Simba: ಸ್ಯಾಂಡಲ್‍ವುಡ್ ಸೆಲೆಬ್ರಿಟಿ ಡಾಗ್ ಸಿಂಬಾ ಅಲಿಯಾಸ್ ಗುಂಡನ ನೆನಪುಗಳು

ನಾನು ಮತ್ತು ಗುಂಡ ಸಿನಿಮಾದಲ್ಲಿ, ಗುಂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಷ್ ಲ್ಯಾಬ್ರಡಾರ್ ಸಿಂಬಾ ಇತ್ತೀಚಿಗೆ ಕೊನೆ ಉಸಿರು ಎಳೆದಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಹಲವಾರು ಪ್ರಾಣಿ ಪ್ರಿಯರು ಮತ್ತು ಸಿನಿಮಾ ಪ್ರೇಕ್ಷಕರು ಸಿಂಬಾ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು. ಆದರೆ ಸಿಂಬಾನ ಮಾಲೀಕ ವರುಣ್ ಮತ್ತು ಟ್ರೈನರ್ ಸ್ವಾಮಿ ಅವರಿಗೆ ಮಾತ್ರ ಇನ್ನೂ ಕೂಡ ತಮ್ಮ ಕಣ್ಮಣಿ ಸಿಂಬಾನ ನಿಧನದ ಶೋಕದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲವಂತೆ.

ಸಿಂಬಾ ಅಲಿಯಾಸ್ ಗುಂಡ

ಸಿಂಬಾ ಅಲಿಯಾಸ್ ಗುಂಡ

  • Share this:
ನಾನು ಮತ್ತು ಗುಂಡ ಸಿನಿಮಾದಲ್ಲಿ, ಗುಂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಷ್ ಲ್ಯಾಬ್ರಡಾರ್ (English Labrador) ಸಿಂಬಾ ಇತ್ತೀಚಿಗೆ ಕೊನೆ ಉಸಿರು ಎಳೆದಿದ್ದು, ಮಾಧ್ಯಮಗಳಲ್ಲಿ (Media) ಸುದ್ದಿಯಾಗಿತ್ತು. ಹಲವಾರು ಪ್ರಾಣಿ (Animal) ಪ್ರಿಯರು ಮತ್ತು ಸಿನಿಮಾ ಪ್ರೇಕ್ಷಕರು ಸಿಂಬಾ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು. ಆದರೆ ಸಿಂಬಾನ (Simba) ಮಾಲೀಕ ವರುಣ್ ಮತ್ತು ಟ್ರೈನರ್ (Trainer) ಸ್ವಾಮಿ ಅವರಿಗೆ ಮಾತ್ರ ಇನ್ನೂ ಕೂಡ ತಮ್ಮ ಕಣ್ಮಣಿ ಸಿಂಬಾನ ನಿಧನದ ಶೋಕದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲವಂತೆ. ದಕ್ಷಿಣ ಬೆಂಗಳೂರಿನ ಬಸವನಗುಡಿಯಲ್ಲಿದ್ದ ಈ ಸಾಕು ನಾಯಿ ಸಿಂಬಾಗೆ ಕಳೆದ ಮಾರ್ಚ್‍ಗೆ 9 ವರ್ಷವಾಗಿತ್ತು. ವರುಣ್ ಬಸವನಗುಡಿಯ ನಿವಾಸಿ ಮತ್ತು ಸ್ವಾಮಿ ಅಲಿಯಾಸ್ ಮರಿ ದೇವರು ಒಬ್ಬ ಸೆಲೆಬ್ರಿಟಿ ಡಾಗ್ (Celebrity Dog) ಟ್ರೈನರ್ ಆಗಿದ್ದು, ಅದೇ ಏರಿಯಾದಲ್ಲಿ ಕೆ9 ಗುರುಕುಲ್ ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಸಿಂಬಾ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

20 ಟೆರಾಬೈಟ್‍ನಷ್ಟು ಸಿಂಬಾನ ಫೋಟೋಗಳ ಸಂಗ್ರಹ
ಸ್ವಾಮಿ ಅವರು 30 ದಿನಗಳ ಮರಿಯಾಗಿದ್ದ ಸಿಂಬಾನನ್ನು ಬೇರೆಯವರಿಂದ ತೆಗೆದುಕೊಂಡಿದ್ದರಂತೆ. ಬಳಿಕ ಅವರು ಅದನ್ನು ವರುಣ್‍ಗೆ ಸಾಕಲು ಕೊಟ್ಟಿದ್ದರು. “ಅವನು ನಮ್ಮ ಕುಟುಂಬದಲ್ಲಿ ಒಬ್ಬನಾಗಿದ್ದ” ಎನ್ನುವ ವರುಣ್ ಅವರ ಬಳಿ, ಸಿಂಬಾನ 20 ಟೆರಾಬೈಟ್‍ನಷ್ಟು ಫೋಟೋಗಳ ಸಂಗ್ರಹವಿದೆಯಂತೆ.

ಐದು ಸಿನಿಮಾಗಳಲ್ಲಿ ಮತ್ತು ನಾಲ್ಕು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಸಿಂಬಾ
ಸೂಪರ್ ಹಿಟ್ ಮಲೆಯಾಳಂ ಸಿನಿಮಾ ಬ್ಯಾಂಗಲೂರ್ ಡೇಸ್ ಮೂಲಕ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಿಂಬಾ, ನಾನು ಮತ್ತು ಗುಂಡಾ, ಶಿವಾಜಿ ಸುರತ್ಕಲ್, ಗುಲ್ಟೂ ಮತ್ತು ವಾಜಿದ್ ಸೇರಿಂದತೆ ಒಟ್ಟು ಐದು ಸಿನಿಮಾಗಳಲ್ಲಿ ಮತ್ತು ನಾಲ್ಕು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾನೆ. ಹಲವಾರು ಟೆಲಿವಿಶನ್ ಪೆಟ್ ಶೋ ಮತ್ತು ಡಾಗ್ ಶೋಗಳಲ್ಲಿ ಭಾಗವಹಿಸಿ, ಲೆಕ್ಕವಿಲ್ಲದಷ್ಟು ಬಹುಮಾನಗಳನ್ನು ಗೆದ್ದುಕೊಂಡಿದ್ದಾನೆ. ನಾನು ಮತ್ತು ಗುಂಡಾ ಸಿನಿಮಾಕ್ಕಾಗಿ, ಸಿಂಬಾಗೆ ನಾನ್ -ಹ್ಯೂಮನ್ ಕೆಟಗರಿಯಲ್ಲಿ ಉತ್ತಮ ನಟ ಪ್ರಶಸ್ತಿ ಕೂಡ ದೊರಕಿದೆ.

ಸಿಂಬಾನ ಬಗ್ಗೆ ಸ್ವಾಮಿ ಹೇಳಿದ್ದು ಹೀಗೆ
“ತಮ್ಮ ತರಬೇತಿ ಶಾಲೆಗೆ ಬಂದ ಆರಂಭದಲ್ಲಿ ಸಿಂಬಾನನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗಿತ್ತು, ವಿಪರೀತ ಚುರುಕು ಮರಿಯಾಗಿದ್ದ ಅವನು ಮಾತೇ ಕೇಳುತ್ತಿರಲಿಲ್ಲ. ಅವನ 4 ರಿಂದ 8 ನೇ ತಿಂಗಳ ವರೆಗಿನ ವಯಸ್ಸಿನಲ್ಲಂತೂ ತರಬೇತಿ ನೀಡುವುದು ತುಂಬಾ ಕಷ್ಟವಾಯಿತು. ಅದರ ನಂತರ ಮಾತು ಕೇಳತೊಡಗಿದ. ಒಂದೇ ಸಲಕ್ಕೆ, ನಿರಂತರವಾಗಿ ಡಾಗ್ ಶೋಗಳಿಗೆ ಹಾಜರಾಗುವ ವಿಧೇಯ ನಾಯಿಯಾಗಿ ಬದಲಾಗಿಬಿಟ್ಟ” ಎಂದು ಸಿಂಬಾನ ನೆನಪುಗಳನ್ನು ಬಿಚ್ಚಿಡುತ್ತಾರೆ ಸ್ವಾಮಿ.

ಇದನ್ನೂ ಓದಿ: Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

10 ತಿಂಗಳ ಮರಿಯಾಗಿದ್ದಾಗ ಮೊದಲ ಸಿನೆಮಾದಲ್ಲಿ ಅವಕಾಶ
ಸಿಂಬಾ 10 ತಿಂಗಳ ಮರಿಯಾಗಿದ್ದಾಗ 'ಬ್ಯಾಂಗಲೋರ್ ಡೇಸ್' ಸಿನಿಮಾದಲ್ಲಿ ಕಾಣಿಸಿಕೊಂಡ. ಅದಾದ ಎರಡು ಮೂರು ವರ್ಷ ಸಿಂಬಾಗೆ ಯಾವುದೇ ಸಿನಿಮಾ ಅವಕಾಶಗಳು ಸಿಗಲಿಲ್ಲವಂತೆ. ಆದರೆ ಅವನು ಡಾಗ್ ಶೋ ಮತ್ತು ಪೆಟ್ ಶೋಗಳಲ್ಲಿ ಹಾಜರಾಗುವುದನ್ನು ಮುಂದುವರೆಸಿದ. ಆ ಮಧ್ಯೆ ಸಿಂಬಾಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶಗಳು ಕೂಡ ಸಿಕ್ಕವು. ಆ ನಂತರ ಸಿಂಬಾಗೆ ಕನ್ನಡ ಸಿನಿಮಾ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಗುಂಡ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು. ರಾಘು ಹಾಸನ್ ಆ ಸಿನಿಮಾದ ನಿರ್ಮಾಪಕರಾಗಿದ್ದರು ಮತ್ತು ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಕರಾಗಿದ್ದರು.

ಸಿಂಬಾನ ಸಿನಿ ಪಯಣ
“ರಾಘು ನನಗೆ ಕರೆ ಮಾಡಿ, ಸಾಕು ಪ್ರಾಣಿಯ ಕುರಿತಾದ ಸಿನಿಮಾವೊಂದಕ್ಕೆ ಒಂದು ನಾಯಿ ಬೇಕೆಂದು ಕೇಳಿದರು. ನಾನು ಅವರಿಗೆ ಮೂರು ನಾಯಿಗಳನ್ನು ತೋರಿಸಿದೆ; ರಾಕಿ, ಸಿಂಬಾ ಮತ್ತು ಇನ್ನೊಂದು ನಾಯಿ. ನಾಯಿಯ ‘ವಿಭಿನ್ನ’ ಎನರ್ಜಿ ಮತ್ತು ವಿಶೇಷ ಲಕ್ಷಣಗಳಿಂದ ಆಕರ್ಷಿತರಾದ ರಾಘು, ಒಂದೇ ಕ್ಷಣದಲ್ಲಿ ಸಿಂಬಾನನ್ನು ಆಯ್ಕೆ ಮಾಡಿಕೊಂಡರು. ಶೂಟಿಂಗ್ ಸಮಯದಲ್ಲಿ ಸುತ್ತ ನೂರಾರು ಜನರು ನೆರೆದಿದ್ದರೂ ಕೂಡ, ಸಿಂಬಾ ಏಕಾಗ್ರತೆಯಿಂದ ಮತ್ತು ಯಾವುದೇ ಕಷ್ಟವಿಲ್ಲದೆ ತನ್ನ ಶಾಟ್‍ಗಳನ್ನು ಮುಗಿಸಿದ್ದ. ನಾಯಿಯ ನಟನೆಯನ್ನು ನಿರ್ದೇಶಕರು ಒಂದೇ ಟೇಕ್‍ನಲ್ಲಿ ಓಕೆ ಮಾಡುತ್ತಿದ್ದರು” ಎಂದು ಸಿಂಬಾನ ಸಿನಿ ಪಯಣದ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಸ್ವಾಮಿ.

ಇದನ್ನೂ ಓದಿ: Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್

ನಾನು ಮತ್ತು ಗುಂಡಾದಲ್ಲಿ ಅವನ ಜೊತೆ ನಟಿಸಿದ್ದ ಶಿವರಾಜ್ ಕೆಆರ್ ಪೇಟೆ ಅವರು, ಸಿಂಬಾನ ಮರಣದ ಬಳಿಕ, “ಸಿಂಬಾ ನಮ್ಮ ಜೊತೆ ನಟಿಸಲಿಲ್ಲ, ಅಸಲಿಗೆ ನಾವು ಅವನ ಜೊತೆ ನಟಿಸಿದೆವು” ಎಂದು ಹೇಳಿಕೊಂಡಿದ್ದರು. ಮಾರ್ಚ್‍ನಲ್ಲಿ 9ನೇ ವರ್ಷಕ್ಕೆ ಕಾಲಿಟ್ಟ ಬಳಿಕ ಸಿಂಬಾನಿಗೆ ಉಣ್ಣಿ ಜ್ವರ ಕಾಣಿಸಿಕೊಂಡಿತ್ತು. ವರುಣ್, ಅವನನ್ನು ಸುಮಾರು 20 ದಿನಗಳ ವರೆಗೆ ಪಶು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಆದರೆ ಸಿಂಬಾ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಮೇ 9 ರಂದು ಸಿಂಬಾ ಕೊನೆ ಉಸಿರು ಎಳೆದ.
Published by:Ashwini Prabhu
First published: