಗುವುದಿಲ್ಲ ಎಂದು ನಾನು ಹೇಳಿದೆ. ನಾನು ಅವರಿಗೆ ಸಿನೆಮಾ ಕಡೆ ಮುಖ ಮಾಡಲು ಅವಕಾಶವನ್ನು ಕೊಡಲಿಲ್ಲ" ಎಂದು ಆಶಾ ಅವರು ಹೇಳಿದರು.

ಆಶಾ ಅವರ ಹಿರಿಯ ಮಗ ಹೇಮಂತ್ ಅವರು 2015 ರಲ್ಲಿ ಕ್ಯಾನ್ಸರ್ ರೋಗದಿಂದ ನಿಧನರಾದರು. ಅವರ ಮಗಳು ವರ್ಷಾ 2012 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಇನ್ನೂ ಅವರ ಕಿರಿಯ ಮಗ ಆನಂದ್ ಅವರನ್ನು ಅನಾರೋಗ್ಯದ ಕಾರಣ ಏಪ್ರಿಲ್ ನಲ್ಲಿ ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಿನಲ್ಲಿ ಈ ಗಾಯಕಿಯ ಬದುಕು ಒಂದು ಹೋರಾಟದ ಬದುಕು.
Published by:Ashwini Prabhu
First published: