Ek Love Ya: ಏಕ್​ ಲವ್​ ಯಾ ರೊಮ್ಯಾಂಟಿಕ್​ ಹಾಡಿಗೆ ದನಿಯಾದ ಗಾಯಕ ಅರ್ಮಾನ್​ ಮಲ್ಲಿಕ್​: ಇಲ್ಲಿದೆ ವಿಡಿಯೋ..!

ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣವಾಗ್ತಿರೋ ಸಿನಿಮಾಗೆ ಅರ್ಜುನ್ಯ ಸಂಗೀತ ನೀಡಿದ್ದಾರೆ. ಪ್ರೇಮಿಗಳ ದಿನದಂದು ರಿಲೀಸ್​ ಆಗಲಿರುವ ರೊಮ್ಯಾಂಟಿಕ್​ ಲವ್​ ಸಾಂಗ್​ಗೆ ಬಾಲಿವುಡ್​ ಗಾಯಕ ಅರ್ಮಾನ್​ ಮಲ್ಲಿಕ್ ದನಿಯಾಗಿದ್ದಾರೆ​.

ಅರ್ಜುನ್​ ಜನ್ಯ ಜೊತೆ ಅಮಾ್ನ್​ ಮಲ್ಲಿಕ್​

ಅರ್ಜುನ್​ ಜನ್ಯ ಜೊತೆ ಅಮಾ್ನ್​ ಮಲ್ಲಿಕ್​

  • Share this:
ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಬಹುತೇಕ ಸಿನಿಮಾಗಳು ಪೋಸ್ಟರ್​ ಜೊತೆಗೆ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಮಾಡಿವೆ. ಅಂತೆಯೇ ನಿರ್ದೇಶಕ ಜೋಗಿ ಪ್ರೇಮ್​ ಸಹ ತಮ್ಮ ಏಕ್​ ಲವ್​ ಯಾ (Ek Love Ya) ಚಿತ್ರದ ಮೊದಲ ಹಾಡಿನ ರಿಲೀಸ್ ದಿನಾಂಕ ಪ್ರಕಟಿಸುವುದರ ಜೊತೆಗೆ ಸಿನಿಮಾದ ಹೊಸ ಪೋಸ್ಟರ್​ಗಳನ್ನೂ ಹಂಚಿಕೊಂಡಿದ್ದಾರೆ. ಜೋಗಿ ಪ್ರೇಮ್(Jogi Prem)​ ನಿರ್ದೇಶಿಸುತ್ತಿರುವ ಸಿನಿಮಾ ಏಕ್​ ಲವ್​ ಯಾ ಚಿತ್ರತಂಡ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರುವುದರ ಜೊತೆಗೆ ಚಿತ್ರದ ಮೊದಲ ಹಾಡಿನ ರಿಲೀಸ್ ಕುರಿತಾಗಿ ಮಾಹಿತಿ ನೀಡಿತ್ತು. ಸಿನಿಮಾದ ಹೆಸರಲ್ಲೇ ಲವ್​ ಇದೆ. ಅಂತೆಯೇ ಈ ಲವ್​ ಸ್ಟೋರಿಯ ಮೊದಲ ಹಾಡನ್ನು ಪ್ರೇಮಿಗಳ ದಿನದಂದು ಅಂದರೆ ಫೆ. 14ಕ್ಕೆ ರಿಲೀಸ್ ಮಾಡಲಿದೆ ಚಿತ್ರತಂಡ. ಏಕ್​ ಲವ್​ ಯಾ ಸಿನಿಮಾದ ಮೊದಲ ಹಾಡು ಸಹ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್‌ ಆಗಲಿದೆಯಂತೆ. ಹಾಡಿನ ರಿಲೀಸ್​ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ ಈಗ ಹಾಡಿನ ಕೆಲವು ಸಾಲುಗಳನ್ನು ಗಾಯಕ ಹಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ.

ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣವಾಗ್ತಿರೋ ಸಿನಿಮಾಗೆ ಅರ್ಜುನ್ಯ ಸಂಗೀತ ನೀಡಿದ್ದಾರೆ. ಪ್ರೇಮಿಗಳ ದಿನದಂದು ರಿಲೀಸ್​ ಆಗಲಿರುವ ರೊಮ್ಯಾಂಟಿಕ್​ ಲವ್​ ಸಾಂಗ್​ಗೆ ಬಾಲಿವುಡ್​ ಗಾಯಕ ಅರ್ಮಾನ್​ ಮಲ್ಲಿಕ್ ದನಿಯಾಗಿದ್ದಾರೆ​.
View this post on Instagram


A post shared by Prem❣️s (@directorprems)


ಅರ್ಜುನ್​ ಜನ್ಯ ಅವರ ಜೊತೆ ಅರ್ಮಾನ್​ ಮಲ್ಲಿಕ್​ ಹಾಡನ್ನು ಹಾಡುತ್ತಾ ಅಭ್ಯಾಸ ಮಾಡುತ್ತಿರುವ ವಿಡಿಯೋ ಈಗ ವೈರಲ್​ ಆಗಿದೆ. ಅರ್ಜುನ್ ಜನ್ಯ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಯಾರೇ ಯಾರೇ ನೀನು ನಂಗೆ... ಏನೋ ಆಸೆ.... ಅನ್ನೋ ಹಾಡನ್ನು ಅರ್ಮಾನ್​ ಮಲ್ಲಿಕ್​ ಕಂಠದಲ್ಲಿ ಕೇಳಿ ಆನಂದಿಸಬಹುದಾಗಿದೆ.
ಈ ಸಿನಿಮಾದಲ್ಲಿ ರಕ್ಷಿತಾ ಅವರ ತಮ್ಮ ರಾಣಾ ನಾಯಕನಾಗಿ ನಟಿಸಿದ್ದು ಸಿ ಕ್ಸ್‌ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರೇಮ್​ ಅವರು ಈ ಹಾಡಿನ ಚಿತ್ರೀಕರಣದ ವಿಡಿಯೋಗಳ ತುಣುಕುಗಳನ್ನು ಸೇರಿಸಿ ಒಂದು ಪುಟ್ಟ ವಿಡಿಯೋ ಮಾಡಿಸಿದ್ದಾರೆ. ಅದನ್ನೂ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಡಿನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ.
View this post on Instagram


A post shared by Prem❣️s (@directorprems)


'ಏಕ್​ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು, ಇಲ್ಲಿ ರಾಣಾಗೆ ನಾಯಕಿಯಾಗಿ ರೇಷ್ಮಾ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಮ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಊಟಿ, ಗುಜರಾತ್​ ಹಾಗೂ ಕಾಶ್ಮೀರದಲ್ಲಿ ಪೂರ್ಣಗೊಂಡಿದೆ. ಇನ್ನು ಲಾಕ್​ಡೌನ್​ ಸಡಿಲಗೊಂಡ ಕೂಡಲೇ ಊಟಿಯಲ್ಲಿ ಹಾಡಿನ ಚಿತ್ರೀಕರಣದ ಜೊತೆಗೆ ಕೊಂಚ ಪ್ಯಾಚ್​ ವರ್ಕ್​ ಸಹ ಮುಗಿಸಿರುವ ಚಿತ್ರತಂಡ ನಂತರ ಕಾಶ್ಮೀರಕ್ಕೆ ಹೋಗಿತ್ತು. ಅಲ್ಲಿಯೂ ಹಾಡಿನ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: S P Balasubrahmanyam: ಗಾನ ದಿಗ್ಗಜ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ..!

ಹಾಗೆಯೇ ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಟಗರು ಚಿತ್ರದ ಛಾಯಾಗ್ರಾಹಕ ಮಹೇನ್ ಸಿಂಹ ಜೋಗಿ ಪ್ರೇಮ್​ ಅವರ ತಂಡದ ಜೊತೆ ಇರುವುದು. ​ ಈಗಾಗಲೇ ಟೈಟಲ್ ಟೀಸರ್ ಹಾಗೂ ಮೋಷನ್ ಪೋಸ್ಟರ್​ ಸಿನಿಮಾದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. .
Published by:Anitha E
First published: