HOME » NEWS » Entertainment » SIMMBA MOVIE JOINED 100 CRORE CLUB AND RANVEER SINGH MADE ANOTHER ANNOUNCEMENT

ಬಾಲಿವುಡ್​ನಲ್ಲಿ ಗೆದ್ದು ಬೀಗಿದ ‘ಸಿಂಬಾ’; ರಣವೀರ್ ಸಿಂಗ್​ ಅಭಿಮಾನಿಗಳಿಗೆ ಡಬಲ್ ಧಮಾಕ!

ಸಿಂಬಾ ಚಿತ್ರ ಯಶಸ್ಸು ಕಂಡ ಬೆನ್ನಲ್ಲೇ ರಣವೀರ್​ ಸಿಂಗ್​ ತಮ್ಮ ಮುಂದಿನ ಚಿತ್ರ ‘ಗಲ್ಲಿ ಬಾಯ್​’ನ ಲುಕ್​ ರಿಲೀಸ್​ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆ ಅಂಗವಾಗಿ ಈ ಚಿತ್ರ ಫೆ.14ರಂದು ತೆರೆಗೆ ಬರುತ್ತಿದೆ.

Rajesh Duggumane | news18
Updated:January 2, 2019, 12:48 PM IST
ಬಾಲಿವುಡ್​ನಲ್ಲಿ ಗೆದ್ದು ಬೀಗಿದ ‘ಸಿಂಬಾ’; ರಣವೀರ್ ಸಿಂಗ್​ ಅಭಿಮಾನಿಗಳಿಗೆ ಡಬಲ್ ಧಮಾಕ!
ರಣವೀರ್​ ಸಿಂಗ್​
  • News18
  • Last Updated: January 2, 2019, 12:48 PM IST
  • Share this:
ರಣವೀರ್​ ಸಿಂಗ್​ ನಟನೆಯ ‘ಸಿಂಬಾ’ ಚಿತ್ರ ಬಾಕ್ಸ್​​ ಆಫೀಸ್​ನಲ್ಲಿ ಗೆದ್ದು ಬೀಗಿದೆ. ನಾಲ್ಕೇ ದಿನಕ್ಕೆ 100 ಕೋಟಿ ರೂ. ಬಾಚಿಕೊಳ್ಳುವಲ್ಲಿ ‘ಸಿಂಬಾ’ ಯಶಸ್ವಿಯಾಗಿದೆ. ​ ಅಭಿಮಾನಿಗಳು ಈ ಖುಷಿಯಲ್ಲಿರುವಾಗಲೇ ರಣವೀರ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನು ಎಂಬುದನ್ನು ತಿಳಿಯಲು ಮುಂದೆ ಓದಿ.

ಜೂ.ಎನ್​ಟಿಆರ್​ ನಟನೆಯ ‘ಟೆಂಪರ್​’ ಚಿತ್ರವನ್ನು ಬಾಲಿವುಡ್​ಗೆ ರಿಮೇಕ್​ ಮಾಡಿದ್ದರು ನಿರ್ದೇಶಕ ರೋಹಿತ್​ ಶೆಟ್ಟಿ. ‘ಸಿಂಬಾ’ ವೀಕ್ಷಿಸಿದ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಬಾಲಿವುಡ್​ನಲ್ಲಿ ಮೊದಲ ದಿನ ಈ ಚಿತ್ರ 20.72 ಕೋಟಿ ಬಾಚಿತ್ತು. ಶನಿವಾರ 23.33 ಕೋಟಿ ರೂ., ಭಾನುವಾರ 31.06 ಕೋಟಿ ರೂ ಹಾಗೂ ಸೋಮವಾರ 21.24 ಕೋಟಿ ರೂ. ಗಳಿಕೆ ಮಾಡಿಕೊಳ್ಳುವ ಮೂಲಕ ಸಿನಿಮಾ 100 ಕೋಟಿ ಕ್ಲಬ್​ ಸೇರಿದೆ.

ಚಿತ್ರ ಯಶಸ್ಸು ಕಂಡ ಬೆನ್ನಲ್ಲೇ ರಣವೀರ್​ ಸಿಂಗ್​ ತಮ್ಮ ಮುಂದಿನ ಚಿತ್ರ ‘ಗಲ್ಲಿ ಬಾಯ್​’ನ ಫಸ್ಟ್​ ಲುಕ್​ ರಿಲೀಸ್​ ಮಾಡಿಕೊಂಡಿದ್ದಾರೆ. ಪ್ರತಿ ಚಿತ್ರದಲ್ಲೂ ರಣವೀರ್​ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಚಿತ್ರದಲ್ಲಿ ಅವರ ಅವತಾರ ಸಂಪೂರ್ಣವಾಗಿ ಬದಲಾಗಿದೆ. ಈ ಚಿತ್ರದಲ್ಲಿ ರಣವೀರ್​ಗೆ ಜೊತೆಯಾಗಿ ಆಲಿಯಾ ಭಟ್​ ಇದ್ದಾರೆ. ಇಬ್ಬರೂ ಡಿ-ಗ್ಲಾಮ್​ ಅವತಾರ ತಾಳಿದ್ದಾರೆ.

ಇದನ್ನೂ ಓದಿ: ಕುಂಬಳಕಾಯಿ ಒಡೆಯುವ ಖುಷಿಯಲ್ಲಿ 'ಯಜಮಾನ'; ಶೀಘ್ರ ತೆರೆಗೆ ಬರಲಿದೆ ದರ್ಶನ್​ ಸಿನಿಮಾ 
View this post on Instagram
 

❤🎧 #GullyBoy #14thFeb @ritesh_sid @zoieakhtar @faroutakhtar @excelmovies #TigerBaby @aliaabhatt @zeemusiccompany


A post shared by Ranveer Singh (@ranveersingh) on


ಗಲ್ಲಿ ಗಲ್ಲಿಗಳಲ್ಲಿ ರಾಪ್​ ಹಾಡುಗಳನ್ನು ಹಾಡುತ್ತಾ ಇರುವ ಯುವಕ ನಂತರ ಹೆಚ್ಚು ಪ್ರಖ್ಯಾತಿ ಪಡೆದುಕೊಳ್ಳುತ್ತಾನೆ. ಇದು ಚಿತ್ರದ ಒಂದೆಳೆ. ರಾಪರ್​ ಡಿವೈನ್​ ಅವರ ಜೀವನ ಆಧರಿಸಿ ‘ಗಲ್ಲಿ ಬಾಯ್​’ ಸಿನಿಮಾ ಸಿದ್ಧಗೊಂಡಿದೆ. ಪ್ರೇಮಿಗಳ ದಿನಾಚರಣೆ ಅಂಗವಾಗಿ ಈ ಚಿತ್ರ ಫೆ.14ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಎಂಗೇಜ್​ ಆದ 'ವಿಲನ್' ಬೆಡಗಿ; ಪ್ರಿಯಕರನೊಂದಿಗಿನ ಫೋಟೋ ಹಾಕಿ ಹೊಸ ಸುದ್ದಿ ಕೊಟ್ಟ ಆ್ಯಮಿ ಜಾಕ್ಸನ್First published: January 2, 2019, 12:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories