Viral Photo: ಗೆಳತಿ ಕಾರ್ಲಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ ಗಾಯಕ ಅರ್ಜುನ್!

ಸದ್ಯ ಗಾಯಕ ಅರ್ಜುನ್ ಕಾನೂನ್ಗೊ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಒಂದು ಅದ್ಭುತವಾದ ಫೋಟೊ ಹಂಚಿಕೊಂಡಿದ್ದು ಅದೀಗ ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ಎಂದಿಗೂ ನೋಡಿರಲಾರದ ಚಿತ್ರ ಇದಾಗಿದ್ದು ಇದರಲ್ಲಿ ಗಾಯಕ ಅರ್ಜುನ್ ಕಾನೂನ್ಗೊ ತಮ್ಮ ಮದುವೆಯ ಸಂದರ್ಭದಲ್ಲಿ ತನ್ನ ಕೈಹಿಡಿದಿರುವ ದೀರ್ಘ ಕಾಲದ ಗೆಳತಿ ಕಾರ್ಲಾ ಡೆನಿಸ್ ಅವರನ್ನು ಆನಂದದಿಂದ ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ.

ಅರ್ಜುನ್ ಕಾನೂನ್ಗೊ ಮತ್ತು ಕಾರ್ಲಾ ಡೆನಿಸ್

ಅರ್ಜುನ್ ಕಾನೂನ್ಗೊ ಮತ್ತು ಕಾರ್ಲಾ ಡೆನಿಸ್

  • Share this:
ಗಾಯಕ ಅರ್ಜುನ್ ಕಾನೂನ್ಗೊ (Arjun Kanungo) ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಅದ್ಭುತವಾದ ಫೋಟೊ ಹಂಚಿಕೊಂಡಿದ್ದು ಅದೀಗ ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ಎಂದಿಗೂ ನೋಡಿರಲಾರದ ಚಿತ್ರ ಇದಾಗಿದ್ದು ಇದರಲ್ಲಿ ಗಾಯಕ ಅರ್ಜುನ್ ಕಾನೂನ್ಗೊ ಮದುವೆಯ (Marriage) ಸಂದರ್ಭದಲ್ಲಿ ತನ್ನ ಕೈಹಿಡಿದಿರುವ ದೀರ್ಘ ಕಾಲದ ಗೆಳತಿ ಕಾರ್ಲಾ ಡೆನಿಸ್ (Carla Dennis) ಅವರನ್ನು ಆನಂದದಿಂದ ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ. ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಅವರು ತಮ್ಮ ದೀರ್ಘ ಕಾಲದ ಗೆಳತಿ ಕಾರ್ಲಾ ಅವರನ್ನು ವರಿಸಿದ್ದಾರೆ.  ಈ ಜೋಡಿಯು ಅಗಸ್ಟ್ 10ರಂದು ಮದುವೆಯಾಗುತ್ತಿರುವುದಾಗಿ ಘೋಷಿಸಿತ್ತು. ಅದರಂತೆ ಮದುವೆ ಕಾರ್ಯಕ್ರಮ ನಡೆದಿದ್ದು ಇದೀಗ ಗಾಯಕ ಇನ್ಸ್ಟಾಗ್ರಾಂ ಖಾತೆಯಲ್ಲಿ (Instagram) ಮದುವೆ ಕಾರ್ಯಕ್ರಮದ ಕೆಲವು ಫೋಟೊಗಳನ್ನು (Photos) ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ ಏನು ಹೇಳಿಕೊಡಿದ್ದಾರೆ?

ಈ ಮುಂಚೆ ನೋಡಿರದ ಒಂದು ಫೋಟೊ ಹಂಚಿಕೊಳ್ಳುತ್ತ ಗಾಯಕ ಈ ರೀತಿ ಬರೆದುಕೊಂಡಿದ್ದಾರೆ, "ನಮ್ಮ ಕುಟುಂಬದವರು ಹಾಗೂ ನಿಕಟ ಸ್ನೇಹಿತರ ಸಮ್ಮುಖದಲ್ಲಿ ನಿನ್ನೆಯ ದಿನ ನಾನು ಮತ್ತು ಕಾರ್ಲಾ ಮದುವೆಯ ಬಂಧನಕ್ಕೊಳಗಾಗಿದ್ದೇವೆ. ಆ ದಿನ ನಮಗೆ ಎಷ್ಟು ವಿಶೇಷವಾಗಿತ್ತು ಹಾಗೂ ನಮಗೆ ಎಷ್ಟೊಂದು ಪ್ರೀತಿ ಹಾಗೂ ಶುಭಾಶಯಗಳು ಸಿಕ್ಕವು ಎಂಬುದನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ.
ನಮ್ಮ ಜೀವನದ ಈ ಪ್ರಯಾಣವು ಈಗಷ್ಟೇ ಆರಂಭವಾಗಿದೆ ಹಾಗೂ ಇದನ್ನು ನಾವು ನಮ್ಮ ಜೀವನದಲ್ಲಿರುವ ಇತರರೊಂದಿಗೆ ಹಂಚಿಕೊಳ್ಳುವಂತಹ ಅದೃಷ್ಟಶಾಲಿಗಳಾಗಿದ್ದೇವೆ. ಈ ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವುದಕ್ಕೆ ನಾವು ನಿಮ್ಮ ಆಶೀರ್ವಾದಗಳನ್ನು ಬೇಡುತ್ತಿದ್ದೇವೆ - ಅರ್ಜುನ್ ಮತ್ತು ಕಾರ್ಲಾ ಕಾನೂನ್ಗೊ."

ಮೆಹಂದಿ ಕಾರ್ಯಕ್ರಮದ ಫೋಟೊಗಳು ವೈರಲ್

ಈ ಮುಂಚೆ ಅರ್ಜುನ್ ಹಾಗೂ ಕಾರ್ಲಾ ಅವರ ಮೆಹಂದಿ ಕಾರ್ಯಕ್ರಮದ ಫೋಟೊಗಳು ಇಂಟರ್ನೆಟ್ಟಿನಲ್ಲಿ ಸಾಕಷ್ಟು ಹರಿದಾಡಿತ್ತು. ಇನ್ನು ಅರ್ಜುನ್ ಸಾಂಪ್ರದಾಯಿಕ ಶೈಲಿಯ ದಿರಿಸಿನಲ್ಲಿದ್ದರೆ ಕಾರ್ಲಾ ಅವರು ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟಿದ್ದರು. ಇಬ್ಬರು ಹಲವು ಪೋಸ್ ಗಳನ್ನು ನೀಡಿದ್ದಾರೆ. ಒಂದರಲ್ಲಿ ಇಬ್ಬರು ಪರಸ್ಪರರನ್ನು ನೋಡುತ್ತಿದ್ದರೆ, ಇನ್ನೊಂದರಲ್ಲಿ ಇಬ್ಬರು ನಗುತ್ತ ಕೈಗಳನ್ನು ಮೇಲಕ್ಕೆತ್ತಿರುವುದನ್ನು ಕಾಣಬಹುದು. ಮಗದೊಂದು ಫೋಟೊದಲ್ಲಿ ಅರ್ಜುನ್ ಅವರು ನಟ ಬಾಬಿ ಡಿಯೋಲ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Bigg Boss OTT: ಬಹಳ ಮುದ್ದಾಗಿದ್ದೀರಿ, ನನ್ನ ಬಾಳಿಗೆ ಬರುತ್ತೀರಾ? ಗುರೂಜಿಗೆ ಪ್ರಪೋಸ್ ಮಾಡಿದ 22 ವರ್ಷದ ಸಾನ್ಯಾ!

ಇವುಗಳಲ್ಲದೆ, ಕಾರ್ಯಕ್ರಮದ ಇನ್ನೂ ತರಾವರಿ ಚಿತ್ರಗಳು ಸಹ ಇಂಟರ್ನೆಟ್ಟಿನಲ್ಲಿ ಹರಿದಾಡುತ್ತಿವೆ. ಒಂದರಲ್ಲಿ ಮೆಟ್ಟಿಲುಗಳ ಮೇಲೆ ನಿಂತಿರುವ ಅರ್ಜುನ್-ಕಾರ್ಲಾ ಜೋಡಿ ನೋಡಬಹುದಾದರೆ ಇನ್ನೊಂದರಲ್ಲಿ ಈ ಜೋಡಿ ಆನಂದಮಯವಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಅರ್ಜುನ್ ಕಾನೂನ್ಗೊ ಅವರು ತಮ್ಮ ದೀರ್ಘ ಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದಿದ್ದು ಸಂತಸದಿಂದಿದ್ದಾರೆ ಎಂದು ಹೇಳಿದರೆ ತಪ್ಪಾಗದು.

ಕರಣ್ ಜೋಹರ್ ರೆಸ್ಟೋರೆಂಟ್ 'ನಿವೂಮಾ' ದಲ್ಲಿ ಇಂದು ಆರತಕ್ಷತೆ ಸಮಾರಂಭ

ಆಗಸ್ಟ್ 11 ಅಂದರೆ ಇಂದು ಅರ್ಜುನ್ ಹಾಗೂ ಕಾರ್ಲಾ ಅವರ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿದೆ. ವರದಿಗಳ ಪ್ರಕಾರ, ಈ ಸಮಾರಂಭವನ್ನು ಕರಣ್ ಜೋಹರ್ ಅವರ ದಕ್ಷಿಣ ಮುಂಬೈನಲ್ಲಿರುವ ರೆಸ್ಟೋರೆಂಟ್ ಆದ 'ನಿವೂಮಾ' ದಲ್ಲಿ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ 'ಇವನಿಂಗ್ ಎಲಿಗನ್ಸ್ ' ಎಂಬ ಥೀಮ್ ಇಡಲಾಗಿದೆ.

ಇದನ್ನೂ ಓದಿ:  Actress Ankita: ಸಪ್ತಪದಿ ತುಳಿದ ಕಮಲಿ ಬೆಸ್ಟ್ ಪ್ರೆಂಡ್ ನಿಂಗಿ, ಅಂಕಿತಾ ಮದುವೆಯಾಗಿದ್ದು ಯಾರನ್ನು?

ಪಿಂಕ್ ವಿಲಾ ಎಂಬ ಮಾಧ್ಯಮ ವರದಿ ಮಾಡಿರುವಂತೆ ಈ ಸಮಾರಂಭಕ್ಕಾಗಿ ಹಲವಾರು ಘಟಾನುಘಟಿ ಬಾಲಿವುಡ್ ನಟರಿಗೆ ಆಮಂತ್ರಣ ನೀಡಲಾಗಿದೆ. ಆಮಂತ್ರಿತರಲ್ಲಿ ದಿಗ್ಗಜ ಹೆಸರುಗಳಾದ ಸಲ್ಮಾನ್ ಖಾನ್, ವರುಣ್ ಧವನ್, ಬಾಬಿ ಡಿಯೋಲ್, ಶ್ರದ್ಧಾ ಕಪೂರ್ ಇತ್ಯಾದಿಗಳ ಹೆಸರು ಕೇಳಿಬಂದಿದೆ. ಅರ್ಜುನ್ ಅವರ ಫುರ್ಸತ್ ವಿಡಿಯೋದಲ್ಲಿ ಅಭಿನಯಿಸಿದ್ದ ನಟಿ ಸೋನಲ್ ಚೌಹಾಣ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
Published by:Ashwini Prabhu
First published: