ಚಂದ್ರಮುಖಿ-2 ಸಿನಿಮಾದಲ್ಲಿ ನಟಿ ಜ್ಯೋತಿಕಾ ನಟಿಸೋದಿಲ್ಲವಂತೆ!; ಹಾಗಿದ್ದರೆ ಮತ್ಯಾರು?

Chandramukhi 2: ಇದೀಗ ಕಾಲಿವುಡ್​ನಲ್ಲಿ ‘ಚಂದ್ರಮುಖಿ-2‘ ಸಿನಿಮಾವನ್ನು ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ. ಸನ್​ಪಿಕ್ಚರ್ಸ್​​ನಡಿಯಲ್ಲಿ ಪಿ ವಾಸು ಅವರೇ ನಿರ್ದೇಶನವನ್ನು ಮಾಡುತ್ತಿದ್ದಾರಂತೆ. ರಾಘವ ಲಾರೆನ್ಸ್​​ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜ್ಯೋತಿಕಾ

ಜ್ಯೋತಿಕಾ

 • Share this:
  1993 ಡಿಸೆಂಬರ್​ 23 ರಂದು ಮಲಯಾಳಂನಲ್ಲಿ ‘ಮಣಿಚಿತ್ರ ತಾರಂ‘ ಸಿನಿಮಾ ಬಿಡುಗಡೆಗೊಂಡು ದೊಡ್ಡ ಹಿಟ್​ ಆಗಿತ್ತು. ಮಧು ಮತ್ತಣ್ಣ ಬರೆದ ಕಥೆ, ಫಾಝಿಲ್​ ಆ್ಯಕ್ಷನ್​ ಕಟ್​ನಲ್ಲಿ​ ಮೂಡಿಬಂದ ಈ ಸಿನಿಮಾದಲ್ಲಿ ನಟ ಮೊಹನ್​ಲಾಲ್​, ನಟಿ ಶೋಭನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಲಿವುಡ್​​ನಲ್ಲಿ ಹಿಟ್​ ಆಗಿದ್ದ ಈ ಸಿನಿಮಾ ಆನಂತರ ಕನ್ನಡ, ತಮಿಳು, ತೆಲುಗಿಗೂ ರಿಮೇಕ್​ ಆಯಿತು. 

  ಕನ್ನಡದಲ್ಲಿ ‘ಆಪ್ತಮಿತ್ರ‘ ಎಂಬ ಟೈಟಲ್​ನಡಿಯಲ್ಲಿ ಸಿನಿಮಾ ತೆರೆಗೆ ಬಂತು. ಡಾ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದರು​. ನಟಿ ಸೌಂದರ್ಯ ಅವರು ಗಂಗಾ ಹಾಗೂ ನಾಗವಲ್ಲಿ ಪಾತ್ರದಲ್ಲಿ ಮಿಂಚಿದ್ದರು.

  ನಂತರ ಈ ಸಿನಿಮಾ ತಮಿಳಿನಲ್ಲೂ ರಿಮೇಕ್​ ಆಯಿತು. ‘ಚಂದ್ರಮುಖಿ‘ಟೈಟಲ್​ನಲ್ಲಿ ಸಿನಿಮಾ ತೆರೆಗೆ ಬಂತು. ಸೂಪರ್​ ಸ್ಟಾರ್​ ರಜನಿಕಾಂತ್​​​ ನಾಯಕಿನಾಗಿ ಕಾಣಿಸಿಕೊಂಡರೆ. ಜ್ಯೋತಿಕಾ ನಾಗವಲ್ಲಿ ಪಾತ್ರವನ್ನು ಮಾಡಿದ್ದರು.

  ಇದೀಗ ಕಾಲಿವುಡ್​ನಲ್ಲಿ ‘ಚಂದ್ರಮುಖಿ-2‘ ಸಿನಿಮಾವನ್ನು ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ. ಸನ್​ ಪಿಕ್ಚರ್ಸ್​​ನಡಿಯಲ್ಲಿ ಪಿ ವಾಸು ಅವರೇ ನಿರ್ದೇಶನವನ್ನು ಮಾಡುತ್ತಿದ್ದಾರಂತೆ. ರಾಘವ ಲಾರೆನ್ಸ್​​ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಇನ್ನು ಚಂದ್ರಮುಖಿ- 2 ಸಿನಿಮಾದಲ್ಲಿ ಜ್ಯೋತಿಕಾ ನಡೆಸುತ್ತಿದ್ದಾರೆ ಎಂಬ  ಮಾತುಗಳು ಕೇಳಿಬಂದಿದ್ದವು. ಆದರೆ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ‘ಈಗ ಮತ್ತೆ ಗಂಗಾ ಹಾಗೂ ಚಂದ್ರಮುಖಿ ಪಾತ್ರ ಮಾಡಲಾರೆ. ನನ್ನ ಜಾಗಕ್ಕೆ ನಟಿ ಸಿಮ್ರನ್​ ಸೂಕ್ತ‘ ಎಂದು ಹೇಳಿದ್ದಾರೆ.

  15 ವರ್ಷಗಳ ಹಿಂದೆ ‘ಚಂದ್ರಮುಖಿ‘ ಸಿನಿಮಾಗೆ ನಟಿ ಸಿಮ್ರನ್​​ ಆಯ್ಕೆಯಾಗಿದ್ದರು. ಕನ್ನಡದಲ್ಲಿ ಸಿಂಹದ ಮರಿ ಸೈನಾ ಸಿನಿಮಾದಲ್ಲೂ ಕೂಡ ನಟಿಸಿದ್ದರು. ಆದರೆ ‘ಚಂದ್ರಮುಖಿ‘ ಸಿನಿಮಾ ಚಿತ್ರೀಕರಣ ವೇಳೆ ಸಿಮ್ರನ್​ ಗರ್ಭಿಣಿಯಾಗಿದ್ದರಿಂದ ನಟಿಸಲು ಆಗಿರಲಿಲ್ಲ. ಇದೀಗ ಕಾಲಿವುಡ್​ನಲ್ಲಿ ಕೇಳಿಬಂದಿರುವ ಮಾಹಿತಿ ಪ್ರಕಾರ ಸಿಮ್ರನ್​​ ಚಂದ್ರಮುಖಿ-2 ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರಂತೆ!.

  ಸ್ಮಾರ್ಟ್​ಫೋನ್​ನಲ್ಲಿ ಜಾಹೀರಾತು ಕಿರಿಕಿರಿ ನೀಡುತ್ತಿದೆಯಾ? ತಪ್ಪಿಸಲು ಹೀಗೆ ಮಾಡಿ

  ನಿಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಕಡಿಮೆಯೇ?; ಹಾಗಿದ್ದರೆ ಇದನ್ನು ಟ್ರೈ ಮಾಡಿ
  First published: