HOME » NEWS » Entertainment » SINGA PENNE SONG FROM VIJAYS NEW FILM BIGIL LEAKED ONLINE HAS

Bigil: ವಿಜಯ್​ ನಟನೆಯ ‘ಸಿಂಗ ಪೆನ್ನೆ‘ ಎಂಬ ಹಾಡು ಲೀಕ್​; ಬೇಸರ ವ್ಯಕ್ತಪಡಿಸಿದ ಚಿತ್ರತಂಡ

ವಿಜಯ್​ ಮತ್ತು ನಯನ ತಾರಾ ನಟನೆಯ ಬಿಗಿಲ್​ ಚಿತ್ರ ಸೆಟ್ಟೇರುವ ಮುನ್ನವೇ ಚಿತ್ರದ ಆಡಿಯೋವೊಂದು ಲೀಕ್​ ಆಗಿದೆ. ವಿವೇಕ್​ ಬರೆದಿರುವ ‘ಸಿಂಗ ಪೆನ್ನೆ‘ ಹೆಸರಿನ ಮೊಟಿವೇಷನಲ್​ ಹಾಡು ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಆಗಿದೆ.

news18
Updated:July 18, 2019, 10:31 PM IST
Bigil: ವಿಜಯ್​ ನಟನೆಯ ‘ಸಿಂಗ ಪೆನ್ನೆ‘ ಎಂಬ ಹಾಡು ಲೀಕ್​; ಬೇಸರ ವ್ಯಕ್ತಪಡಿಸಿದ ಚಿತ್ರತಂಡ
ಬಿಗಿಲ್​ ಸಿನಿಮಾದ ಪೋಸ್ಟರ್​
  • News18
  • Last Updated: July 18, 2019, 10:31 PM IST
  • Share this:
ತಮಿಳಿನ ದಳಪತಿ ವಿಜಯ್​ ನಟನೆಯ ಬಿಗಿಲ್ ಚಿತ್ರ ಸದ್ಯದಲ್ಲೇ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಅಟ್ಲಿ ಕುಮಾರ್​ ನಿರ್ದೇಶಿಸುತ್ತಿರುವ ಈ ಸಿನೆಮಾದ ಶೂಟಿಂಗ್​​ ಬಹುತೇಕ ಪೂರ್ಣಗೊಂಡಿದ್ದು, ಆಡಿಯೋ ಲಾಂಚ್​ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೀಗ ಆಡಿಯೋ ಬಿಡುಗಡೆ  ಮುನ್ನವೇ ಬಿಗಿಲ್​ ಚಿತ್ರದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಆಗಿದ್ದು, ಚಿತ್ರತಂಡಕ್ಕೆ ಅಚ್ಚರಿ ತಂದಿದೆ.

ವಿಜಯ್​ ಮತ್ತು ನಯನ ತಾರಾ ನಟನೆಯ ಚಿತ್ರ ಬಿಗಿಲ್​. ಈ ಚಿತ್ರಕ್ಕೆ ವಿವೇಕ್​ ಬರೆದಿರುವ ‘ಸಿಂಗ ಪೆನ್ನೆ‘ ಹೆಸರಿನ ಮೊಟಿವೇಷನಲ್​ ಸಾಂಗ್​​ ಸಾಮಾಜಿಕ ಜಾಲತಾಣದಲ್ಲಿ ಆಗಲೇ ಲೀಕ್​ ಆಗಿ ವೈರಲ್​​ ಆಗಿದೆ. ಇದಕ್ಕೆ ಸಂಗೀತ ಸಂಯೋಜನೆ ಖ್ಯಾತ ಮ್ಯೂಸಿಕ್​​ ಡೈರೆಕ್ಟರ್​​ ಎ.ಆರ್​ ರೆಹಮಾನ್ ಹಾಡಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ರಾಜ್ಯಪಾಲರು; ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತಿಗೆ ಗಡುವು ನಿಗದಿ

ಮರ್ಸಲ್​ ಚಿತ್ರದಲ್ಲಿ ವಿಜಯ್​ ಹಾಗೂ ರೆಹಮಾನ್​ ಹಾಡಿರುವ ‘ಇಲ್ಲಾ ಪುಗಾಜುಮ್​ ಒರುವಾನುಕೆ‘, ‘ಅಜಾಗಿಯಾ ತಮೀಜ್​ ಮಗನ್​‘ ಹಾಗೂ ‘ಆಲಪೂರನ್​ ತಮೀಜನ್‘​ ಹಾಡಿನಂತೆ ಈ ಹಾಡು ಕೂಡ ಮೋಟಿವೇಷನಲ್​​ ಆಗಿದೆ. ಆದರೆ ಆಡಿಯೋ ಲಾಂಚ್​ ಆಗುವ ಮುನ್ನವೇ ಲೀಕ್​ ಆಗಿರುವ ಕುರಿತು ಬಿಗಿಲ್​ ಚಿತ್ರತಂಡ ಬೇಸರ ವ್ಯಕ್ತ ಪಡಿಸಿದೆ. ಇದರಿಂದ ಎಚ್ಚೆತ್ತ ಚಿತ್ರತಂಡ ಕೂಡಲೇ ಸಾಮಾಜಿಕ ತಾಣದಿಂದ ಲೀಕ್​​ ಆಡಿಯೋ ತೆಗೆದಿದ್ದಾರೆ.

First published: July 18, 2019, 10:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories