ನಟಿ ಸಿಂಧೂ ಲೋಕನಾಥ್ ಹೀಗೊಂದು ದಿನ ಸಿನಿಮಾ ನಿರ್ಮಾಪಕರ ವಿರುದ್ಧ ಗರಂ ಆಗಿದ್ದೇಕೆ?

news18
Updated:September 1, 2018, 2:08 PM IST
ನಟಿ ಸಿಂಧೂ ಲೋಕನಾಥ್ ಹೀಗೊಂದು ದಿನ ಸಿನಿಮಾ ನಿರ್ಮಾಪಕರ ವಿರುದ್ಧ ಗರಂ ಆಗಿದ್ದೇಕೆ?
news18
Updated: September 1, 2018, 2:08 PM IST
ನ್ಯೂಸ್​ 18 ಕನ್ನಡ 

ಚಂದನವನದಲ್ಲಿ ಆಗಾಗ ಕಲಾವಿದರು ಹಾಗೂ ನಿರ್ಮಾಪಕರ ನಡುವೆ ಜಗಳ ಮನಸ್ತಾಪ ಆಗುತ್ತಲೇ ಇರುತ್ತದೆ. ಅದರಲ್ಲೂ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ನೀಡುವ ಸಂಭಾವನೆ ವಿಷಯದಲ್ಲೂ ಕೆಲವೊಮ್ಮೆ ಕಿರಿಕಿರಿಯಾಗುತ್ತದೆ.

ಈಗ ನಟಿ ಸಿಂಧೂ ವಿಷಯದಲ್ಲೂ ಆಗಿದ್ದು ಇದೆ. ಹೌದು 'ಹೀಗೊಂದು ದಿನ' ಚಿತ್ರದ ನಿರ್ಮಾಪಕ ಚಂದ್ರಶೇಖರ್​ ವಿರುದ್ದ ನಟಿ ಸಿಂಧೂ ಲೋಕನಾಥ್ ದೂರು ನೀಡಿದ್ದಾರೆ. ಈ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕಾಗಿ ಎರಡು ಲಕ್ಷ ಸಂಭಾವನೆಯನ್ನು ಚೆಕ್​ ರೂಪದಲ್ಲಿ ನೀಡಿದ್ದರು ಚಂದ್ರಶೇಖರ್​.

ಈ ಚೆಕ್​ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಅದು ಬೌನ್ಸ್​ ಆಗಿದೆಯಂತೆ. ಈ ಸಿನಿಮಾ ಮಾರ್ಚ್​ನಲ್ಲೇ ತೆರೆ ಕಂಡರೂ ಇನ್ನೂ ಸಿನಿಮಾಗಾಗಿ ನೀಡಿದ್ದ ಸಂಭಾವನೆ ಹಣ ಮಾತ್ರ ಸಿಕ್ಕಿಲ್ಲವೆಂದು ಸಿಂಧೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಚೆಕ್​ ಬೌನ್ಸ್​ ಪ್ರಕರಣ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದಿದೆ.

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...