ಸಿನಿಮಾ ಕಲಾವಿದರ ಜೀವನ ಸಖತ್ ಕಲರ್ಫುಲ್(Colorful) ಆಗಿರುತ್ತೆ. ಅವರಿಗೇನು ಕಡಿಮೆ ಎಲ್ಲವೂ ಕಾಲಿನ ಬಳಿ ಬರುತ್ತೆ ಎಂದು ಅದೆಷ್ಟೋ ಜನರು ಅಂದುಕೊಂಡಿದ್ದೇವೆ. ಸಿನಿಮಾ ಅಂದರೆ ಫ್ಯಾಂಟಸಿ ವರ್ಲ್ಡ್(Fantasy World) ಎಂಬ ಭಾವನೆ ಹಲವರಲ್ಲಿದೆ. ಪರದೆ ಮೇಲೆ ಕಾಣುವ ಹೀರೋ(Hero)ಗಳ ಕಲರ್ಫುಲ್ ಜಗತ್ತು ಪರದೆ(Screen) ಹಿಂದೆ ಇರುವುದಿಲ್ಲ. ಒಬ್ಬ ನಟ ಸ್ಟಾರ್(Star) ಆಗಬೇಕು, ಅಪಾತ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಬೇಕು ಅಂದರೆ ತಮಾಷೆಯ ಮಾತಲ್ಲ. ಹಲವಾರು ವರ್ಷಗಳ ಶ್ರಮ ಪಡಬೇಕು. ಎಲ್ಲ ಕ್ಷೇತ್ರಗಳಲ್ಲೂ ಇರುವಂತೆಯೆ ಇಲ್ಲೂ ರಾಜಕೀಯ(Politics) ಇದೆ. ಹಲವುರು ಮೇಲೆ ಹೋಗುತ್ತಿರುವ ನಟನ ಕಾಲೆಳೆಯಲು ಕಾಯುತ್ತಾ ಇರುತ್ತಾರೆ. ಬಾಲಿವುಡ್(Bollywood)ನಲ್ಲಿ ಇದು ಹೆಚ್ಚಿದೆ. ನಟ ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಅವರಿಗೆ ಆದ ಅನ್ಯಾಯ ಎಲ್ಲರಿಗೂ ಗೊತ್ತೆ ಇದೆ. ಇದೀಗ ಈ ಪ್ರವೃತ್ತಿ ಕಾಲಿವುಡ್(Kollywood)ಗೂ ಕಾಲಿಟ್ಟಿದೆ. ತಮಿಳು ಸ್ಟಾರ್ ನಟ ಸಿಂಬು(Simbu) ಅವರಿಗೂ ಇಂಥದ್ದೇ ಸಮಸ್ಯೆಗಳು ಎದುರಾಗಿದೆ. ಈ ಬಗ್ಗೆ ಸ್ವತಃ ಸಿಂಬು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
‘ಮಾನಾಡು’ ಪ್ರೀ ರಿಲೀಸ್ ಇವೆಂಟ್ನಲ್ಲಿ ಕಣ್ಣೀರು
ತಮಿಳುನಾಡು ಚಿತ್ರರಂಗಕ್ಕೆ ಸಿಂಬು ಬಾಲನಟನಗಾಗಿ ಎಂಟ್ರಿಕೊಟ್ಟಿದ್ದರು.ಇಲ್ಲಿಯವರೆಗೆ ಅನೇಕ ಸಿನಿಮಾ ನಟ ಸಿಂಬು ನಟಿಸಿ ಸೈ ಎನಿಸಿಕೊಂಡವರು. ಆದರೆ ಸಿನಿಮಾಗಳ ಜೊತೆ ಹೆಚ್ಚು ಕಾಂಟ್ರವರ್ಸಿ ಇವರನ್ನು ಸುತ್ತುಕೊಂಡಿತ್ತು. ಸಿಂಬು ಅವರಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುನಿರೀಕ್ಷಿತ ‘ಮಾನಾಡು’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಆರಂಭದಲ್ಲಿ ಈ ಚಿತ್ರದ ನಿರ್ಮಾಪಕರ ಜೊತೆಗೂ ಸಿಂಬು ಕಿರಿಕ್ ಮಾಡಿಕೊಂಡು ಚಿತ್ರತಂಡದಿಂದ ಹೊರನಡೆದಿದ್ದರು. ಮತ್ತೆ ಸಂಧಾನ ಮಾಡಿಕೊಂಡು ಚಿತ್ರತಂಡವನ್ನು ಸೇರಿಕೊಂಡರು. ಈಗ ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದಿದೆ. ಆ ವೇದಿಕೆಯಲ್ಲಿ ಸಿಂಬು ಕಣ್ಣೀರು ಹಾಕಿದ್ದಾರೆ. ಎಲ್ಲರ ಮುಂದೆಯೂ ಕಣ್ಣೀರು ಹಾಕಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.
STR Simbu emotional speech at Maanaadu Audio Launch
ಇದನ್ನು ಓದಿ : KGF Chapter 2 ಬಿಡುಗಡೆಗೆ ಅಡ್ಡಗಾಲಾದ ಅಮೀರ್ ಖಾನ್ ಅಭಿನಯದ Laal Singh Chaddha..!
ಸಖತ್ ಎಮೋಷನಲ್ ಆದ ಸಿಂಬು
‘ಮಾನುಡು’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಸಿಂಬು ಮತನಾಡಲು ಶುರುಮಾಡಿದ್ದಾರೆ. ಮೊದಲಿನಿಂದಲೂ ಕಾಲಿವುಡ್ನಲ್ಲಿ ಸಿಂಬು ಅವರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರಂತೆ. ಆದರೆ ಇಲ್ಲಿವರೆಗೂ ಯಾರ ಹೆಸರನ್ನು ಬಹಿರಂಗ ಪಡಿಸಿಲ್ಲ.
‘ನಾನು ತುಂಬ ಸಮಸ್ಯೆ ಎದುರಿಸಿದ್ದೇನೆ. ಅವರು ತೊಂದರೆ ಕೊಡುತ್ತಲೇ ಇದ್ದಾರೆ. ಅವೆಲ್ಲವನ್ನೂ ನಾನು ಪರಿಹರಿಸಿಕೊಳ್ಳುತ್ತೇನೆ. ನೀವು ನನ್ನನ್ನು ಕೇರ್ ಮಾಡಿ’ ಎಂದು ಅಭಿಮಾನಿಗಳಲ್ಲಿ ಸಿಂಬು ಮನವಿ ಮಾಡಿಕೊಂಡಿದ್ದಾರೆ. ಸಿಂಬು ಅವರಿಗೆ ಸಿನಿಮಾ ಮಂದಿ ಹಾಗೂ ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆಯಾಗುತ್ತಿದೆ ಎಂದ ಅವರ ಫ್ಯಾನ್ಸ್ ಹೇಳಿಕೊಂಡಿದ್ದಾರೆ.
ಇದನ್ನು ಓದಿ : ನೆಟ್ಫ್ಲಿಕ್ಸ್ನಲ್ಲಿ ಅತಿಹೆಚ್ಚು ವೀಕ್ಷಿಸಿದ ಸಿನಿಮಾ `ರೆಡ್ ನೋಟಿಸ್‘, ಸೀರಿಸ್ `ಸ್ಕ್ವಿಡ್ ಗೇಮ್’ !
ಕನ್ನಡಿಗರ ಮನಗದ್ದಿದ್ದ ನಟ ಸಿಂಬು
ಈ ಹಿಂದೆ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದ ಸಿಂಬು ಕನ್ನಡಿಗರ ಮನ ಗೆದ್ದಿದ್ದರು. ಕಾವೇರಿ ನೀರಿನ ಬಗ್ಗೆ ಸಿಂಬು ಹೇಳಿಕೆ ಹೃದಯಸ್ಪರ್ಶಿ ಆಗಿತ್ತು. ಅವರ ಪ್ರತಿ ಮಾತು ಕನ್ನಡಭಿಮಾನಿಗಳ ಮನಸು ಮುಟ್ಟಿತ್ತು. ಒಬ್ಬ ಕಾಲಿವುಡ್ ಸ್ಟಾರ್ ನಟನಾದರೂ ಕನ್ನಡದ ಬಗ್ಗೆ ಅವರು ಆಡಿದ ಮಾತುಗಳು ಕರ್ನಾಟಕದ ಜನರಿಗೆ ಬಹಳ ಇಷ್ಟ ಆಗಿತ್ತು. ‘ಕಾವೇರಿ ಹೋರಾಟ ನಡೆಯುತ್ತಲೇ ಇದೆ. ಆದರೆ ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ. ಈ ಪ್ರಪಂಚದಲ್ಲಿ ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯ ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ. ನಾವು ಯಾರೊಂದಿಗೂ ಜಗಳ ಮಾಡಬಾರದು. ಕರ್ನಾಟಕದವರೇನಾದರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ದಾರಾ? ಎಂದು ಸಿಂಬು ಮಾತನಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ