ಸೂಪರ್ ​ಸ್ಟಾರ್​ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ತ್ರಿಷಾ-ಸಿಮ್ರನ್​..!

news18
Updated:August 22, 2018, 5:34 PM IST
ಸೂಪರ್ ​ಸ್ಟಾರ್​ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ತ್ರಿಷಾ-ಸಿಮ್ರನ್​..!
news18
Updated: August 22, 2018, 5:34 PM IST
ನ್ಯೂಸ್​18 ಕನ್ನಡ 

ದಕ್ಷಿಣ ಭಾರತದ ಸ್ಟಾರ್ ಚೆಲುವೆ ಸಿಮ್ರನ್ ಹಾಗೂ ತ್ರಿಷಾ​ ಇಲ್ಲಿನ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಸಿಮ್ರನ್​ 90ರ ದಶಕದಲ್ಲಿ ಕಾಲಿವುಡ್​ ಅನ್ನು ಆಳಿದ ಚೆಲುವೆ. ಇನ್ನೂ ತ್ರಿಷಾ ಕನ್ನಡದಲ್ಲಿ ಪವರ್​ಸ್ಟಾರ್​ ಪುನೀತ್‍ರಾಜ್‍ಕುಮಾರ್ ಜೊತೆ ಹಾಗೂ ಹಿಂದಿಯಲ್ಲಿ ಅಕ್ಷಯ್​ ಕುಮಾರ್​ ಜತೆ ನಟಿಸಿದ್ದಾರೆ. ಆದರೆ ಈ ಇಬ್ಬರು ಚೆಲುವೆಯರು ಕಮಲ್​ ಹಾಸನ್​ ಜತೆ ಈ ಹಿಂದೆ ಹಲವಾರು ಸಿನಿಮಾಗಳಲ್ಲೂ ಒಟ್ಟಿಗೆ ಅಭಿನಯಿಸಿದ್ದಾರೆ. ಆದರೆ ಅದ್ಯಾಕೋ ಏನೋ ಈ ಇಬ್ಬರು ನಟಿಯರಿಗೆ ಆ ಒಬ್ಬ ಸೂಪರ್​ ಸ್ಟಾರ್​ ಜೊತೆ ನಟಿಸೋ ಕಾಲವೇ ಕೂಡಿ ಬಂದಿರಲಿಲ್ಲ.

ತ್ರಿಷಾ ಹಾಗೂ ಸಿಮ್ರನ್​ ತಮಿಳು ಚಿತ್ರರಂಗದಲ್ಲಿ ಮಿಂಚಿ ಮೆರೆದಾಡಿದ ಸುಂದರಿಯರು. ಕೇವಲ ಪ್ರತಿಭೆಯನ್ನೇ ಬಂಡವಾಳವಾಗಿಸಿಕೊಂಡು ಕಾಲಿವುಡ್‍ಗೆ ಕಾಲಿಟ್ಟ ಇವರು ಸ್ಟಾರ್ ನಟಿಯರಾಗಿ ಮಿಂಚಿದ್ದು ಇತಿಹಾಸ. ಇನ್ನು ತಮಿಳಿನ ಬಹುತೇಕ ತಾರೆಯರಿಗೆ ಜೋಡಿಯಾಗಿದ್ದ ತ್ರಿಷಾ ಹಾಗೂ ಸಿಮ್ರನ್​ಗೆ ತಲೈವಾ ರಜಿನಿಗೆ ಜೋಡಿಯಾಗೋ ಅವಕಾಶ ಸಿಕ್ಕಿರಲಿಲ್ಲ.

ರಜಿನಿ ಜೊತೆ ನಟಿಸೋದು ಎಂಥವರಿಗೂ ಒಂದು ಕನಸು. ಇಷ್ಟು ವರ್ಷ ತಮಿಳು ಚಿತ್ರರಂಗದಲ್ಲೇ ಹೆಚ್ಚು ನಟಿಸಿದರೂ ತಲೈವಾ ಜೊತೆ ನಟಿಸೋ ಅವಕಾಶವೇ ಸಿಗದಿದ್ದರೆ ಸಹಜವಾಗಿಯೇ ಬೇಸರವಿರುತ್ತದೆ. ಈಗ ಆ ಬೆಸರಕ್ಕೆ ಬ್ರೇಕ್ ಬಿದ್ದಿದೆ. ಹೌದು ಮೊದಲ ಬಾರಿಗೆ ಸಿಮ್ರನ್​ ಹಾಗೂ ತ್ರಿಷಾ ರಜನಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ತಲೈವಾ ಜೊತೆ ನಟಿಸುತ್ತಿರುವುದಾಗಿ ತ್ರಿಷಾ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.ಇನ್ನು ರಜಿನಿಕಾಂತ್ ಸಿನಿಮಾ ಯಾವುದು ಅನ್ನೋದು ಇಲ್ಲಿ ಮತ್ತೊಂದು ಕುತೂಹಲ. ರಜಿನಿ 'ಕಾಲ' ಮತ್ತು 'ರೋಬೋ' ನಂತರ ಸಿನಿಮಾ ಮಾಡಲ್ಲ ರಾಜಕೀಯಕ್ಕೆ ಧುಮುಕುತ್ತಾರೆ. ಮತ್ತೆ ಸಿನಿಮಾ ಮಾಡೋಲ್ಲ ಅನ್ನೋ ಸುದ್ದಿಯಾಗಿತ್ತು ಆದರೆ ಈಗ ತ್ರಿಷಾ ಕೊಟ್ಟಿರೋ ಸುದ್ದಿಯಿಂದ ರಜಿನಿ ಇನ್ನು ಸಿನಿಮಾಗಳನ್ನು ಮಾಡುತ್ತಾರೆ ಅನ್ನೋದು ಖಚಿತವಾಗಿದೆ.

 ಸನ್​ ಪಿಕ್ಚರ್ಸ್​ ಅವರ ಮುಂದಿನ ಸಿನಿಮಾದಲ್ಲಿ ರಜನಿ, ಸಿಮ್ರನ್​ ಹಾಗೂ ತ್ರಿಷಾ ತೆರೆ ಹಂಚಿಕೊಳ್ಳಲಿದ್ದಾರೆ. ಕಾರ್ತಿಕ್​ ಸುಬ್ಬರಾಜು ಅವರ ಈ ಸಿನಿಮಾದಲ್ಲಿ ಹಿಂದಿಯ ನವಾಜುದ್ದೀನ್​ ಸಿದ್ದಿಕಿ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷ.

ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಡಾರ್ಜಿಲಿಂಗ್​ನ ರೇಂಜರ್​ ಕಾಲೇಜಿನಲ್ಲಿ ಹಾಗೂ ಎರಡನೇ ಹಂತದ ಚಿತ್ರೀಕರಣ ಡೆಹ್ರಾಡೂನ್​ನಲ್ಲಿ ನಡೆಯಲಿದೆ. ಉಳಿದಂತೆ ಮೂರನೇ ಹಂತದ ಚಿತ್ರೀಕರಣ ಚೆನ್ನೈನ ರೆಡ್​ ಹಿಲ್​ನಲ್ಲಿ ನಡೆಯಲಿದೆ. ಇಲ್ಲಿ ಎ.ಆರ್​. ರೆಹಮಾನ್​ ಅವರಿಗೆ ಸೇರಿದ ನೂರು ಏಕರೆ ಜಾಗದಲ್ಲಿ ಈಗಾಗಲೇ ಸಿನಿಮಾಗಾಗಿ ಸೆಟ್​ ನಿರ್ಮಾಣ ಕಾರ್ಯ ಆರಂಭವಾಗಿದೆ. ರಜನಿಯೊಂದಿಗೆ ರೆಹಮಾನ್​ ಅವರಿಗೆ ಇರುವ ಸಂಬಂಧದ ಕಾರಣ ಈ ಸ್ಥಳದಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದೆ.

ತಮಿಳು ಚಿತ್ರರಂಗದಲ್ಲಿ ಸಿಮ್ರನ್​ ಹಾಗೂ ತ್ರಿಷಾ ಕೂಡ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತ್ರಿಷಾ ಅಭಿಮಾನಿಗಳು ಯಾವಾಗ ತಮ್ಮ ನೆಚ್ಚಿನ ನಟಿಗೆ ತಲೈವಾ ಜೊತೆ ನಟಿಸೋ ಅವಕಾಶ ಸಿಕ್ಕುತ್ತೋ ಇಲ್ಲವೋ ಅಂದುಕೊಂಡಿದ್ದರು. ಈಗ ತ್ರಿಷಾ ಹಾಗೂ ಸಿಮ್ರನ್​ ಅಭಿಮಾನಿಗಳ ಜೊತೆ ರಜಿನಿ ಅಭಿಮಾನಿಗಳೂ ಖುಷಿ ಕೊಡುವ ಸುದ್ದಿ ಇದು.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...